*ಶ್ರೀ ವರಸಿದ್ಧಿ ವಿನಾಯಕ ಸ್ವಾಮಿಯ ಬ್ರಹ್ಮರಥೋತ್ಸವ*

ಆನಂದಪುರ :ಆನಂದಪುರದ ಸಮಿಪದ ಎಡೇಹಳ್ಳಿ ಗ್ರಾಮದ ಶ್ರೀ ವರ ಸಿದ್ದಿ ವಿನಾಯಕ ಸ್ವಾಮಿಯ 19ನೇ ವರ್ಷದ ಬ್ರಹ್ಮರಥೋತ್ಸವ ಅದ್ದೂರಿಯಾಗಿ ನಡೆಯಿತು.

ಬೆಳಗ್ಗೆ 8 ರಿಂದ ಸಾಮೂಹಿಕ ಗಣ ಹೋಮ, ರಥಾಧಿವಾಸ ಹೋಮ, ರಥಶುದ್ಧಿ ಜರುಗಿತು. ನಂತರ ಮಧ್ಯಾಹ್ನ ಶ್ರೀ ವರಸಿದ್ಧಿ ವಿನಾಯಕ ಸ್ವಾಮಿಯ ರಥೋತ್ಸವ ಅದ್ದೂರಿಯಾಗಿ ಸುತ್ತಮುತ್ತಲೂರಿನ ನೂರಾರು ಭಕ್ತಾದಿಗಳ ಸಮ್ಮುಖದಲ್ಲಿ ಜರುಗಿತು. 

ಮಧ್ಯಾಹ್ನ ಸಾಮೂಹಿಕ ಅನ್ನಸಂತರ್ಪಣೆ ನಡೆಯಿತು. ನಂತರ ಸಂಜೆ ವೇಳೆ  ಶ್ರೀ ವರಸಿದ್ಧಿ ವಿನಾಯಕ ಸ್ವಾಮಿಯ ದೇವಾಲಯದಿಂದ  ಎಡೇಹಳ್ಳಿಯ ವೃತ್ತದ ವರೆಗೆ ರಥ ಸಾಗಿತು..

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.