ನಗರದ ವಾರ್ತಾ ಇಲಾಖೆಯ ಪಕ್ಕದ ಸರ್ಕಾರಿ ಕಟ್ಟಡದಲ್ಲಿ ರಾರಾಜಿಸುತ್ತಿವೆ ಖಾಸಾಗಿ ಬೋರ್ಡ್ ಗಳು!! ಬಾಡಿಗೆಗೆ ಕೊಟ್ಟವರು ಯಾರು? ಟ್ರಸ್ಟ್ ಅಧ್ಯಕ್ಷನಾ? ಮತ್ಯಾರು...ಜಿಲ್ಲಾಧಿಕಾರಿಗಳು ಗಮನಿಸಿ ಸರ್...
ಶಿವಮೊಗ್ಗ: ನಗರದಲ್ಲಿ ಡಿ.ಸಿ.ಕಾಂಪೌಂಡ್ ನಲ್ಲಿ ಶಿವಮೊಗ್ಗ ವಾರ್ತಾ ಇಲಾಖೆಯ ಪಕ್ಕದಲ್ಲಿ ಸರ್ಕಾರಿ ಜಾಗ ಹಾಗೂ ಸರ್ಕಾರದ ಕಟ್ಟಡದಲ್ಲಿ ಮಳಿಗೆಯಲ್ಲಿ ಖಾಸಗಿಯಾಗಿ ವ್ಯಕ್ತಿಗಳ ವ್ಯಾಪಾರದ ಬೋರ್ಡ್ಗಳು ರಾರಾಜಿಸುತ್ತಿವೆ. ಸರ್ಕಾರದ ಕಟ್ಟಡದಲ್ಲಿ ವ್ಯವಹಾರ ಮಾಡಲು ಮಳಿಗೆಗಳನ್ನು ಬಾಡಿಗೆ ಕೊಟ್ಟವರು ಯಾರು? ಅಲ್ಲಿ ಸಹಕಾರ ಸಂಘದ ಬೋರ್ಡ್ ಸಹ ಇದೆ. ಇದಕ್ಕೆ ಬಾಡಿಗೆ ಕೊಟ್ಟವರು ಯಾರು? ಎಂಬುದು ಇದೀಗ ಸಾರ್ವಜನಿಕ ವಲಯದಲ್ಲಿ ಬಹು ಚರ್ಚಿತವಾಗುತ್ತಿರುವ ವಿಷಯವಾಗಿದೆ.
ಸದರಿ ಸರ್ಕಾರದ ಸುಪರ್ದಿಯಲ್ಲಿರುವ ಕಟ್ಟಡದಲ್ಲಿ ವ್ಯಾಪಾರ ವ್ಯವಹಾರ ಮಾಡುವುದಕ್ಕೆ ಖಾಸಾಗಿ ವ್ಯಕ್ತಿಗಳ ಸಂಸ್ಥೆ ಗೆ ಮಳಿಗೆಗಳನ್ನು ಬಾಡಿಗೆ ಕೊಟ್ಟವರು ಯಾರು? ಖಾಸಾಗಿ ಸಂಸ್ಥೆಯ ಸಹಕಾರ ಸಂಘದ ಬೋರ್ಡ್ ಸಹ ಅಲ್ಲಿ ದೊಡ್ಡದಾಗಿ ಹಾಕಲಾಗಿದೆ. ಬಾಡಿಗೆಗೆ ...ಅಂಗ್ರಿಮೆಂಟ್ ಮಾಡಿಕೊಟ್ಟವರು ಯಾರು? ಬಾಡಿಗೆ ಪಡೆಯುತ್ತಿರುವ ವ್ಯಕ್ತಿ ಯಾರು? ಅಡ್ವಾನ್ಸ್ ಪಡೆದ ವ್ಯಕ್ತಿ ಯಾರು? ಈ ಮಳಿಗೆಗಳಿಂದ ಲಕ್ಷಾಂತರ ರೂಪಾಯಿ ಬಾಡಿಗೆ ಹಣ ಬರುತ್ತಿದ್ದು, ಈ ಹಣ ಯಾರ ಅಕೌಂಟ್ ಗೆ ಕಟ್ಟಲಾಗಿದೆ ಎಂಬುದು ನಿಗೂಡವಾಗಿದೆ. ಇದು ಸಹ ಸುಮಾರು 10 ವರ್ಷದಿಂದ ಬಾಡಿಗೆಗೆ ನೀಡಲಾಗಿದೆ ಎಂದು ಹೇಳಲಾಗುತ್ತಿದೆ.
ಖಾಸಾಗಿ ವ್ಯಕ್ತಿ ಗಳಿಗೆ ಮಳಿಗೆ ಬಾಡಿಗೆ ಕೊಡುವ ಸಂದರ್ಭದಲ್ಲಿ ಹಲವು ಅಧಿಕಾರಿಗಳು ಶಾಮೀಲಾಗಿದ್ದಾರೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಸಾಕಷ್ಟು ನಷ್ಡ ಉಂಟಾಗುತ್ತಿದೆ. ಈ ಬಗ್ಗೆ ತನಿಖೆಯಾದರೆ ಎಲ್ಲಾ ಹೊರಬರುತ್ತದೆ ಎಂಬ ವಿಷಯ ಸಾರ್ವಜನಿಕ ವಲಯದಲ್ಲಿ ಚರ್ಚಿತ ಆಗುತ್ತಿರುವ ವಿಷಯವಾಗಿದೆ.
ಈ ಬಗ್ಗೆ ಜಿಲ್ಲಾಧಿಕಾರಿಗಳು ಗಮನಹರಿಸಿ ಸರ್ಕಾರಿ ಕಟ್ಟಡವನ್ನು ಬಾಡಿಗೆಗೆ ಕೊಟ್ಟವರು ಯಾರು ಎಂಬುದನ್ನು ತನಿಖೆ ಮಾಡಿ ಕ್ರಮಕೈಗೋಳ್ಳಲೀ ಮತ್ತು ತನಿಖೆಗೆ ಆದೇಶಸಲೀ ಎಂಬುದು ಸಾರ್ವಜನಿಕರ ಒತ್ತಾಸೆಯಾಗಿದೆ.
ಸರ್ಕಾರದ ಕಟ್ಟಡದಲ್ಲಿ ಖಾಸಾಗಿ ಸಹಕಾರ ಸಂಘದ ಬೋರ್ಡ್ ಹಾಕಿರುವ ವಿಚಾರದಲ್ಲಿ ದಾಖಲೆ ಸಂಗ್ರಹಕ್ಕೆ ನಮ್ಮ ಪತ್ರಿಕೆ ಮುಂದಾಗಿದೆ. ಟ್ರಸ್ಟ್ ಅಧ್ಯಕ್ಷ, ಪತ್ರಿಕೆ ಸಂಪಾದಕನ ಹೆಸರು ಕೇಳಿಬರುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲವೂ ಅ ವ್ಯಕ್ತಿಯ ಹೆಸರು ಪೋಟೋ ಸಮೇತ ಸುದ್ದಿಯನ್ನು ಪ್ರಕಟಿಸಲಾಗುವುದು...ಕಾದು ನೋಡಿ....
ನಗರದ RTO ರಸ್ತೆಯಲ್ಲಿ ಇರುವ ಸರ್ಕಾರಿ ಜಾಗದಲ್ಲಿ ಸರ್ಕಾರದ ಅನುದಾನದಿಂದ ಕಟ್ಟಿರತಕ್ಕಂತಹ.ಬಹು ಮಹಡಿ ಕಟ್ಟಡ ವನ್ನು ಪತ್ರಿಕಾ ಭವನ ವನ್ನು ಖಾಸಾಗಿ ಟ್ರಸ್ಟ್ ಗೆ ಕೊಟ್ಟಿರುವುದು ಮತ್ತು ಖಾಸಾಗಿ ವ್ಯಕ್ತಿ ಟ್ರಸ್ಟ್ ಹೆಸರಿನಲ್ಲಿ ಹಣ ವಸೂಲಿಗೆ ಇಳಿದಿರುವ ವಿಷಯ ಚರ್ಚೆಯಾಗುತ್ತಿರುವ ಸಂದರ್ಭದಲ್ಲಿ ಪ್ರತಿಭಟನೆ ಆಗುತ್ತಿರುವ ಸಂದರ್ಬದಲ್ಲಿ ಜಿಲ್ಲಾಧಿಕಾರಿಗಳು ತನಿಖೆ ಮಾಡುತ್ತಿರುವ ಸಂದರ್ಭದಲ್ಲಿ ಇದೀಗ ಮತ್ತೊಂದು ಇಂತಹದೇ ಪ್ರಕರಣ ಬಯಲಿಗೆ ಬಂದಿದೆ.
22 ವರ್ಷದ ಹಳೇ ಕೊಲೆ ಪ್ರಕರಣ ಅಂಬಿಕಾ ಸ್ಟೋರ್ ಮಾಲಿಕ ವೆಂಕಟೇಶ್ ಅಪಹರಣ ಕೊಲೆ ಪ್ರಕರಣದ ತನಿಖಾ ವರಧಿ ಹೊರಬಂದಿದೆ ಸಾರ್ವಜನಿಕರ ಮುಂದಿಡಲಾಗಿದೆ. ಇನ್ನು ಸಾಕಷ್ಟು ಮತ್ತೆ ಬೇರೆ ಬೇರೆ ಪ್ರಕರಣಗಳು ಸಹ ಸದ್ಯದಲ್ಲಿಯೇ ಹೊರ ಬರಲಿವೆ...ಕಾದು ನೋಡಿ...
Leave a Comment