*ರಿಪ್ಲೇಟಿಂಗ್ ಸ್ಟಿಕರ್ ಗಳನ್ನು ವಾಹನಗಳಿಗೆ ಅಂಟಿಸುವ ಅಭಿಯಾನ*
ಆನಂದಪುರ: ಶಿವಮೊಗ್ಗ ಜಿಲ್ಲಾದ್ಯಂತ ರಿಪ್ಲೇಟಿಂಗ್ ಸ್ಟಿಕರ್ ಗಳನ್ನು ವಾಹನಗಳಿಗೆ ಅಂಟಿಸುವ ಅಭಿಯಾನವನ್ನು ನಾವು ಮಾಡುತ್ತಿದ್ದೇವೆ ಎಂದು ಎಸ್. ಪಿ ಮಿಥುನ್ ಕುಮಾರ್ ತಿಳಿಸಿದರು.
ಇವರು ಆನಂದಪುರ ಪೊಲೀಸ್ ಠಾಣೆ ಮುಂಭಾಗದಲ್ಲಿ ರಿಪ್ಲೇಟಿಂಗ್ ಸ್ಟಿಕರ್ ಗಳನ್ನು ವಾಹನಗಳಿಗೆ ಹಚ್ಚುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು.
ಕಳೆದ ವರ್ಷ ನಮ್ಮ ಶಿವಮೊಗ್ಗ ಜಿಲ್ಲೆಯಲ್ಲಿ 363 ಜನ ರಸ್ತೆ ಅಪಘಾತದಲ್ಲಿ ಮರಣವನ್ನು ಹೊಂದಿದ್ದಾರೆ. ಇದನ್ನು ಕೂಲಂಕುಶವಾಗಿ ಆಳವಾಗಿ ತನಿಖೆ ಮಾಡಿ ನೋಡಿದಾಗ ಈ ಅಪಘಾತಗಳೆಲ್ಲ ರಾತ್ರಿ ಸಮಯದಲ್ಲೇ ಹೆಚ್ಚು ಸಂಭವಿಸಿದ್ದು ಎಂದು ನಮಗೆ ತಿಳಿಯಿತು.
ಇದಕ್ಕೆಲ್ಲ ಮುಖ್ಯ ಕಾರಣ ವಾಹನಗಳಿಗೆ ರಿಪ್ಲೇಟಿಂಗ್ ಸ್ಟಿಕರ್ ಇಲ್ಲದೆ ಇರುವುದು ಇದರ ಮೂಲ ಸಮಸ್ಯೆ ಎಂದು ನಾವು ಅರಿತುಕೊಂಡೆವು. ಇದರಿಂದ ಪ್ರತಿ ವಾಹನಗಳ ಹಿಂದೆ ರಿಪ್ಲೇಟಿಂಗ್ ಸ್ಟಿಕರ್ ಅನ್ನು ಅಳವಡಿಸಿ ರಾತ್ರಿಯ ಸಮಯದಲ್ಲಿ ವಾಹನಗಳ ಅಪಘಾತವನ್ನು ತಡೆಗಟ್ಟುವುದು ನಮ್ಮ ಉದ್ದೇಶವಾಗಿದೆ ಎಂದರು.
ಈ ಸಮಯದಲ್ಲಿ ಸಾಗರದ ಡಿವೈಎಸ್ಪಿ ಗೋಪಾಲ್ ಕೃಷ್ಣ ನಾಯಕ್, ಸರ್ಕಲ್ ಇನ್ಸ್ಪೆಕ್ಟರ್ ಸಂತೋಷ್ ಶೆಟ್ಟಿ ಮತ್ತು ಆನಂದಪುರ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಯುವರಾಜ್ ಕಂಬಳಿ ಮತ್ತು ಸಿಬ್ಬಂದಿ ವರ್ಗದವರು ಇದ್ದರು.

Leave a Comment