ಕೆ. ಪಿ. ಬಿಂದು ಕುಮಾರ್ ನಿಧನ "
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಜಿಲ್ಲಾ ಸಂಸ್ಥೆಯ ಜಿಲ್ಲಾ ಮುಖ್ಯ ಆಯುಕ್ತರು ಹಾಗೂ ಹಿರಿಯ ವಕೀಲರಾದ ಹಾಗೂ ಹಲವಾರು ಸಂಘ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಶ್ರೀಯುತ ಕೆ.ಪಿ. ಬಿಂದು ಕುಮಾರ್ ರವರು (66) . ಇಂದು ಮಧ್ಯಾಹ್ನ ಸವಳಂಗ ರಸ್ತೆಯಲ್ಲಿರುವ ಅವರ ಸ್ವಗೃಹದಲ್ಲಿ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಇವರಿಗೆ ಪತ್ನಿ ಹಾಗೂ ಒಬ್ಬ ಮಗ ಇದ್ದು. ಇವರ ಅಂತ್ಯ ಸಂಸ್ಕಾರವನ್ನು ನಾಳೆ ದಿನಾಂಕ 22-2-2025. ಶನಿವಾರ. ಅವರ ಹುಟ್ಟೂರು ಆದ ದಾವಣಗೆರೆ ಜಿಲ್ಲೆ ಕಾಕನೂರಿನಲ್ಲಿ ಅಂತ್ಯಕ್ರಿಯೆಯನ್ನು ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ ಇವರಿಗೆ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ನ ರಾಜ್ಯ ಮುಖ್ಯ ಆಯುಕ್ತರಾದ ಪಿಜಿಆರ್ ಸಿಂಧ್ಯಾ ಹಾಗೂ ಜಿಲ್ಲಾ ಆಯುಕ್ತರಾದ ಎಸ್ ಜಿ ಆನಂದ್. ಶ್ರೀಮತಿ ಶಕುಂತಲಾ ಚಂದ್ರಶೇಖರ್, ಕೆ ರವಿ., ವೈ ಆರ್ ವೀರೇಶಪ್ಪ. ಹೆಚ್ಚು ಪರಮೇಶ್ವರ್. ರಾಜೇಶ್ ಅವಲಕ್ಕಿ. ಜಿ ವಿಜಯಕುಮಾರ್. ಮಲ್ಲಿಕಾರ್ಜುನ್ ಖಾನೂರ್. ಹಾಗೂ ಜಿಲ್ಲೆ ಮತ್ತು ಸ್ಥಳೀಯ ಸಂಸ್ಥೆಯ ಪದಾಧಿಕಾರಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
Leave a Comment