2025-2026 ನೇ ಸಾಲಿನ ಕರ್ನಾಟಕದ ಬಜೆಟ್ ನ್ನು ವಿಶ್ಲೇಷಣೆ ಮಾಡಿದ ಪ್ರಮೋದ್ ಕುಮಾರ್. ಪಿ

2025-2026 ನೇ ಸಾಲಿನ ಕರ್ನಾಟಕದ ಬಜೆಟ್  ವಿಶ್ಲೇಷಣೆ:ಪ್ರಮೋದ್ ಕುಮಾರ್. ಪಿ
ಪ್ರಮೋದ್ ಕುಮಾರ್. ಪಿ,ಅರ್ಥಶಾಸ್ತ ವಿಭಾಗ,ಕುವೆಂಪು ವಿಶ್ವ ವಿದ್ಯಾಲಯ.ಶಿವಮೊಗ್ಗ

ಪಂಚ ಗ್ಯಾರೆಂಟಿಗಳ ಉಚಿತ ಭಾಗ್ಯಗಳಿಂದ ಆರ್ಥಿಕ ಸಂಕಷ್ಟದ ಮಧ್ಯದಲ್ಲಿಯೂ ಸನ್ಮಾನ್ಯ ಮಾನ್ಯ ಮುಖ್ಯಮಂತ್ರಿಗಳು ಶ್ರೀ ಸಿದ್ದರಾಮಯ್ಯನವರು ಕರ್ನಾಟಕದ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಹಾಗೂ ಒಟ್ಟು ೧೬ ಬಾರಿ ಬಜೆಟ್ ಮಂಡಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ 

೨೦೨೫- ೨೬ನೇ ಸಾಲಿನ ವಾರ್ಷಿಕ ಬಜೆಟನ್ನು ಗಮನಿಸಿದರೆ. "ಅಯ್ಯ ವ್ಯಯ ಎನ್ನುವುದು ಕೂಡಿ ಕಳೆಯುವ ಅಂಕಿ ಸಂಖ್ಯೆಗಳ  ನಿರ್ಜೀವ ಆಟವಲ್ಲ, ಏಳು ಕೋಟಿ ಜನರ ಬದುಕಿನ ಭರವಸೆಯ ಉಸಿರು ಎಂಬ ಅರವಿನೊಂದಿಗೆ   ನಮ್ಮ  ಸಂಕಲ್ಪವನ್ನು ಜನರ ಮುಂದಿರಿಸುವ  ಜವಾಬ್ದಾರಿಯೊಂದಿಗೆ ನಿಮ್ಮ ಮುಂದೆ ನಿಂತಿದ್ದೇನೆ" ಎಂಬ ಸಂಕಲ್ಪದೊAದಿಗೆ 'ರಾಷ್ಟ್ರಕವಿ ಕುವೆಂಪುರವರ ನಮ್ಮ ಕೈ ಬುಟ್ಟಿಯಲ್ಲಿ ಸಿಡಿಲ ಗೂಡಿಹದು ಹುಡುಕಿ ನೋಡಿದರಲ್ಲಿ ಸಮಾದಬೀಡಿಹುದು' ಎಂಬ ಕವಿತೆಯನ್ನು ಮುನ್ನುಡಿಯಾಗಿ ಹಾಡುತ್ತಾ. ೩ ಗಂಟೆ ೩೦ ನಿಮಿಷಗಳ ಕಾಲ ಸುದೀರ್ಘವಾಗಿ ಮಂಡಿಸಿದ ಬಜೆಟ್ ನ ಮುಖ್ಯ ಅಂಶಗಳನ್ನು ನೋಡುವುದಾದರೆ ಈ ಬಾರಿಯ ವಾರ್ಷಿಕ ಬಜೆಟ್ ೪,೦೯,೫೪೯ ಕೋಟಿಗಾತ್ರದ ಮುಂಗಡ ಪತ್ರ ಮಂಡಿಸಲಾಗಿದ್ದು. ಕಳೆದ ಬಾರಿ ಮುಂಗಡಪತ್ರಕ್ಕಿಂತ ಗಾತ್ರದಲ್ಲಿ ಏರಿಕೆಯಾದದ್ದನ್ನು ಸಾಮಾನ್ಯವಾಗಿ ಕಾಣಬಹುದು. ಸರ್ಕಾರಕ್ಕೆ ಒಟ್ಟು ೨,೯೨,೪೭ ಕೋಟಿ ತೆರಿಗೆ ಹಾಗೂ ತೆರಿಗೇತರ ಮೂಲಗಳಿಂದ ಆದಾಯ ಸಂಗ್ರಹಣೆಯಾಗಿದ್ದು. ಕೊರತೆ ಹಣವನ್ನು ವಿವಿಧ ಮೂಲಗಳಿಂದ ೧.೧೬ ಲಕ್ಷ ಕೋಟಿ ಸಾಲವನ್ನು ಪಡೆಯಲಾಗಿದೆ.  ಸರ್ವೇ ಸಾಮಾನ್ಯವಾಗಿ ವಿತ್ತಿಯ ಕೊರತೆಯ ಬೆಜೆಟ್ ಆಗಿದೆ. 

"ಶಿಕ್ಷಣದ ಸುಧಾರಣೆಯಿಂದ ದೇಶದ ಅಭಿವೃದ್ಧಿ ಮತ್ತು ಸಮಾಜ ಸುಧಾರಣೆ ಸಾಧ್ಯ ಎಂಬAತೆ" ಈ ಬಾರಿಯ ಬಜೆಟ್ ನಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಒತ್ತನ್ನು ನೀಡಲಾಗಿದ್ದು, ಕೃಷಿ, ಕೈಗಾರಿಕೆ, ಬ್ರಾಂಡ್ ಬೆಂಗಳೂರು, ಗ್ರಾಮೀಣ ಅಭಿವೃದ್ಧಿ, ಹೈನುಗಾರಿಕೆ, ಆರೋಗ್ಯ, ನಿರಾವರಿ ಕಂದಾಯ  ಇಲಾಖೆ, ಸಮಾಜ ಕಲ್ಯಾಣ ಮತ್ತು ಮಹಿಳಾ ಸಬಲೀಕರಣ ಹಾಗೂ ನೂತನ ಯೋಜನೆಗಳಿಗೆ ಕ್ಷೇತ್ರವಾರು ಹಂಚಿಕೆ ಮಾಡಲಾಗಿದೆ       
      ಶಿಕ್ಷಣ ಇಲಾಖೆಗೆ ೪೫,೨೮೬ ಕೋಟಿ, ಇಂಧನ ೨೬೮೯೬ ಕೋಟಿ, ನೀರಾವರಿ ೨೨,೧೮೧ ಕೋಟಿ, ಆರೋಗ್ಯ ೧೭,೪೭೩ ಕೋಟಿ, ಕಂದಾಯ ೧೭,೨೦೧ಕೋಟಿ, ಸಮಾಜ ಕಲ್ಯಾಣ ಇಲಾಖೆ ೧೯,೯೫೫ ಕೋಟಿ ಪ್ರಮುಖ ವಲಯವಾರು ಹಣ ಹಂಚಿಕೆ ಚಿಕೆಯನ್ನು ಕಾಣಬಹುದು. ಇವುಗಳಲ್ಲಿ ಮುಂದಿನ ಭವಿಷ್ಯದ ಹಿತದೃಷ್ಟಿಯಿಂದ ಅಗತ್ಯವಾದ ಶಿಕ್ಷಣಕ್ಕೆ ಹೆಚಿನ್ನು ಮಹತ್ವ ನೀಡಿರುವುದು ಪ್ರಶಂಸನೀಯ.      
                
ಶಿಕ್ಷಣಕ್ಕೆ ಪ್ರಾಶಸ್ತ್ಯ : ನೂತನ ಯೋಜನೆಯಾದ ೫೦೦ ಹೊಸ ಕರ್ನಾಟಕ ಪಬ್ಲಿಕ್ ಶಾಲೆಗಳ ಪ್ರಾರಂಭ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಖಾಲಿ ಇರುವ ೫೨೬೭ ಶಿಕ್ಷಕರ ಹುದ್ದೆಗಳ ಭರ್ತಿ, ಅತಿಥಿ ಉಪನ್ಯಾಸಕರಿಗೆ ಗೌರವ ೨೦೦೦ ಸಹಾಯಧನ ಹೆಚ್ಚಳ, ಅಂತರಾಷ್ಟ್ರೀಯ ಕ್ರೀಡಾಪಟುಗಳಿಗೆ ೨೫% ಹಾಜರಾತಿ ಮೀಸಲಾತಿ, ಮದರಸಗಳಲ್ಲಿ ಧಾರ್ಮಿಕ ಶಿಕ್ಷಣದ ಜೊತೆಗೆ ಔಪಚಾರಿಕ ಶಿಕ್ಷಣ, ಆರೋಗ್ಯ ಶಿಕ್ಷಣಕ್ಕೆ ಸಂಬAಧಿಸಿದ ಎಂಡೋ ಕ್ರೈನೋಲಜಿ ಕೇಂದ್ರ ಸ್ಥಾಪನೆ, ಯಲಬುರ್ಗಿ ಜೇವರ್ಗಿ ಮತ್ತು ಯಾದಗಿರಿ ನರ್ಸಿಂಗ್ ಕಾಲೇಜ್ಗಳ ಸ್ಥಾಪನೆ, ಅಲ್ಪಸಂಖ್ಯಾತ ಮಹಿಳೆಯರ ಶಿಕ್ಷಣ ಹಾಗೂ ವಸತಿ ನಿಲಯಗಳ ನಿರ್ಮಾಣ, ಇಂಗ್ಲೆAಡ್ ಕೊಲಂಬಿಯಾ ಸೇರಿದಂತೆ ವಿದೇಶಿ ವ್ಯಾಸಂಗಕ್ಕೆ ಪ್ರೋತ್ಸಾಹ ಧನ, ೨೫೦೦ ಪ್ರಥಮ ದರ್ಜೆ ಕಾಲೇಜುಗಳ ಉನ್ನತೀಕರಣ, ವಿದ್ಯಾರ್ಥಿ ವೇತನಕ್ಕೆ ೧೨೦ ಕೋಟಿ, ೧೬ ಮಹಿಳಾ ಕಾಲೇಜುಗಳ ಸ್ಥಾಪನೆ, ಮಹಾಬೋಧಿ ಗ್ರಂಥಾಲಯವನ್ನು  ಡಿಜಿಟಲೀಕರಣ ಹಾಗೂ ಅಭಿವೃದ್ಧಿಗೆ ಒಂದು ಕೋಟಿ ಮೀಸಲಿಡಲಾಗಿದೆ. ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಪ್ರಸಿದ್ಧ ಆರ್ಥಿಕ ಮನಮೋಹನ್ ಸಿಂಗ್ ಅವರ ಹೆಸರನ್ನು ಇಡಲಾಗಿದೆ. ಬೌದ್ಧ ಅಧ್ಯಯನ ಅಕಾಡಮಿ ಸ್ಥಾಪನೆ, ಮಾತೃಭಾಷೆಯ ಜೊತೆಗೆ ಆಂಗ್ಲ ಭಾಷೆಯ ಕೌಶಲ್ಯ ಬೆಳೆಸಲು ನಾಲ್ಕು ಸಾವಿರ ಶಾಲೆಗಳಲ್ಲಿ ದ್ವಿಭಾಷಾ ಪ್ರಾರಂಭ. ಶಾಲಾ ಕಾಲೇಜುಗಳಲ್ಲಿ ಶೌಚಾಲಯ ನಿರ್ಮಾಣ ಮತ್ತು ದುರಸ್ತಿ ಕಾರ್ಯಗಳಿಗೆ ೭೨೫ ಕೋಟಿ ಪೀಠೋಪಕರಣ ಒದಗಿಸಲು ೫೦ ಕೋಟಿ ಬಿಡುಗಡೆ ಮುಂತಾದವು ಸೇರಿದಂತೆ ಶಿಕ್ಷಣಕ್ಕೆ ನೀಡಿರುವ ಆದ್ಯತೆಯನ್ನು ಪ್ರಮುಖವಾಗಿ ಕಾಣಬಹುದು.

ಕೃಷಿ: ಅನ್ನದಾತರ ಮುಖದಲ್ಲಿ ಮಂದಹಾಸ ರೈತ ಸಮೃದ್ಧಿ ಯೋಜನೆಗೆ ೪೨೮ ಕೋಟಿ, ಕೃಷಿ ಯಾಂತ್ರಿಕರಣ ಕಾರ್ಯಕ್ರಮದಲ್ಲಿ ೪೮೨ ಕೋಟಿ ವೆಚ್ಚದಲ್ಲಿ ೫೦,೦೦೦ ರೈತರಿಗೆ ಸಹಾಯಧನ. ಕೃಷಿ ಮತ್ತು ತೋಟಗಾರಿಕೆ ಇಲಾಖೆಗೆ ೧.೮೧ ಲಕ್ಷ ಕೋಟಿ ರೈತರಿಗೆ ೪೪೦ ಕೋಟಿ ಸಹಾಯಧನ, ತೊಗರಿ ಉತ್ಪಾದನಾ ಉತ್ತೇಜನಕ್ಕೆ ೮೮ ಕೋಟಿ, ರಾಜ್ಯದಲ್ಲಿ ೫೦೦೦ ಕಿರು ಸಂಸ್ಕರಣ ಘಟಕಗಳ ಸ್ಥಾಪನೆ, ಕೃಷಿ ಭಾಗ್ಯ ಯೋಜನೆ ೧೨,೦೦೦ ವಂಡಗಳ ನಿರ್ಮಾಣ,  ಕೃಷಿ ತೀರ್ಮಾನಗಳ ಕೈಗೊಳ್ಳಲು ಡಿಜಿಟಲ್ ಕೃಷಿ ಸೇವೆಗಳ ಕೇಂದ್ರ ಸ್ಥಾಪನೆ, ರೈತರ ಕಲ್ಯಾಣ  ಯೋಜನೆಗಳಿಗೆ ೫೧,೩೩೯ ಕೋಟಿ. ಕಲ್ಯಾಣ ಕರ್ನಾಟಕದಲ್ಲಿ ೬೦ ಕೋಟಿ ವೆಚ್ಚದಲ್ಲಿ ಗ್ರಾಮೀಣ ಉಗ್ರಾಣಗಳ ನಿರ್ಮಾಣ, ಮಂಡ್ಯ ಕೃಷಿ ವಿಶ್ವವಿದ್ಯಾಲಯಕ್ಕೆ ೨೫ ಕೋಟಿ ಅನುದಾನಗಳು ಪ್ರಮುಖವಾಗಿವೆ       
            
ಆರೋಗ್ಯ : ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆ ೫ ಲಕ್ಷದವರೆಗೆ ಉಚಿತ ಆರೋಗ್ಯ ಸೇವೆ, ನಿಮ್ಮ ಆಸ್ಪತ್ರೆಗಳಿಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಲು ೫೧ ಕೋಟಿ ರೂ ಅನುದಾನ, ಆಶಾ ಕಿರಣ ರಾಷ್ಟ್ರೀಯ ಅಂದತ್ವ ನಿವಾರಣ ಕಾರ್ಯಕ್ರಮದಡಿ ೧.೪ ಕೋಟಿ ಜನರಿಗೆ ಕಣ್ಣಿನ ತಪಾಸಣೆ, ಕೊಪ್ಪಳದಲ್ಲಿ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ, ಮೈಸೂರಿನಲ್ಲಿ ನಿಮಾನ್ಸ್ ಮಾದರಿ ಆಸ್ಪತ್ರೆ ಸ್ಥಾಪನೆ, ರಾಯಚೂರಿನಲ್ಲಿ ೫೦ ಕೋಟಿ ವೆಚ್ಚದಲ್ಲಿ ಕಿದ್ವಾಯಿ ಪೇರಿ ಪೆರೆಲ್ ಕ್ಯಾನ್ಸರ್ ಚಿಕಿತ್ಸೆ ಘಟಕ ಸ್ಥಾಪನೆ ಸೇರಿದಂತೆ ಪ್ರಮುಖ ಆರೋಗ್ಯ ಕಾರ್ಯಕ್ರಮಗಳಾಗಿವೆ.
ಕೈಗಾರಿಕೆ ಹೂಡಿಕೆ ಮತ್ತು ಉದ್ಯೋಗ ಸೃಷ್ಟಿ : ಕರ್ನಾಟಕದ ಕೈಗಾರಿಕಾ ಹೂಡಿಕೆ ಸಮಾವೇಶದ ೩೦ ಉದ್ದೇಶಗಳನ್ನು ಆಧಾರಿಸಿ ೭.೫ ಕೋಟಿ ಹೂಡಿಕೆಯನ್ನು ಮಾಡಲಾಗಿದ್ದು ೨೦ ಲಕ್ಷ ಉದ್ಯೋಗ ಸೃಷ್ಟಿಯನ್ನು ಈ ಕಾರ್ಯಕ್ರಮದ ಉದ್ದೇಶವಾಗಿದೆ, ಈ  ಹೂಡಿಕೆಯೂ ೨೦೨೫ ಮತ್ತು ೩೦ನೇ ವರ್ಷದಲ್ಲಿ  ಶೇಕಡ ೧೨% ಕೈಗಾರಿಕೆ ಬೆಳವಣಿಯನ್ನು ಆಧರಿಸಿದೆ. ಬೆಂಗಳೂರಿನಲ್ಲಿ ಎಲೆಕ್ಟ್ರಿಕಲ್ ವಾಹನಗಳನ್ನು ಉತ್ಪಾದಿಸಲು ಮತ್ತು ಉತ್ತೇಜಿಸಲು ೨೨೫ ಕೋಟಿ ಹೂಡಿಕೆ ಮಾಡಲಾಗಿದೆ, ಫಾಕ್ಸ ಕಾನ್ ಮೊಬೈಲ್ ಘಟಕಗಳ ಉತ್ಪಾದನೆ ಘಟಕಕ್ಕೆ ೨೧,೯೫೫ ಕೋಟಿ ಹೂಡಿಕೆ ಮಾಡಿದ್ದು ೫೦,೦೦೦ ಉದ್ಯೋಗಗಳ ನಿರೀಕ್ಷೆಯಲ್ಲಿದೆ, ಕರ್ನಾಟಕ ಕ್ಲೀನ್ ಮೊಬೈಲ್ ಟಿ ಪಾಲಿಸಿ ೨.೫೦ಲಕ್ಷ ಕೋಟಿ ಹೂಡಿಕೆ ಮಾಡಲಾಗಿದ್ದು ೧ ಲಕ್ಷಗಳ ಉದ್ಯೋಗಗಳ ಗುರಿಯನ್ನು ಹೊಂದಿದೆ. ಹೊಸ ಜವಳಿ ನೀತಿ ೨೦೨೫ ರಿಂದ ೩೦ರ ವರ್ಷದ ಒಳಗೆ ೨ ಲಕ್ಷ ಉದ್ಯೋಗಗಳ ಸೃಷ್ಟಿ ಸೇರಿದಂತೆ ಪ್ರಮುಖ ಕೈಗಾರಿಕಾ ನೀತಿ ಕಾರ್ಯಕ್ರಮಗಳಾಗಿವೆ.
ನಗರಾಭಿವೃದ್ಧಿ ಮತ್ತು ಗ್ರಾಮೀಣ ಅಭಿವೃದ್ಧಿ : ನಗರಾಭಿವೃದ್ಧಿಗೆ ಹೆಚ್ಚಿನ ಮಹತ್ವ ನೀಡಲಾಗಿದ್ದು ಬ್ರಾಂಡ್ ಬೆಂಗಳೂರು ಕಾರ್ಯಕ್ರಮದಡಿಯಲ್ಲಿ ೧,೮೦೦ ಕೋಟಿ ಮೀಸಲಿಡಲಾಗಿದೆ. ಬೆಂಗಳೂರು ಭದ್ರತೆಗೆ ಹೆಚ್ಚಿನ ಆದ್ಯತೆಯೊಂದಿಗೆ ಬೆಂಗಳೂರಿ ನಗರದಲ್ಲಿ ವ್ಯವಸ್ಥಿತ ಒಳಚರಂಡಿ ಜಾಲ ಮತ್ತು ಎಸ್ ಟಿ ಪಿ ನಿರ್ಮಿಸಲು ೩೦೦೦ ಕೋಟಿ ಆರ್ಥಿಕ ನೆರವು, ೯೮.೬೦ ಕಿಲೋಮೀಟರ್ ನಮ್ಮ ಮೆಟ್ರೋಜಾಲ ಅಭಿವೃದ್ಧಿ, ವರ್ತೂರು ಮತ್ತು ಬೆಳ್ಳಂದೂರು ಕೆರೆಗಳ ಪುನರ್ಜೀವನ ಕಾಮಗಾರಿಗೆ ೨೩೪ ಕೋಟಿ, ದೇವನಹಳ್ಳಿಯ ೪೦೦ ೭ ಎತ್ತರ ಪ್ರದೇಶದಲ್ಲಿ ಅತ್ಯಾಧುನಿಕ ಬೆಂಗಳೂರು ಸಿಗ್ನೇಚರ್ ಬಿಸಿನೆಸ್ ಪಾರ್ಕ್ ಅಭಿವೃದ್ಧಿಗೆ ೫೦ ಕೋಟಿ ಬಿಡುಗಡೆ. ಬೆಂಗಳೂರು ಸೇಫ್ ಸಿಟಿಗೆ ೬೬೭ ಕೋಟಿ ಬೆಂಗಳೂರುನಾದ್ಯAತ ೨೫೦೦ ಸಿಸಿ ಕ್ಯಾಮರಗಳ ಅಳವಡಿಕೆ ಸೇರಿದಂತೆ ಬೆಂಗಳೂರು ಅಭಿವೃದ್ಧಿಗೆ ಹೆಚ್ಚಿನ ಮನ್ನಣೆಯನ್ನು ನೀಡಲಾಗಿದೆ. ಗ್ರಾಮೀಣ ಅಭಿವೃದ್ಧಿಯನ್ನು ನೋಡುವುದಾದರೆ ೫೨೦೦ ಕೋಟಿ ಅನುದಾನ ನೀಡಲಾಗಿದ್ದು. ಪ್ರಗತಿಪತ ಯೋಜನೆ ಅಡಿಯಲ್ಲಿ ಗ್ರಾಮೀಣ ರಸ್ತೆಗಳ ರಾಜ್ಯದ ಪ್ರಮುಖ ರಸ್ತೆಗಳೊಂದಿಗೆ ಜೋಡಣೆ ಯೋಜನೆಯಾಗಿದ್ದು ಗುಣಮಟ್ಟದ ರಸ್ತೆಗಳ ನಿರ್ಮಾಣ ಕಾರ್ಯಕ್ಕೆ ೫,೨೦೦ ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಐದು ಸಾವಿರ ಕಿಲೋಮೀಟರ್ ರಾಜ್ಯ ಹಾಗೂ ಜಿಲ್ಲಾ ರಸ್ತೆ ಸಂಪರ್ಕದೊAದಿಗೆ ಗ್ರಾಮೀಣ ರಸ್ತೆಗಳ ಅಭಿವೃದ್ಧಿ ಕೃಷಿ ಪದ್ಧತಿ ಯೋಜನೆ ಅಡಿಯಲ್ಲಿ ಹೊಲಗದ್ದೆಗಳಲ್ಲಿ ರಸ್ತೆಗಳ ನಿರ್ಮಾಣ ಪ್ರಮುಖ ಗ್ರಾಮೀಣ ಅಭಿವೃದ್ಧಿಯ ಯೋಜನೆಗಳಾಗಿವೆ.

ಅಲ್ಪಸಂಖ್ಯಾತರ ದೃಷ್ಟಿಯಿಂದ ನೋಡುವುದಾದರೆ, ಜೈನ ಬೌದ್ಧ ಸಿಖ್ ಸಮುದಾಯದ ಅಭಿವೃದ್ಧಿಗೆ ೧೦೦ ಕೋಟಿ ರೂ ಮೀಸಲಿಡಲಾಗಿದೆ. ಕ್ರಿಶ್ಚಿಯನ್ ಸಮುದಾಯದ ಅಭಿವೃದ್ಧಿ ೨೫೦ ಕೋಟಿಯನ್ನು ಬಿಡುಗಡೆ ಮಾಡಲಾಗಿದೆ. ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದವರಿಗೆ ವಕ್ಫ್ ಆಸ್ತಿಯ ರಕ್ಷಣೆಯಲ್ಲಿ ಹಾಗೂ ಟೆಂಡರ್ ಗಳ ಪ್ರಕ್ರಿಯೆಯಲ್ಲಿ ಅನುಕೂಲಕರ ಸೌಲಭ್ಯವನ್ನು ಒದಗಿಸಲಾಗಿದೆ.      
              
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಕಾರ್ಯಕ್ರಮಗಳಿಗೆ ೯೪.೦೮೪ ಕೋಟಿ ಹಣವನ್ನು ಮೀಸಲಿಡಲಾಗಿದೆ. ಮಕ್ಕಳ ಉದ್ದೇಶದ ಕಾರ್ಯಕ್ರಮಗಳಿಗೆ ೬೨,೦೩೩ ಕೋಟಿ, ಹಸಿವು ಮುಕ್ತ ಕರ್ನಾಟಕ ಅನ್ನಭಾಗ್ಯ ಯೋಜನೆ ಅಡಿ ಸಹಾಯಧನ ಬದಲಾಗಿ ೫ ಕೆಜಿ ಅಕ್ಕಿ ಹೆಚ್ಚುವರಿ ವಿತರಣೆ. ' ಅನ್ನಸುವಿದ ' ಯೋಜನೆ ಅಡಿಯಲ್ಲಿ ೭೫ ವರ್ಷ ಮೇಲ್ಪಟ್ಟವರಿಗೆ ಆಹಾರ ಧಾನವನ್ನು ಮನೆ ಬಾಗಿಲಿಗೆ ವಿತರಣೆ ಮಾಡುವ ನೂತನ ಕಾರ್ಯಕ್ರಮವನ್ನು ಜಾರಿಗೊಳಿಸಲಾಗಿದೆ. ಅಲ್ಪಸಂಖ್ಯಾತರ ಸಮುದಾಯದ ಅಭ್ಯುದಯ ಉರ್ದು ಮಾಧ್ಯಮದ ಶಾಲೆಗಳ ಉನ್ನತೀಕರಣ, ಅಲ್ಪಸಂಖ್ಯಾತರ ವಾಸಿಸುವ ಮೂಲಸೌಕರ್ಗಳಿಗೆ ಒಂದು ಸಾವಿರ ಕೋಟಿ ರೂ ಅನುದಾನ, ಇಂದು ಧಾರ್ಮಿಕ ಕೇಂದ್ರಗಳ 'ಭೂವರಹ' ಯೋಜನೆ ಅಡಿ ಸ್ಥಿರಾಸ್ತಿಗಳ ದಾಖಲೀಕರಣ, ಕರ್ನಾಟಕ ದೇವಾಲಯಗಳ ವಸತಿ ಕೋಶ ಸ್ಥಾಪನೆ, ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ೫೦೦೦ ಕೋಟಿ ಮೀಸಲಿಡಲಾಗಿದೆ.ಕೂಲಿ ಕಾರ್ಮಿಕ ವಿಮಾ ಸೌಲಭ್ಯ. ಕೆಲಸದಲ್ಲಿ ನಿರತರದ ಕಾರ್ಮಿಕರ ಮರಣದ ಪರಿಹಾರ ಯೋಜನೆ.ನೂರು ನೂತನ ನಾಡ ಕಛೇರಿಗಳ ಸ್ಥಾಪನೆ.ವಿಜಯಪುರದಲ್ಲಿ ನೂತನ ವಿಮಾನ  ನಿಲ್ದಾಣದ ಸ್ಥಾಪನೆ, ಎತ್ತಿನ ಹೊಳೆ ಯೋಜನೆ ಅಡಿ ಎಲ್ಲಾ ವಿಯರ್ ಗಳಲ್ಲಿ ಲಭ್ಯವಾಗುವ ನೀರನ್ನು ಕಾಲುವೆಯ ಸರಪಳಿ ೨೪೧ ಕಿಲೋಮೀಟರ್ವರೆಗೆ ಹರಿಸಲು ಕ್ರಮ. ಭದ್ರ ಮೇಲ್ದಂಡೆ ಯೋಜನೆ ಪೂರ್ಣಗೊಳಿಸಲು ೨.೬೧೧ ಕೋಟಿ, ಕೃಷ್ಣ ಮೇಲ್ದಂಡೆ ಯೋಜನೆ, ಕಳಸ ಬಂಡೂರಿ, ಎತ್ತಿನ ಹೊಳೆ ಯೋಜನೆಗಳ ಕ್ರಮ ಪ್ರಮುಖವಾಗಿವೆ. ಚಿತ್ರರಂಗವನ್ನು ಉದ್ಯಮವಾಗಿ ಪರಿಗಣಿನೆ ಮೈಸೂರಲ್ಲಿ ಫಿಲಂ ಸಿಟಿ ನಿರ್ಮಾಣ. ಪ್ರವಾಸೋದ್ಯಮ ಮೂಲ ಸೌಕರ್ಯ ಅಭಿವೃದ್ಧಿ ಸೇರಿದಂತೆ ಎಲ್ಲಾ ವಲಯಗಳಲ್ಲಿ ಸೇರಿದಂತೆ ಪ್ರಮುಖವಾಗಿ ಈ ಬಜೆಟ್ ನಲ್ಲಿ ಗಮನಿಸಬಹುದಾಗಿದೆ.
ಎಲ್ಲಾ ವಲಗಳ ಉದ್ದೇಶವಾಗಿಟ್ಟುಕೊಂಡು ಮಂಡಿಸಲಾದ ತಾಯಿ ಬಜೆಟ್ ನಲ್ಲಿ ಶಿಕ್ಷಣಕ್ಕೆ ನೀಡಿದಂತಹ ಆದ್ಯತೆಯನ್ನು  ಎಲ್ಲರೂ ಮೆಚ್ಚಿಕೊಳ್ಳುವಂತದ್ದು. ಬ್ರಾಂಡ್ ಬೆಂಗಳೂರು, ನಗರ ಅಭಿವೃದ್ಧಿ ಪರಿಕಲ್ಪನೆ ಅಲ್ಪಸಂಖ್ಯಾತರ ದೃಷ್ಟಿಯಿಂದ, ಕೈಗಾರಿಕೆ ಮತ್ತು ಉದ್ಯೋಗ ಸೃಷ್ಟಿ ಕೌಶಲ್ಯಗಳ ಅಭಿವೃದ್ಧಿ ಪ್ರವಾಸೋದ್ಯಮ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಳ ಸೇರಿದಂತೆ ಆದ್ಯತೆ ನೀಡಲಾಗಿದ್ದು. ಬೆಂಗಳೂರು ನಗರವನ್ನು ಹೊರತುಪಡಿಸಿ ಉಳಿದಂತಹ ಸ್ಮಾರ್ಟ್ ಸಿಟಿಗಳ ಅಭಿವೃದ್ಧಿ ಯಾವುದೇ ಕ್ರಮಗಳನ್ನು ಕೈಗೊಳ್ಳಲಾಗಿಲ್ಲ. ದಿನನಿತ್ಯದ ವಸ್ತುಗಳ ಬೆಲೆಯಲ್ಲಿ ಇಳಿಕೆಯಾಗದಿರುವುದು. ಸೇವಾ ನಿರತ ವರ್ಗದವರ ಮೇಲಿನ ಅಧಿಕ ತೆರಿಗೆ, ಎರಡನೇ ಬೆಂಗಳೂರ್ ಎಂದೇ ಪ್ರಸಿದ್ಧವಾಗಿರುವ ದಾವಣಗೆರೆಗೆ ವಿಮಾನದ ನಿಲ್ದಾಣ ಕನಸಾಗೆ ಉಳಿದಿದೆ.   ಹಾಗೂ ಜಿಲ್ಲಾ ಆಸ್ಪತ್ರೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಸೌಲಭ್ಯ ಚಿಕಿತ್ಸೆಗೆ ಚಿತ್ರದುರ್ಗ  ಅವಲಂಬಿಸಿರುವುದು.ಪ್ರಮುಖ ಜಿಲ್ಲೆಗಳಲ್ಲಿ ಆನ್ಲೈನ್ ಪರೀಕ್ಷಾ ಕೇಂದ್ರಗಳ ಸ್ಥಾಪನೆ. ರಾಜ್ಯದಲ್ಲಿ ಅನುದಾನ ಕೊರತೆಯಿಂದ ಮುಚ್ಚುವ ದುಸ್ಥಿಯಲ್ಲಿರು ವಿಶ್ವವಿದ್ಯಾಲಯಗಳ ಸೇರಿದಂತೆ. ಮೆಟ್ರೋ ಧರದ ಏರಿಕೆ. ಜೋಮೊಟೊ, ಸ್ವಿಗ್ಗಿ ಫುಡ್ ಡಿಲಿವರಿ ಕಾರ್ಮಿಕರಿಗೆ ಯಾವುದೆ ವಿಷೇಶ ಯೋಜನೆ ಇಲ್ಲದಿರುವುದು, ದಾವಣಗೆರೆ ನಗರದಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ, ಗ್ರಾಮೀಣ ಭಾಗದ ಪಿ. ಯು ಕಾಲೇಜ್ ಗಳಲ್ಲಿ ವಿಜ್ಞಾನ ವಿಷಯ ಕೋರ್ಸ್ ಅಲಭ್ಯ ಇರುವುದು.ತಂತ್ರ ಆಧಾರಿತ ಭೋಧನ ವ್ಯವಸ್ಥೆ ಇಲ್ಲದಿರುವುದು.ಅಸಂಘಟಿತ  ಕಾರ್ಮಿಕರಿಗೆ ನೂತನ ಯೋಜನೆಗಳನ್ನ ಜಾರಿಗೊಳಿಸಬಹುದಿತ್ತು.

ಪ್ರಮೋದ್ ಕುಮಾರ್. ಪಿ
ಅರ್ಥಶಾಸ್ತç ವಿಭಾಗ
ಕುವೆಂಪು ವಿಶ್ವ ವಿದ್ಯಾಲಯ

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.