*ವಿದ್ಯಾರ್ಥಿಗಳು ಎಂದಿಗೂ ಶಿಕ್ಷಣದಿಂದ ವಂಚಿತರಾಗಬೇಡಿ*:ಗೋಪಾಲಕೃಷ್ಣ ಬೇಳೂರು
ಆನಂದಪುರ: ನಿಮ್ಮ ತಂದೆ ತಾಯಿಯರಿಗೆ ನಿಮ್ಮನ್ನು ಓದಿಸಲಾಗಲಿಲ್ಲ ವೆಂದರೆ ನನ್ನ ಬಳಿ ಬನ್ನಿ ನಿಮ್ಮ ಅಣ್ಣ ಅಂತ ನಾನಿದ್ದೇನೆ ನಿಮ್ಮ ಓದಿನ ಜವಾಬ್ದಾರಿ ನಾನು ಹೊರುತ್ತೇನೆ ಎಂದು ಶಾಸಕರು ಮತ್ತು ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀ ಗೋಪಾಲಕೃಷ್ಣ ಬೇಳೂರು ತಿಳಿಸಿದರು.
ಅವರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಸಮಾರೋಪ ಸಮಾರಂಭ ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿದರು.
ನಾನು ಅಧಿಕಾರಕ್ಕೆ ಬರುವ ಮುಂಚೆ ಯಾವ ಕಾಲೇಜಿಗೂ ಸರಿಯಾದ ಸೌಲಭ್ಯಗಳಿರಲಿಲ್ಲ ಈಗ ನನ್ನ ಅವಧಿಯಲ್ಲಿ ನನ್ನ ಕ್ಷೇತ್ರದ ಪ್ರತಿಯೊಂದು ಕಾಲೇಜಿನ ಮಕ್ಕಳಿಗೆ ಕೊರತೆಯಾಗದಂತೆ ಉತ್ತಮವಾದ ಸೌಲಭ್ಯವನ್ನು ಕಲ್ಪಿಸುತ್ತಿದ್ದೇನೆ. ಹಾಗೆ ಈ ತಾಲೂಕಿನಲ್ಲಿ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ನನ್ನದು ಆದರೆ ಯಾವ ವಿದ್ಯಾರ್ಥಿಯು ಸಹ ವಿದ್ಯಾಭ್ಯಾಸದಿಂದ ವಂಚಿತರಾಗಬಾರದು ಎಂದರು.
ಐ.ಟಿ .ಬಿ.ಟಿ ಕಂಪನಿಗಳು ಕೈಬೀಸಿ ವಿದ್ಯಾವಂತರನ್ನು ಕರೆಯುತ್ತಿದೆ ಅಷ್ಟು ದೇಶದಲ್ಲಿ ಉದ್ಯೋಗ ಸೃಷ್ಟಿಯಾಗುತ್ತಿದೆ. ಯುವಕರು ಯಾವಾಗಲೂ ಸದೃಢ ಮನಸ್ಸಿನಿಂದ ಭವಿಷ್ಯದ ನಾಯಕರಾಗುವ ಕನಸನ್ನು ಹೊತ್ತಿ ಸಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದಂತಹ ಪ್ರಾಂಶುಪಾಲರಾದ ರವಿಶಂಕರ್ ಎನ್ ರವರು ಮಾತನಾಡಿ ವಿದ್ಯಾರ್ಥಿಗಳು ಓದುವ ಸಮಯವನ್ನು ಎಂದಿಗೂ ವ್ಯರ್ಥ ಮಾಡಿಕೊಳ್ಳಬೇಡಿ ಕಳೆದು ಹೋದ ಸಮಯ ಮತ್ತೆ ಜೀವನದಲ್ಲಿ ಎಂದಿಗೂ ಬಾರದು ಎಂದರು.
ಈ ಸಂದರ್ಭದಲ್ಲಿ ಆನಂದಪುರ ಮತ್ತು ಆಚಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರು ಮತ್ತು ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರುಗಳು ಹಾಗೂ ಪಕ್ಷದ ಮುಖಂಡರುಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಈ ಸಂದರ್ಭದಲ್ಲಿ ಗುಡ್ಡಪ್ಪ ಜೋಗಿ, ಜಾನಪದ ಕಲಾವಿದರು. ಡಾ ನಾಡೋಜ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರು ಇವರಿಗೆ ಸನ್ಮಾನಿಸಲಾಯಿತು ಹಾಗೆ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದಂತಹ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವು ಸಹ ಮಾಡಿದರು.
Leave a Comment