ಬಹಿರಂಗ ಪತ್ರ ಚಳುವಳಿ....ನಮಗೆ ನ್ಯಾಯ ಕೊಡಿ...ಪತ್ರಿಕಾಭವನ ಉಳಿಸಿ: KWJV ಶಿವಮೊಗ್ಗ ಘಟಕದ ಮನವಿ

   ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಶಿವಮೊಗ್ಗ ಘಟಕದ ವತಿಯಿಂದ ಬಹಿರಂಗ ಪತ್ರ ಚಳುವಳಿ....ನಮಗೆ ನ್ಯಾಯ ಕೊಡಿ...ಪತ್ರಿಕಾಭವನಕ್ಕೆ ಆಡಳಿತಾಧಿಕಾರಿ ನೇಮಿಸಿ, ನಕಲಿ ಪ್ರೆಸ್ ಟ್ರಸ್ಟ್ ಅಧ್ಯಕ್ಷ ನನ್ನು ಬಂಧಿಸಿ....

ಗೆ,
ಮಾನ್ಯ  ಜಿಲ್ಲಾಧಿಕಾರಿಗಳು ,ಶಿವಮೊಗ್ಗ ಜಿಲ್ಲೆ,ಶಿವಮೊಗ್ಗ ಮತ್ತು 
ಜಿಲ್ಲಾ ರಕ್ಷಣಾಧಿಕಾರಿಗಳು,ಶಿವಮೊಗ್ಗ ಜಿಲ್ಲೆ ಶಿವಮೊಗ್ಗ ರವರಲ್ಲಿ ಮನವಿ......

ಕೈ ಮುಗಿದು ಕೇಳಿ ಕೊಳ್ಳುತ್ತೆನೆ, 5 ನಿಮಿಷ ಬಿಡುವು ಮಾಡಿಕೊಂಡು ಪತ್ರಿಕಾ ಭವನಕ್ಕೆ ಸಂಬಂದಿಸಿದ ಸರ್ಕಾರದ ಅಧಿಸೂಚನೆ ಓದಿ .... 
ಪತ್ರಿಕಾ ಭವನಕ್ಕೆ ಸಂಬಂಧಿಸಿದ ಸರ್ಕಾರದ ಅಧಿಸೂಚನೆ ಆದೇಶ ಪ್ರತಿ ಇದು ಜಿಲ್ಲಾಧಿಕಾರಿಗಳೇ ಪತ್ರಿಕಾಭವನದ ಅಧ್ಯಕ್ಷರು...

ಪತ್ರಿಕಾಭವನ ನಿರ್ವಹಣೆ ಮತ್ತು ಕಟ್ಟಡದ ಕುರಿತು ಸರ್ಕಾರದ ಸಚಿವಾಲಯ ದಿಂದ ಹೊರಡಿಸಿದ ಆದೇಶದ ಪ್ರತಿಯನ್ನು ನಿಮಗೆ ಪರಿಶೀಲನೆಗೆ ಮತ್ತು ಸೂಕ್ತವಾದ ಕ್ರಮ ಕೈಗೊಳ್ಳಲು ಕಳುಹಿಸಿರುತ್ತೆನೆ ದಯವಿಟ್ಟು ಓದಿ ಮುಂದಿನ ನಿರ್ಧಾರ ಕೈಗೊಳ್ಳಿ.....

ಈ ಪತ್ರಿಕಾಭವನ ಕ್ಕೆ ಸಂಭಂದಿಸಿದ ಸರ್ಕಾರದ ಅಧುಸೂಚನೆ ಆದೇಶದ ಪ್ರತಿಯನ್ನು ಕಷ್ಟ ಪಟ್ಟು ಸಂಗ್ರಹ ಮಾಡಿದ್ದೆನೆ. ಇದನ್ನ ನೋಡಿದ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೆ ಎಂಬ ನಂಬಿಕೆ ಇದೆ. ಆಗಾಗಿ ಕಳುಹಿಸಿದ್ದೆನೆ.

ಈಗಾಗಲೇ3 ಬಾರಿ ಮನವಿಯನ್ನು ನೀಡಿದ್ದರೂ ಸಹ ಕ್ರಮ ಕೈಗೊಳ್ಳದ ಕಾರಣ ನಾವು ಪ್ರತಿಭಟನೆ ಮಾಡಬೇಕಾಯಿತು.  ವ್ಯಾಟ್ಸಪ್ ಮುಖಾಂತರ ತಮಗೆ ಪತ್ರಿಕಾಭವನದ ವಿಷಯದಲ್ಲಿ ಪ್ರತಿಭಟನೆ ನಡೆದ ಬಗ್ಗೆ ಎಲ್ಲಾ ಪೋಟೋ ವಿಡಿಯೋವನ್ನು ತಮ್ಮಿಬ್ಬರಿಗೆ  ಶೇರ್ ಮಾಡಿದ್ದೆನೆ.ವಿವರಿಸಿದ್ದೆನೆ. 
ಪ್ರತಿಭಟನೆ ಗೆ‌ ಮುನ್ನಾ ಜಯನಗರ ಠಾಣೆಯ ಇನ್ಸ್ಪೆಕ್ಟರ್ ನೀಡಿದ ಮನವಿ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಶಿವಮೊಗ್ಗ ಘಟಕದ ಜಿಲ್ಲಾದ್ಯಕ್ಷರು ಡಿ.ಜಿ.ನಾಗರಾಜ್, ಪ್ರಧಾನ ಕಾರ್ಯದರ್ಶಿ ಅರವಿಂದ್ ಡಿ.ಪಿ.,ಉಪಾದ್ಯಕ್ಷರಾದ ಚಿತ್ರಪ್ಪ ಯರಬಾಳ,ಮಾರ್ಗದರ್ಶಕರು ಮತ್ತು ವಕೀಲರು, ಜಿ.ಆರ್,ಷಡಾಕ್ಷರಪ್ಪ  ಸಹ ಕಾರ್ಯದರ್ಶಿ ಬಿ.ಸಿ ಶಿವರಾಜ್,ಬಿ.ಸಿ.ಗಿರೀಶ್,ಸಂಘಟನಾ ಕಾರ್ಯದರ್ಶಿ ಅಣ್ಣಪ್ಪ ಎಂ,ನಂದಾಕುಮಾರ್ ಸಿಂಗ್,ಬಾಲಕೃಷ್ಣ ನಾಯಕ್ ಹಾಜರಿದ್ದರು ದಿನಾಂಕ 30-1-2025 ರಂದು ಸ್ವಯಂ ಘೋಷಿತ ನಕಲಿ  ಪ್ರೆಸ್ ಟ್ರಸ್ಟ್ ಅಧ್ಯಕ್ಷ ಮಂಜುನಾಥ್ ನನ್ನು ಬಂಧಿಸುವಂತೇ ಒತ್ತಾಯಿಸಿ ಮತ್ತು ಸರ್ಕಾರದ ಪತ್ರಿಕಾಭವನ ಉಳಿಸಿ ಎಂಬ ನ್ಯಾಯಯುತ ಹೊರಾಟವನ್ನು  ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯಿಂದ  ಹಮ್ಮಿಕೊಂಡು ಜಯನಗರ ಪೊಲೀಸ್ ಠಾಣೆಗೆ ಮತ್ತು ಎಸ್ಪಿ ಹಾಗೂ ಡಿಸಿಗೆ ಮಾಹಿತಿಯನ್ನು ನೀಡಲಾಗಿದೆ.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಶಿವಮೊಗ್ಗ ಘಟಕದಿಂದ ಲೇಟರ್ ಹೆಡ್ ನಲ್ಲಿ ಟೈಪ್ ಮಾಡಿದ ನಾಲ್ಕು ಪುಟದ ದೂರಿನ‌ಮನವಿಯನ್ನು ‌ ಜಯನಗರ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಗೆ  ಸಲ್ಲಿಸಿದ್ದು,ಇದುವರೆಗೂ ದೂರನ್ನು ಸ್ವೀಕರಿಸಿದ ಬಗ್ಗೆ ಹಿಂಬರಹ ಅಥವಾ FIR copy ಕೊಟ್ಟಿಲ್ಲ. ನಾಲ್ಕೈದು ಬಾರಿ ಠಾಣೆಗೆ ಮತ್ತು ಪೋನ್ ಮುಖಾಂತರ ಸ್ಪಂದಿಸಿದರೂ ಉಪಯೋಗ ಆಗಿಲ್ಲ. ಇನ್ನೆಷ್ಟು ದಿನ ಬೇಕು..ದೂರಿನ ಬಗ್ಗೆ. ಇಷ್ಟು ನಿರ್ಲಕ್ಷ್ಯ ತನ....ಎಸ್ಪಿ ಸಾಹೇಬರೇ ನಮಗೆ ನ್ಯಾಯ ಕೊಡಿ...
ಮೊದಲ ಗಲಾಟೆ ಘಟನೆಗೆ ಕಾರಣ....
ಪತ್ರಿಕಾಭವನದ ಹತ್ತಿರ ಶಾಂತಿಯುತ ವಾಗಿ ಪ್ರತಿಭಟನೆ ನಡೆಯುತ್ತಿರುವ ಸಂದರ್ಭದಲ್ಲಿ ಸ್ವಯಂ ಘೋಷಿತ ನಕಲಿ  ಪ್ರೆಸ್ ಟ್ರಸ್ಟ್ ಅಧ್ಯಕ್ಷ ಮಂಜುನಾಥ್ ನನಗೆ ಮತ್ತು ನಮ್ಮ ಕಾರ್ಯಕರ್ತರಿಗೆ ಮೆಟ್ಟಿನಲ್ಲಿ ಹೋಡೆಯುತ್ತೆನೆ ಅಂತಾ ಅವಾಚ್ಯಶಬ್ದಗಳಿಂದ ಬೈದಾಗ ನಾನು ಮತ್ತು ನಮ್ಮ ಕಾರ್ಯಕರ್ತರು ಕೆರಳಿ ಅವನ ವಿರುದ್ದ ಹೋರಾಟಕ್ಕೆ ಇಳಿದು ಪ್ರತಿಭಟಿಸಿ ಗಲಾಟೆಯಾಗಿದೆ. ಇದು ಜಯನಗರ ಪೊಲೀಸ್ ಇನ್ಸ್ಪೆಕ್ಟರ್ ಮತ್ತು ಸಬ್ ಇನ್ಸ್ಪೆಕ್ಟರ್ ಹಾಗೂ ಹತ್ತಾರು ಪೊಲೀಸರ ಸಮಕ್ಷಮ ನಡೆದ ಘಟನೆಯಾಗಿದೆ. ವಿಡಿಯೋವನ್ನು ಶೇರ್ ಮಾಡಿದ್ದೆನೆ.

ಮತ್ತೊಂದು ಘಟನೆ ..

.ಪ್ರತಿಭಟನೆ ನಡೆಯುವ ಸಂದರ್ಭದಲ್ಲಿ ಕ್ರಿಮಿ ನಲ್ ಹಿನ್ನೆಲೆವುಳ್ಳ ವ್ಯಕ್ತಿ ಭರತೇಶ್, ಇಸ್ಪಿಟ್ ಕ್ಲಬ್ ನಡೆಸಿದ ವ್ಯಕ್ತಿ .ನಗರದಲ್ಲಿ ಹಲವಾರು ಠಾಣೆಗಳಲ್ಲಿ ಕೇಸು ದಾಖಲಾಗಿರುವ ಆರೋಪಿ ಪ್ರತಿಭಟನೆ ಜಾಗಕ್ಕೆ ಬಂದು ಅವಾಜ್ ಹಾಕುತ್ತಾನೆ.ಈತ ಪ್ರೆಸ್ ಟ್ರಸ್ಟ್  ಟ್ರಸ್ಟಿನೂ ಅಲ್ಲ ಇಂತಹ ವ್ಯಕ್ತಿ ಯನ್ನು ನಕಲಿ ಅಧ್ಯಕ್ಷ ಕರೆಸಿ  ನಮ್ಮ ವಿರುದ್ದ ಗಲಾಟೆ ಮಾಡಿಸಿದ್ದಾನೆ.  ಆಗ ನಾವು ಆತನ ವಿರುದ್ದ ಪ್ರತಿಭಟಿಸಿದ್ದೆವೆ. ಇದು ಸಹ ಪೊಲೀಸರ ಸಮಕ್ಷಮದಲ್ಲಿ ಆದ ಘಟನೆ.  ಇತ್ತೀಚೆಗೆ ಪ್ರಕರಣದ ಒಂದರಲ್ಲಿ 22 ದಿವಸ ಜೈಲಿಗೆ ಹೋಗಿ ಬಂದ ವ್ಯಕ್ತಿಯಾಗಿದ್ದಾನೆ. ಪೊಲೀಸರ ಎದುರು ಹಿಡಿದರೂ ಸಹ ನೂಕಾಡಿ ಹಲ್ಲೆ ಮಾಡಲು ಬಂದಿದ್ದಾನೆ ಜಿಲ್ಲಾರಕ್ಷಣಾಧಿಕಾರಿಗಳು ಈತ ಕ್ರಿಮಿನಲ್ ಹಿನ್ನೆಲೆಯುಳ್ಳ ವ್ಯಕ್ತಿ ಅಂತಾ ಗೊತ್ತಾದ ಮೇಲೆಈತನ ಹೆಸರಿನಲ್ಲಿ ಒಂದು ದಿನ ಪತ್ರಿಕೆ ಇದ್ದು ಅದನ್ನು ಬ್ಲಾಕ್ ಲಿಸ್ಟ್ಗೆ ಹಾಕಲು ಪತ್ರವನ್ನು ಡಿಸಿಯವರಿಗೆ ಬರೆದಿರುತ್ತಾರೆ.

ನಮ್ಮ ಕರ್ನಾಟಕ  ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ ರಾಜ್ಯಮಟ್ಟದ ಸಂಘಟನೆ ಆಗಿದ್ದು, 3 ಸಾವಿರಕ್ಕಿಂತ ಹೆಚ್ಚು ಪತ್ರಕರ್ತರು ಸದಸ್ಯರು ಆಗಿರುತ್ತಾರೆ.ಅದೇ ರೀತಿಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಕೂಡ ರಾಜ್ಯಮಟ್ಟದ ಸಂಘಟನೆ ಆಗಿದ್ದು 8 ಸಾವಿರ ಪತ್ರಕರ್ತರು ಸದಸ್ಯರು ಆಗಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತು ನಗರದಲ್ಲಿ ಸೇರಿ 150 ಕ್ಕೂ ಪತ್ರಕರ್ತರು ಇದ್ದಾರೆ. ಪತ್ರಿಕಾಭವನ ಉಳಿಸಿ ಎಂಬ  ಸಮಾನ ಮನಸ್ಕ ಪ್ರಾಮಾಣಿಕ ಪತ್ರಕರ್ತರ  ಹೋರಾಟಕ್ಕೆ ಬೆಲೆ ಇಲ್ಲವಂತಾಗಿದೆ.
ಈ ಮೇಲ್ಕಂಡ ಪೋಟೋ: ಇದು ನಿನ್ನೆ ದಿವಸ ದಿನಾಂಕ 31-1-25 ರಂದು  ಪ್ರೆಸ್‌ ಟ್ರಸ್ಟ್ ಸ್ವಯಂ ಘೋಷಿತ ನಕಲಿ ಅದ್ಯಕ್ಷ ಎನ್. ಮಂಜುನಾಥ್ ಕ್ರಾಂತಿದೀಪ ಪತ್ರಿಕೆ ಪರವಾಗಿ ಡಿಸಿ ಮತ್ತು ಎಸ್ಪಿಗೆ ಬ್ಯಾಟಿಂಗ್ ಮಾಡಲು ಹೋದ ಟೀಮ್. ಕಣ್ಣು ಬಿಟ್ಟುಕೊಂಡು .ನೋಡ್ರಪ್ಪ ಮೇಲ್ಗಡೆ ಇರುವ ಪತ್ರಿಕಾ ಭವನಕ್ಕೆ ಸಂಬಂಧಿಸಿದ ಸರ್ಕಾರದ ಅಧಿಸೂಚನೆ..ಗೋಪಾಲ್ ಯಡಗೆರೆ ರಾಜ್ಯಮಟ್ಟದ ಪತ್ರಿಕೆಯವರು ನಕಲಿ ಅಧ್ಯಕ್ಷ ಮಂಜನಿಗೆ ಪತ್ರಿಕಾಭವನ ದಲ್ಲಿ ಹಣ ವಸೂಲಿ ಮಾಡು ದರೋಡೆ ಮಾಡು ಅಂತಾ ಸಪೋರ್ಟ್ ಮಾಡುತ್ತಿದ್ದಾರೆ.ಟ್ರಸ್ಟ್ ಅದ್ಯಕ್ಷ ರೇಸ್‌ನಲ್ಲಿ ಇದ್ದಾರೆ.ನಿಮಗೆ ಸಿಗಲ್ಲ ಬಿಡಿ ಸರ್...

ನಕಲಿ ಅಧ್ಯಕ್ಷನ ಟೀಮ್ ನಲ್ಲಿ ನನಗೆ ತಿಳಿದಂತೆ  5 ಜನ ಮಾತ್ರ  ಪ್ರೆಸ್ ಟ್ರಸ್ಟ್ ಟ್ರಸ್ಟಿಗಳು ಇದ್ದಾರೆ.ಬಹಳ ಚೆನ್ನಾಗಿ ಬಾಷಣ ಮಾಡುವ ಗೋಪಾಲ್ ಯಡಗೆರೆ ಕನ್ನಡ ಪ್ರಭ ವರಧಿಗಾರ,ಹುಲಿಮನೆ ತಿಮ್ಮಪ್ಪ,ಗಿರೀಶ್ ಉಮ್ರಾಯ,ಜೇಸುದಾಸ್,ನಾಗರಾಜ್ ನೇರಿಗೆ,ಮಾತ್ರ ಇದ್ದಾರೆ.
ಮತ್ಯಾರು ಟ್ರಸ್ಟಿಗಳು ಬಂದಿಲ್ಲ. ಜೇಸು ಪ್ರೆಂಡ್ಸ್ ಇದ್ದಾರೆ

,ಮತ್ತೊಬ್ಬ ಎಸ್ಪಿ ಪಕ್ಕದಲ್ಲೇ ಇರುವ ವ್ಯಕ್ತಿ ಕ್ರಿಮಿನಲ್ ಹಿನ್ನೆಲೆ ವುಳ್ಳ ವ್ಯಕ್ತಿ ಇತ್ತೀಚೆಗೆ 22 ದಿನ ಜೈಲಿಗೆ ಹೋಗಿ ಬಂದ ವ್ಯಕ್ತಿ. ಈತನ ಮೇಲೆ ಠಾಣೆಯಲ್ಲಿ ಅನೇಕ ಪ್ರಕರಣಗಳು ಇವೆ.ಪ್ರತಿಭಟನೆ ಸಂದರ್ಭದಲ್ಲಿ ಗಲಾಟೆಗೆ ಕಾರಣವಾದ ವ್ಯಕ್ತಿ.ಮತ್ತೊಬ್ಬ ವ್ಯಕ್ತಿ ನಕಲಿ ಅದ್ಯಕ್ಷ ಮಂಜ ಕ್ರಾಂತಿದೀಪ ಪತ್ರಿಕೆ ಎಷ್ಟು ಚೆನ್ನಾಗಿ ನಗಾಡಿಕೊಂಡು ಯಾವುದೇ ಭಯವಿಲ್ಲದೇ ಎಸ್ಪಿವರಿಗೆ ಮನವಿ ಸಲ್ಲಿಸುತ್ತಿದ್ದಾನೆ.ನಿನ್ನೆ ದಿವಸ ಪ್ರತಿಭಟನೆ ಸಮಯದಲ್ಲಿ ಗಲಾಟೆ ಗೆ ಕಾರಣವಾದ ವ್ಯಕ್ತಿ.ಎಸ್ಪಿಯವರು ಎದ್ದುನಿಂತು ನಿನ್ನೆ ದಿವಸ ಗಲಾಟೆಗೆ ಕಾರಣವಾದ ನಕಲಿ ಅಧ್ಯಕ್ಷ ನಿಂದ ಮನವಿ ಸ್ವೀಕರಿಸುತ್ತಾರೆ.

ಶಿವಮೊಗ್ಗ ಪ್ರೆಸ್  ಟ್ರಸ್ಟ್ ನಲ್ಲಿ ಇರುವುದು ಟ್ರಸ್ಡಿಗಳಾಗಿ ಅದರಲ್ಲಿ ಮುಕ್ಕಾಲುಭಾಗ ಇವರ ಪರವಾಗಿ ಯಾರು ಬಂದಿಲ್ಲ. ನಕಲಿ ಅಧ್ಯಕ್ಷನ ಜೊತೆಯಲ್ಲಿ ಇರುವುದು ನಾಲ್ಕು ಜನ ಟ್ರಸ್ಟಿಗಳು ಮಾತ್ರ ಇದು ನಿಮಗೆ ಗೊತ್ತಿರಲಿ...ಜೇಸುದಾಸ್ ಇದೀಗ ಯಾವ ಟಿ.ವಿ ಚಾನಲ್ ವರಧಿಗಾರ ಅಥವಾ ಯಾವ ಪತ್ರಿಕೆಗೆ ಸುದ್ದಿ ಮಾಡುತ್ತಾನೆ ಗೊತ್ತಿಲ್ಲ. ಇನ್ನುಳಿದವರು 6-7. ಜನ ಟಿವಿ ಚಾನಲ್ ನ ಕ್ಯಾಮೆರಾಮನ್ಗಳು. ಇವರೆಲ್ಲಾ ಜೇಸು ಪ್ರೆಂಡ್ಸ್.

ಪ್ರೆಸ್ ಟ್ರಸ್ಟ್ ನಕಲಿ ಅಧ್ಯಕ್ಷ ಮಂಜುನಾಥ್ ಪರವಾಗಿ ಯಾವ ಸ್ಡೇಟ್ ಪೇಪರ್ ನವರು ವಿಜಯವಾಣಿ,ಪ್ರಜಾವಾಣಿ, TV 9, Suvarna TV .ಮತ್ತಿತರೇ ಮುಖ್ಯವಾದ ಚಾನಲ್ ವರಧಿಗಾರರು ಮತ್ತು ಪತ್ರಿಕೆ ವರದಿಗಾರರು ಬಂದಿಲ್ಲ. ದಿನಪತ್ರಿಕೆಯ ಸಂಪಾದಕರು,ವರದಿಗಾರರು, ಡಿಜಿಟಲ್ ಮೀಡಿಯಾ ವರದಿಗಾರರು ಬಂದಿಲ್ಲ. ನಕಲಿ ಅಧ್ಯಕ್ಷನ ಕಾಟಕ್ಕೆ, ನಡವಳಿಕೆ ಕಂಡು ಇವರೆಲ್ಲ ಸುಸ್ತಾಗಿ ಹೋಗಿ ದೂರ ಇದ್ದಾರೆ.

ಸಾಕಷ್ಟು ಮನವಿ ನೀಡಿದ್ದರೂ ಪ್ರತಿಭಟನೆ ಮಾಡಿದರೂ ಸಹ  4 ಜನ ಟ್ರಸ್ಟಿಗಳ ಪರವಾಗಿ ಮತ್ತು ಸ್ವಯಂ ಘೋಷಿತ ಟ್ರಸ್ಟ್ ನಕಲಿ ಅಧ್ಯಕ್ಷ ಮಂಜುನಾಥ್ ಪರವಾಗಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಇದೆ ಅಂದರೆ ಇದು ಶೋಚನೀಯ ವಾದ ಮತ್ತು ಬೇಸರದ ಸಂಗತಿಯಾಗಿದೆ. ಜಿಲ್ಲಾದ್ಯಂತ ನಮ್ಮ ನ್ಯಾಯಯುತ  ಪ್ರತಿಭಟನೆಗೆ ಜನರು ಪತ್ರಕರ್ತರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಆದರೇ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಯಾವುದೇ ಕ್ರಮಕ್ಕೆ ಮುಂದಾಗದೇ ಮೌನವಾಗಿದೆ.ಇದು ತುಂಬಾ ಬೇಸರ ತರಿಸಿದೆ.

ಎಸ್ಪಿಯವರ ಗಮನಕ್ಕೆ... 

ನಿಮ್ಮ ಜಯನಗರ ಠಾಣೆಯ ಇನ್ಸ್ಪೆಕ್ಟರ್ ಮತ್ತು ಸಬ್ ಇನ್ಸ್ಪೆಕ್ಟರ್ ಗೆ ಪ್ರೆಸ್ ಟ್ರಸ್ಟ್ ನಲ್ಲಿನ  ಸ್ವಯಂ ಘೋಷಿತ ನಕಲಿ ಅಧ್ಯಕ್ಷ ಮಂಜುನಾಥ ಹಣ ವಸೂಲಿ ಮಾಡಿ ಸರ್ಕಾರಕ್ಕೆ ಮೋಸ ವಂಚನೆ ಮಾಡುತ್ತಿರುವ ಬಗ್ಗೆ ಮತ್ತು ನಾನು ಅದ್ಯಕ್ಷನೆಂದು ಸುಳ್ಳು ಹೇಳಿಕೊಂಡು ಪತ್ರಿಕಾಭವನ ಕಬ್ಜಾ ಮಾಡಿಕೊಂಡು ಹಗಲು ದರೋಡೆ ವಸೂಲಿಗೆ ಇಳಿದ ಬಗ್ಗೆ FIR ಮಾಡುವಂತೇ ಮತ್ತು ನಕಲಿ ಅಧ್ಯಕ್ಷ ನನ್ನು ಬಂಧಿಸುವಂತೇ ದೂರನ್ನು ನಮ್ಮ ಸಂಘದ ಲೇಟರ್ ಹೆಡ್ ನಲ್ಲಿ ಲಿಖಿತವಾದ ಟೈಪ್ ಮಾಡಿದ ನಾಲ್ಕು ಪುಟದ ದೂರನ್ನು ಮೂರು ದಿನದ ಹಿಂದೇ ಸಲ್ಲಿಸಿದ್ದರೂ ಇದುವರೆಗೂ ದೂರು ಸ್ವೀಕರಿಸಿದ ಬಗ್ಗೆ ಒಂದು Acknowledgement ಕೊಡಲು ಸಾದ್ಯವಾಗಿಲ್ಲ. ನಾನು ನಾಲ್ಕೈದು ಬಾರಿ ಇದಕ್ಕಾಗಿ ಅಲೆದಾಡಿ ಪೋನ್ ಮಾಡಿ ಕೇಳಿದರೂ ಪ್ರಯೋಜನ ಆಗಿಲ್ಲ. ಇಷ್ಟೋಂದು ನಿರ್ಲಕ್ಷ್ಯ ಧೋರಣೆ ಪತ್ರಿಕಾ ಸಂಘಟನೆಯ ಅದ್ಯಕ್ಷ ಮತ್ತು ಸಂಪಾದಕನಿಗೆ ಈ ಗತಿ ಆದರೇ ಬೇರೆಯವರ ಗತಿ ಏನು? ಎಸ್ಪಿ ರವರಲ್ಲಿ ವಿನಂತಿ ನಾನು ಕೊಟ್ಟ ದೂರಿನ ಸಂಬಂದ Acknowledge ment ಅಥವಾ ಕೇಸು ದಾಖಲಾಗಿದ್ದರೇ FIR copy ಕೊಡಲು ಹೇಳಿ....

 ಪ್ರತಿಭಟನೆ ಸಂದರ್ಭದಲ್ಲಿ ಆದ ಘಟನೆಯ ಬಗ್ಗೆ  ದೂರು ಕೊಟ್ಟರೂ ಏನು ಉಪಯೋಗವಾಗಿಲ್ಲ. 

ಪೊಲೀಸ್ ಇಲಾಖೆ ಇಷ್ಟೊಂದು ನಿಷ್ಕ್ರಿಯ ಆದರೇ ನ್ಯಾಯ ಕೇಳಲು ನಾವೆಲ್ಲಿಗೆ ಹೋಗಬೇಕು... ತುಂಬಾ ಬೇಸರ ನೋವಾಗಿದೆ. ನಾನು ಎಸ್ಪಿಯವರ ಬಗ್ಗೆ ಗೌರವ ಇಟ್ಟುಕೊಂಡು ದಕ್ಷತೆಯ  ಬಗ್ಗೆ ಎಲ್ಲರ ಹತ್ತಿರ ಹೇಳುತ್ತಿದ್ದೆ. ಇದೀಗ ನಮಗೆ ನ್ಯಾಯ ಸಿಕ್ಕಿಲ್ಲ...

ಪತ್ರಿಕಾಭವನದ ಹತ್ತಿರ ಶಾಂತಿಯುತ ವಾಗಿ ಪ್ರತಿಭಟನೆ ನಡೆಯುತ್ತಿರುವ ಸಂದರ್ಭದಲ್ಲಿ ಸ್ವಯಂ ಘೋಷಿತ ನಕಲಿ  ಪ್ರೆಸ್ ಟ್ರಸ್ಟ್ ಅಧ್ಯಕ್ಷ ಮಂಜುನಾಥ್ ನನಗೆ ಮತ್ತು ನಮ್ಮ ಕಾರ್ಯಕರ್ತರಿಗೆ ಮೆಟ್ಟಿನಲ್ಲಿ ಹೋಡೆಯುತ್ತೆನೆ ಅಂತಾ ಅವಾಚ್ಯಶಬ್ದಗಳಿಂದ ಬೈದು ಬೆದರಿಕೆ ಹಾಕಿದ ಕಾರಣ ನಾನು ಮತ್ತು ನಮ್ಮ ಕಾರ್ಯಕರ್ತರು ಕೆರಳಿ ಅವನ ವಿರುದ್ದ ಹೋರಾಟಕ್ಕೆ ಇಳಿದು ಪ್ರತಿಭಟಿಸಿದ್ದೆವೆ. ಗಲಾಟೆಯಾಗಿದೆ. ಇದು ಜಯನಗರ ಪೊಲೀಸ್ ಇನ್ಸ್ಪೆಕ್ಟರ್ ಮತ್ತು ಸಬ್ ಇನ್ಸ್ಪೆಕ್ಟರ್ ಹಾಗೂ ಹತ್ತಾರು ಪೊಲೀಸರ ಸಮಕ್ಷಮ ನಡೆದ ಘಟನೆಯಾಗಿದೆ. ವಿಡಿಯೋವನ್ನು ಶೇರ್ ಮಾಡಿದ್ದೆನೆ.ಇದಕ್ಕೆ ಕ್ರಮ ಆಗಿಲ್ಲ.

ಮತ್ತೊಂದು ಘಟನೆ ...

ಪ್ರತಿಭಟನೆ ನಡೆಯುವ ಸಂದರ್ಭದಲ್ಲಿ ಕ್ರಿಮಿ ನಲ್ ಹಿನ್ನೆಲೆವುಳ್ಳ ವ್ಯಕ್ತಿ ಭರತೇಶ್, ಇಸ್ಪಿಟ್ ಕ್ಲಬ್ ನಡೆಸಿದ ವ್ಯಕ್ತಿ .ನಗರದಲ್ಲಿ ಹಲವಾರು ಠಾಣೆಗಳಲ್ಲಿ ಕೇಸು ದಾಖಲಾಗಿರುವ ಆರೋಪಿ ಪ್ರತಿಭಟನೆ ಜಾಗಕ್ಕೆ ಬಂದು ಅವಾಜ್ ಹಾಕುತ್ತಾನೆ.ಈತ ಪ್ರೆಸ್ ಟ್ರಸ್ಟ್  ಟ್ರಸ್ಟಿನೂ ಅಲ್ಲ ಇಂತಹ ವ್ಯಕ್ತಿ ಯನ್ನು ನಕಲಿ ಅಧ್ಯಕ್ಷ ಮಂಜುನಾಥ್ ಕರೆಸಿ  ನಮ್ಮ ವಿರುದ್ದ ಗಲಾಟೆ ಮಾಡಿಸಿದ್ದಾನೆ.  ಆಗ ನಾವು ಆತನ ವಿರುದ್ದ ಪ್ರತಿಭಟಿಸಿದ್ದೆವೆ. ಇದು ಸಹ ಪೊಲೀಸರ ಸಮಕ್ಷಮದಲ್ಲಿ ಆದ ಘಟನೆ.  ಇತ್ತೀಚೆಗೆ ಪ್ರಕರಣದ ಒಂದರಲ್ಲಿ 22 ದಿವಸ ಜೈಲಿಗೆ ಹೋಗಿ ಬಂದ ವ್ಯಕ್ತಿಯಾಗಿದ್ದಾನೆ. ಜಿಲ್ಲಾರಕ್ಷಣಾಧಿಕಾರಿಗಳು  ಈತ ಕ್ರಿಮಿನಲ್ ಹಿನ್ನೆಲೆಯುಳ್ಳ ವ್ಯಕ್ತಿ ಅಂತಾ ಗೊತ್ತಾದ ಮೇಲೆ ಈತನ ಹೆಸರಿನಲ್ಲಿ ಒಂದು ದಿನಪತ್ರಿಕೆ ಇದ್ದು ಅದನ್ನು ಬ್ಲಾಕ್ ಲಿಸ್ಟ್ಗೆ ಹಾಕಲು ಪತ್ರವನ್ನು ಡಿಸಿಯವರಿಗೆ ಬರೆದಿರುತ್ತಾರೆ.ಇಂತಹ ವ್ಯಕ್ತಿ ಯ‌ಮೇಲೂ ಕ್ರಮ ಆಗಿಲ್ಲ.

ಮತ್ತೊಂದು ಘಟನೆ ಬೇಸರ ತರಿಸಿದೆ...

ಸರ್ಕಾರದ ಅನುದಾನ ಮತ್ತು ಜನಪ್ರತಿನಿಧಿಗಳ ಅನುದಾನದಿಂದ  ಸತ್ಕಾರದ ಜಾಗದಲ್ಲಿ ಕಟ್ಟಿದಂತ ಶಿವಮೊಗ್ಗದ ಪತ್ರಿಕಾಭವನ ಇದೀಗ ಶಿವಮೊಗ್ಗ ಪ್ರೆಸ್ ಟ್ರಸ್ಟ್ ನ ಸ್ವಯಂಘೋಷಿತ ನಕಲಿ ಅಧ್ಯಕ್ಷ ಎನ್. ಮಂಜುನಾಥ್ ಸಂಪಾದಕ ಕ್ರಾಂತಿದೀಪ ದಿನಪತ್ರಿಕೆ ಇವನ ಸುಪರ್ದಿಯಲ್ಲಿ ನಡೆಯುತ್ತಿದೆ.ಅದನ್ನ ಅವನು ಸ್ವಂತದ ಆಸ್ತಿ ಯನ್ನಾಗಿ ಮಾಡಿಕೊಂಡಿದ್ದಾನೆ. ಇವನ ಸುಪರ್ದಿಗೆ ಕೊಟ್ಟವರು ಯಾರು ಅಂತಾ ಇದುವರೆಗೆ ನಮಗೆ ಗೊತ್ತಿಲ್ಲ. ಟ್ರಸ್ಟ್ ಗೆ ಕೊಡಲು ಬರುವುದಿಲ್ಲ. ಅದು ಕಾನೂನು ಬಾಹಿರ.ಟ್ರಸ್ಟ್ ಕೂಡ ಟ್ರಸ್ಟ್ ಡೀಡ್ ನಿಯಮದಂತೆ ನಡೆಯುತ್ತಿಲ್ಲ.ಈಗಾಗಲೇ ತಮಗೆ ಮೂರು ಬಾರಿ ಲಿಖಿತವಾಗಿ ಮುದ್ದಾಂ ಕಂಡು ಮತ್ತು ಟಪಾಲಿನಲ್ಲಿ ಮನವಿಯನ್ನು ಕೊಟ್ಟು ಕ್ರಮಕ್ಕೆ ತನಿಖೆಗೆ ಒತ್ತಾಯಿಸಲಾಗಿದೆ.

ಶಿವಮೊಗ್ಗ ಪತ್ರಿಕಾಭವನಕ್ಕೆ ಸಂಬಂದಿಸಿದಂತೆ ಮತ್ತು ಶಿವಮೊಗ್ಗ ಪ್ರೆಸ್ ಟ್ರಸ್ಟ್ ಗೆ ಸಂಬಂಧಿಸಿದಂತೆಈಗಾಗಲೇ  ಡಿಸಿರವರಿಗೆ ಮೂರು ಬಾರಿ ಲಿಖಿತವಾಗಿ ಮುದ್ದಾಂ ಕಂಡು ಮತ್ತು ಟಪಾಲಿನಲ್ಲಿ ಮನವಿಯನ್ನು ಕೊಟ್ಟು ಕ್ರಮಕ್ಕೆ ತನಿಖೆಗೆ ಒತ್ತಾಯಿಸಲಾಗಿದೆ ಇನ್ನು ಸೂಕ್ತವಾದ ತನಿಖೆಗೆ ಮತ್ತು ಕ್ರಮಕ್ಕೆ ಮುಂದಾಗಿಲ್ಲ.

ಇದೀಗ ನಾನು ಪತ್ರಿಕಾಭವನದ ನಿರ್ವಹಣೆ, ಕಟ್ಡಡದ ಬಗ್ಗೆ ಸಮಿತಿಯನ್ನು ಸರ್ಕಾರ ನೇಮಕ ಮಾಡಿದ ಬಗ್ಗೆ ಸರ್ಕಾರದ ಆದೇಶ ಪ್ತತಿಯನ್ನು ತಮಗೆ ಸಲ್ಲಿಸುತ್ತಿದಗದೆನೆ. ನೀವೇ ಪತ್ರಿಕಾಭವನದ ಅದ್ಯಕ್ಷ ರು ಈಗಲಾದರೂ ಪತ್ರಿಕಾಭವನ ವನ್ನು ತಮಗಮ ವಶಕ್ಕೆ ಪಡೆದು ಆಡಳಿತಾಧಿಕಾರಿ ಯನ್ನು ನೇಮಿಸುವಂತೇ ಒತ್ತಾಯಿಸಲಾಗಿದೆ.

ಸರ್, ಶಿವಮೊಗ್ಗ ವಾರ್ತಾಧಿಕಾರಿ ಮಾರುತಿ ಬಗ್ಗೆ ತಮಗೆ ಮಾಹಿತಿ.... 

ಇಷ್ಟೋಂದು ಘಟನೆ ಆದರೂ ಪತ್ರಿಕಾಭವನಕ್ಕೆ ಸಂಭವಿಸಿದ ಸರ್ಕಾರದ ಆದೇಶದ ಪ್ರತಿಯನ್ನು ಜಿಲ್ಲಾಧಿಕಾರಿಗಳಿಗೆ ಕೊಡಲು ಮುಂದಾಗಿಲ್ಲ. ಮಾರುತಿ ಶಿವಮೊಗ್ಗ ವಾರ್ತಾ ಇಲಾಖೆಗೆ ಬಂದು 15 ವರ್ಷವಾಗಿದೆ. ಇನ್ನು ವರ್ಗವಾಗಿಲ್ಲ. ಈತನ ಮೇಲೆ ಅನೇಕ ಆರೋಪಗಳು ಇವೆ. ಈತ ಪ್ರೆಸ್‌ ಟ್ರಸ್ಟ್ ನಕಲಿ ಅದ್ಯಕ್ಷನ ಜೋತೆ ಶಾಮಿಲಾಗಿ ಕೈ ಜೋಡಿಸಿದ್ದಾನೆ .ಬರುವ ಅಧಿಕಾರಿಗಳಿಗೆ ನಕಲಿ ಅಧ್ಯಕ್ಷನ ಪರವಾಗಿ ಬ್ಯಾಟಿಂಗ್ ಮಾಡಿ ದಾರಿ ತಪ್ಪಿಸುವ ಕೆಲಸ ಮಾಡುತ್ತಾನೆ. ಈತನಿಗೆ ಕೆಲವೇ ಪತ್ರಕರ್ತರು ಮಾತ್ರ ಪತ್ರಕರ್ತರು....ಹೇಳುತ್ತಾ ಹೋದರೇ....ಒಂದು ಬುಕ್ ಬರೆಯ ಬಹುದು ಸಾಕು ಇಷ್ಟು ಅನಿಸುತ್ತದೆ.ಇಷ್ಟೊಂದು ಗಲಾಟೆ ಗದ್ದಲ ಆದರೂ ಯಾವ ಅಧಿಕಾರಿಯೂ ಪತ್ರಿಭವನಕ್ಕೆ ಸಂಬಂಧಿಸಿದ  ಸರ್ಕಾರದ ಆದೇಶ ಪ್ರತಿಯನ್ನು ಮುಂದಾಗಿಲ್ಲ. ಇಷ್ಟೋಂದು ಆಡಳಿತದಲ್ಲಿ ನಿಷ್ರಿಯ ಆದರೇ ಸಾಮಾನ್ಯ ಜನ ಬದುಕು ಕಷ್ಡ ಕಷ್ಟ... 

ಈಗಲಾದರೂ ಪತ್ರಿಕಾಭವನ ಉಳಿಸುವ ನಿಟ್ಟಿನಲ್ಲಿ ಮತ್ತು ನಕಲಿ ಅಧ್ಯಕ್ಷ ಹಣ ವಸೂಲಿ ಮಾಡಿದಬಗ್ಗೆ  ಹಣದ ದುರುಪಯೋಗ ಮತ್ತು ಲೆಕ್ಕಾಚಾರದ ಬಗ್ಗೆ ಕ್ರಮಕೈಗೊಂಡು ಪತ್ರಿಕಾಭವನಕ್ಕೆ ಆಡಳಿತಾಧಿಕಾರಿ ನೇಮಿಸುತ್ತಿರಾ ಎಂಬ ಭರವಸೆ ನಂಬಿಕೆ ಇದೆ... ಮತ್ತೆ ಹೋರಾಟಕ್ಕೆ ಅವಕಾಶ ಮಾಡಿಕೊಡುವುದಿಲ್ಲ  ಎಂಬ ವಿಶ್ವಾಸವಿದೆ.ಕಾದು ನೋಡುವ..

ನಿನ್ನೆ ದಿವಸ ನಕಲಿ ಟ್ರಸ್ಟ್ ಅಧ್ಯಕ್ಷ ಮನವಿ ಕೊಡುವ ಸಂದರ್ಭದಲ್ಲಿ ಕ್ರಮಿನಲ್ ಹಿನ್ನಲೆ ವುಳ್ಳ ವ್ಯಕ್ತಿ ,ಜೈಲಿಗೆ ಹೋದ ವ್ಯಕ್ತಿ, ಅನೇಕ ಠಾಣೆ ಗಳಲ್ಲಿ ಪ್ರಕರಣ ದಾಖಲಾದ ವ್ಯಕ್ತಿ ನಿನ್ನೆ ಪ್ರತಿಭಟನೆ ಸಂದರ್ಭದಲ್ಲಿ ಗಲಾಟೆ ಗೆ ಕಾರಣವಾದ ವ್ಯಕ್ತಿ ಯಾವುದೇ ಭಯ ಆತಂಕ ಇಲ್ಲದೇ  ಆರೋಪಿ  ಭರತೇಶ್ ಎಸ್ಪಿಯವರ ಪಕ್ಕದಲ್ಲೇ ನಿಂತು ಪೋಟೋ ತೆಗೆಸಿಕೊಳ್ಳುತ್ತಾನೆ. ಎಸ್ಪಿಯವರ ಕಂಡರೇ ಯಾರಿಗೂ ಭಯವಿಲ್ಲವಾಗಿದೆ. ಟ್ರಸ್ಟ್ ನಕಲಿ ಅಧ್ಯಕ್ಷ ನಿಗೂ ನನ್ನ‌ಮೇಲೆ ದೂರು ಇದೆ ಎಂಬ ಭಯವಿಲ್ಲ. ಎಸ್ಪಿಯವರು ಎದ್ದುನಿಂತು ಮನವಿ ಸ್ವೀಕರಿಸುತ್ತಾರೆ.ಕಾದು ನೋಡುವ ಏನಾಗುತ್ತದೆ ಅಂತಾ.... 

ಸಹಿ/-
ಡಿ.ಜಿ.ನಾಗರಾಜ
ಸಂಪಾದಕರು
ಹಲೋಶಿವಮೊಗ್ಗ ದಿನಪತ್ರಿಕೆ
ಜಿಲ್ಲಾದ್ಯಕ್ಷರು
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ
ಸಂಘಟನಾ ಕಾರ್ಯದರ್ಶಿ
ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ.
ಮೊ.9449063043

ದಿನಾಂಕ.1-2-2025
ಸ್ಥಳ ಶಿವಮೊಗ್ಗ


ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.