ಶಿವಮೊಗ್ಗ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್ ಮೇಲೆ FIR ದಾಖಲಿಸಿ ಬಂದನ ಮಾಡುವಂತೆ KWJV ವತಿಯಿಂದ ಜಯನಗರ ಠಾಣೆಗೆ ದೂರು
*****"""""""""
ಕ್ರಾಂತಿ ದೀಪ ದಿನಪತ್ರಿಕೆಯ ಸಂಪಾದಕ ಎನ್.ಮಂಜುನಾಥ್ ಶಿವಮೊಗ್ಗ ಪ್ರೆಸ್ ಟ್ರಸ್ಟ್ ಡೀಡ್ ನಿಯಮ ನಿಬಂಧನೆಗಳನ್ನು ಉಲ್ಲಂಘನೆ ಮಾಡುವುದರ ಜೊತೆಗೆ ನಾನು ಟ್ರಸ್ಟ್ ಅಧ್ಯಕ್ಷ ಎಂದು ಹೆಸರು ಹೇಳಿಕೊಂಡು 10 ವರ್ಷದಿಂದ ಸ್ವಯಂ ಘೋಷಣೆ ಮಾಡಿಕೊಂಡು ಎಲ್ಲಾ ಪತ್ರಕರ್ತರಿಗೆ ಮತ್ತು ಸಾರ್ವಜನಿಕ ರಿಗೆ ಜಿಲ್ಲಾಡಳಿತಕ್ಕೆ, ಸರ್ಕಾರಕ್ಕೆ ಮೋಸ,ವಂಚನೆ ಮಾಡುವುದರ ಜೊತೆಗೆ, ಪತ್ರಿಕಾ ಭವನ ಕಬ್ಜ ಮಾಡಿಕೊಂಡು ಅಧ್ಯಕ್ಷ ಹೆಸರಿನಲ್ಲಿ ಹಣ ವಸೂಲಿ ಮಾಡಿ ಸುದ್ದಿಗೋಷ್ಟಿ, ಪ್ರೆಸ್ ನೋಟ್, ಕಾರ್ಯಕ್ರಮದ ಹೆಸರಿನಲ್ಲಿ ಸರ್ಕಾರದ ಪತ್ರಿಕಾ ಭವನವನ್ನು ದುರುಪಯೋಗ ಮಾಡಿಕೊಂಡು ಹಣ ದುರುಪಯೋಗ ಮಾಡಿಕೊಂಡಿದ್ದಾನೆ.ಈ ಬಗ್ಗೆ ತನಿಖೆ ಮಾಡಿ ಕ್ರಮ ಕೈಗೊಳ್ಳಲು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಶಿವಮೊಗ್ಗ ಘಟಕದಿಂದ ದೂರು ನೀಡಿ ಕ್ರಮ ಕೈಗೊಳ್ಳಲು ಮನವಿ ಮಾಡಲಾಗುತ್ತಿದೆ.
ಹಣಕಾಸಿನ ಲೆಕ್ಕಾಚಾರವನ್ನು ಸಹ ಇದುವರೆಗೂ ನೀಡಿಲ್ಲ. ಯಾವುದೇ ಟ್ರಸ್ಟ್ ಸಂಬಂಧಿಸಿದಂತೆ ಚುನಾವಣೆ ಸಹ ಇದುವರೆಗೂ ನಡೆಸಿಲ್ಲ. ಶಿವಮೊಗ್ಗ ಪ್ರೆಸ್ ಟ್ರಸ್ಟ್ ಆಡಳಿತ ಮಂಡಳಿಯನ್ನು ವಿಸರ್ಜಿಸಿ ಆಡಳಿತಾಧಿಕಾರಿಯನ್ನು ನೇಮಿಸುವಂತೇ ಒತ್ತಾಯಿಸಲಾಗಿದೆ.
ಶಿವಮೊಗ್ಗ ಪ್ರೆಸ್ ಟ್ರಸ್ಟ್ 2009-10 ನೇ ಸಾಲಿನಲ್ಲಿ ದಿನಾಂಕ 28-5-2009 ರಂದು ಶಿವಮೊಗ್ಗದ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೊಂದಣಿಯಾಗಿದೆ. ನೊಂದಣಿ ನಂಬರ್ SMG-4-00043/2009-10 ದಿನಾಂಕ 28-5-2009 ಆಗಿದೆ. ಟ್ರಸ್ಟಿನ ಡೀಡ್ ಎಲ್ಲಾ ನಿಯಮಗಳನ್ನು ಮತ್ತು ನಿಬಂಧನೆಗಳನ್ನು ಇತ್ತೀಚೆಗೆ ಗಾಳಿಗೆ ತೂರಲಾಗಿದೆ.ಹಲವಾರು ವರ್ಷದಿಂದ ಒಬ್ಬನೇ ವ್ಯಕ್ತಿ ಶಿವಮೊಗ್ಗ ಪ್ರೆಸ್ ಟ್ರಸ್ಟ್ ಅಧ್ಯಕ್ಷನಾಗಿದ್ದಾನೆ.
ಟ್ರಸ್ಟ್ ಸಂಬಂಧಿಸಿದಂತೆ ಚುನಾವಣೆ ಸಹ ಇದುವರೆಗೂ ನಡೆಸಿಲ್ಲ. ಆದ್ದರಿಂದ ಶಿವಮೊಗ್ಗ ಪ್ರೆಸ್ ಟ್ರಸ್ಟ್ ಆಡಳಿತ ಮಂಡಳಿಯನ್ನು ವಿಸರ್ಜಿಸಿ ಆಡಳಿತಾಧಿಕಾರಿಯನ್ನು ನೇಮಿಸುವಂತೇ ಕೋರಲಾಗಿದೆ.ತನಿಖೆ ಮಾಡಿ ಪತ್ರಿಕಾ ಭವನಕ್ಕೆ ಕೂಡ ಆಡಳಿತಾಧಿಕಾರಿ ನೇಮಿಸುವಂತೇ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ, ಶಿವಮೊಗ್ಗ ಘಟಕದಿಂದ ಒತ್ತಾಯಿಸಲಾಗಿದೆ..
ಟ್ರಸ್ಟ್ ಡೀಡ್ ಪ್ರಕಾರ*ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರೇ ಶಿವಮೊಗ್ಗ ಪ್ರೆಸ್ ಟ್ರಸ್ಟಿನ ಅಧ್ಯಕ್ಷರಾಗಬೇಕು!!
ಪ್ರೆಸ್ ಟ್ರಸ್ಟ್ ಡೀಡ್ ನಿಯಮದಂತೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರೇ ಟ್ರಸ್ಟಿನ ಅಧ್ಯಕ್ಷರಾಗುತ್ತಾರೆ.ಇದರಂತೇ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಹಾಲಿ ಅಧ್ಯಕ್ಷರಾದ ಕೆ.ವಿ.ಶಿವಕುಮಾರ್ ನಮ್ಮನಾಡು ಪತ್ರಿಕೆ ಸಂಪಾದಕರು ಇವರು ಟ್ರಸ್ಟಿನ ಅಧ್ಯಕ್ಷರಾಗಬೇಕು. ಆದರೇ ಅವರಿಗೆ ಅಧಿಕಾರ ಬಿಟ್ಟು ಕೊಟ್ಟಿಲ್ಲ. ಅದರ ಹಿಂದಿನ ಅಧ್ಯಕ್ಷ ಎನ್. ರವಿಕುಮಾರ್ ಶಿವಮೊಗ್ಗ ಟೆಲೆಕ್ಸ್ ಸಂಪಾದಕ ಇವರಿಗೆ ಅಧ್ಯಕ್ಷ ಸ್ಥಾನ ಬಿಟ್ಟು ಕೊಡಲಿಲ್ಲ. ಇದು ಸಹ ಟ್ರಸ್ಟ್ ಡೀಡ್ ನಿಯಮ ಪಾಲನೆ ಆಗಿಲ್ಲ.ಮೋಸ,ವಂಚನೆ ಆಗಿದೆ.
ಕ್ರಾಂತಿದೀಪ ಪತ್ರಿಕೆ ಸಂಪಾದಕ ಹಲವಾರು ವರ್ಷದಿಂದ ಶಿವಮೊಗ್ಗ ಪ್ರೆಸ್ ಟ್ರಸ್ಟಿನ ಅಧ್ಯಕ್ಷನಾಗಿ ಮುಂದುವರಿದಿದ್ದಾನೆ.ಯಾರಿಗೂ ಹುದ್ದೆಯನ್ನು ಬಿಟ್ಟು ಕೊಟ್ಟಿಲ್ಲ. ಇವನು ಮಾತನಾಡುವುದನ್ನು ಯಾರಾದರೂ ಕೇಳಿದರೇ ಪತ್ರಕರ್ತರಲ್ಲಿ ಇವನೊಬ್ಬನೇ ಸತ್ಯ ಹರಿಶ್ಚಂದ್ರ ಅಂತಾ ಹೇಳುತ್ತಾ ಬಾಷಣ ಬಿಗಿಯುತ್ತಾನೆ.ಈತನ ಜೊತೆಯಲ್ಲಿ ಸಲ್ಯೂಟ್ ಹೊಡೆಯುತ್ತಾ ಇದ್ದ ಪತ್ರಕರ್ತರು ಮಾತ್ರ ಪತ್ರಕರ್ತರು.ಇನ್ನುಳಿದ ಪತ್ರಕರ್ತರು ನಕಲಿ ಪತ್ರಕರ್ತರು ಅಂತಾ ಬರುವ ಅಧಿಕಾರಿಗಳಿಗೆ ಜನಪ್ರತಿನಿಧಿಗಳಿಗೆ ಚಾಡಿ ಹೇಳಿ ದಾರಿ ತಪ್ಪಿಸುತ್ತಾನೆ.ಪತ್ರಿಕಾ ಭವನವನ್ನು ಇವನ ಸ್ವಂತದ ಆಸ್ತಿ ಮಾಡಿಕೊಂಡು ಬರುವ ಆದಾಯವನ್ನು ಉಂಡುತಿಂದು ತೇಗಿ ಆಯಾಗಿ ಇದ್ದಾನೆ. ಈತನ ಕಿರುಕುಳಕ್ಕೆ ಹಲವಾರು ಪತ್ರಕರ್ತರು ರೋಸಿಹೋಗಿದ್ದಾರೆ. ಕೆಲವು ಟ್ರಸ್ಟಿಗಳು ಸಹ ಈತನ ನಡವಳಿಕೆಯನ್ನು ನೋಡಿ ದೂರ ಉಳಿದಿದ್ದಾರೆ. ಹೊಸಬರು ಬೆಳೆಯಲು ಬಿಡಲ್ಲ. ಇವನಿಗೆ ಹೇಳುವವರು.. ಕೇಳುವವರು.. ಯಾರು ಇಲ್ಲವಂತಾಗಿದೆ.
ಯಾವುದೇ ಟ್ರಸ್ಟಿಯು ಒಂದು ಪದಾಧಿಕಾರಿ ಹುದ್ದೆಗೆ ನಿರಂತರವಾಗಿ 2 ಬಾರಿಗಿಂತ ಹೆಚ್ಚು ಸ್ಪರ್ಧಿಸುವಂತಿಲ್ಲ.
ನಾಮಕರಣಹೊಂದಿದ ಸದಸ್ಯರು ಮತ್ತು ಪದನಿಮಿತ್ತ ಟ್ರಸ್ಟಿಗಳು ಮತದಾನದಲ್ಲಿ ಭಾಗವಹಿಸುವಂತಿಲ್ಲ.
ಕೇವಲ ಸಲಹೆಗಳನ್ನು ನೀಡಬಹುದು. ಆಡಳಿತಾತ್ಮಕ ಹಕ್ಕು ಅವರಿಗೆ ಇರುವುದಿಲ್ಲ. ಇದು ಟ್ರಸ್ಟಿನ ನಿಯಮವಾಗಿದೆ. ಇದು ಸಹ ಉಲ್ಲಂಘನೆ ಆಗಿದೆ.
ಎನ್.ಮಂಜುನಾಥ್ ಸಂಪಾದಕರು ಕ್ರಾಂತಿ ದೀಪ ಪತ್ರಿಕೆ ಮತ್ತು ವೈ.ಕೆ.ಸೂರ್ಯ ನಾರಾಯಣ್ ಎಚ್ಚರಿಕೆ ಪತ್ರಿಕೆಯ ಸಂಪಾದಕರು ಶಿವಮೊಗ್ಗ ಪ್ರೆಸ್ ಟ್ರಸ್ಟ್ ನ ನಿರ್ಮಾತೃಗಳು ಆಗಿರುತ್ತಾರೆ.ಈ ಟ್ರಸ್ಟ್ ಪ್ರಾರಂಭದಲ್ಲಿ ರೂ.12,500-00 ಬಂಡವಾಳವನ್ನು ಹೂಡಿಕೆ ಮಾಡಿದ ಟ್ರಸ್ಟ್ ಆಗಿರುತ್ತದೆ.ಪ್ರಾರಂಭದಲ್ಲಿ 23 ಜನ ಟ್ರಸ್ಟಿಗಳನ್ನು ಒಳಗೊಂಡ ಟ್ರಸ್ಟ್ ನ್ನು ರಚಿಸಿ,11 ಜನ ಟ್ರಸ್ಟಿಗಳ ಪ್ರಥಮ ಆಡಳಿತ ಮಂಡಳಿಯನ್ನು ಹಾಗೂ ಪಧಾದಿಕಾರಿಗಳನ್ನು ನೇಮಕ ಮಾಡಲಾಗಿತ್ತು,ಟ್ರಸ್ಟಿಗಳು ಆಜೀವ ಪರ್ಯಂತ ಟ್ರಸ್ಟಿಗಳಾಗಿರುತ್ತಾರೆ.
ಟ್ರಸ್ಟ್ ಉದ್ದೇಶ ವೃತ್ತ ಪತ್ರಿಕೆಗಳ ಮತ್ತು ಪತ್ರಕರ್ತರ ಹಿತಕಾಯುವುದು ಅವರ ಅಭಿವೃದ್ಧಿ ಗೆ ಸಂಬಂದಿಸಿದ ಚಟುವಟಿಕೆಗಳು ಮತ್ತು ಇತರೇ ಚಟುವಟಿಕೆಗಳ ಸಂಬಂದ ರಚನೆಯಾಗಿದೆ.ಇದೊಂದು ಚಾರಿಟಬಲ್ ಪಬ್ಲಿಕ್ ಟ್ರಸ್ಟ್ ಆಗಿದೆ. ಬೈಲಾದಲ್ಲಿ ಲಾಭಗಳಿಸುವ ಉದ್ದೇಶ ಇಲ್ಲ ಎಂದು ನಮೂದಾಗಿದೆ.ಆದರೆ ಪತ್ರಿಕಾ ಭವನದಲ್ಲಿ ಹಣ ವಸೂಲಿ ಮಾಡಿ ಲಾಭ ಮಾಡಿಕೊಳ್ಳಲಾಗಿದೆ. ಇದು ಸಹ ಟ್ರಸ್ಟ್ ಡೀಡ್ ಉಲ್ಲಂಘನೆ ಆಗಿದೆ.
ಶಿವಮೊಗ್ಗ ನಗರ ವ್ಯಾಪ್ತಿಯ 23 ಜನ ಹಿರಿಯ ಪತ್ರಕರ್ತರು ಟ್ರಸ್ಟಿಗಳಾಗಿರುತ್ತಾರೆ.
ಟ್ರಸ್ಟಿಗಳಾಗಲು ಕನಿಷ್ಠ 5 ವರ್ಷ ಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸಿರಬೇಕು. 62 ವರ್ಷ
ವಯೋಮಿತಿಯೊಳಗಿರಬೇಕು ಹಾಗೂ ಹಾಲಿ ಪತ್ರಕರ್ತರಾಗಿ ಕಾರ್ಯನಿರ್ವಹಿಸುತ್ತಿರಬೇಕು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಾಗಿರಬೇಕು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ, ಉಪಾಧ್ಯಕ್ಷರು, ನಗರ
ಕಾರ್ಯದರ್ಶಿ ಮತ್ತು ಖಜಾಂಚಿಯವರು ಟ್ರಸ್ಟಿನ ಪದನಿಮಿತ್ತ ಟಸ್ಪಿಯಾಗಿರುತ್ತಾರೆ.
.ಪ್ರಥಮ ಆಡಳಿತ ಮಂಡಳಿಯಲ್ಲಿ ಈ ಟ್ರಸ್ಟಿಗಳ ಪೈಕಿ 11 ಮಂದಿ ಪದಾಧಿಕಾರಿಗಳಿರುತ್ತಾರೆ. ಪ್ರತಿ 3 ವರ್ಷಕ್ಕೊಮ್ಮೆ ಈ
ಕಾರ್ಯಕಾರಿ ಸಮಿತಿ ಸದಸ್ಯ ಸ್ಥಾನಕ್ಕೆ ಚುನಾವಣೆ ನಡೆಯಬೇಕು. ಟ್ರಸ್ಟಿಗಳಿಗೆ ಮಾತ್ರ ಮತದಾನದ ಹಕ್ಕಿರುತ್ತದೆ.
ಉಪಾಧ್ಯಕ್ಷ ಕಾರ್ಯದರ್ಶಿ, ಸಹಕಾರ್ಯದರ್ಶಿ, ಖಜಾಂಚಿ ಹುದ್ದೆ ಹಾಗೂ 6 ಕಾರ್ಯಕಾರಿ ಟ್ರಸ್ಟಿಗಳ ಸ್ಥಾನಕ್ಕೆ
ಚುನಾವಣೆ ನಡೆಯಬೇಕು.ಆದರೆ ಇದುವರೆಗೂ ಚುನಾವಣೆ ನಡೆಸಿಲ್ಲ. ಇದು ಸಹ ನಿಯಮ ಜಾರಿಗೆ ಬಂದಿಲ್ಲ ಟ್ರಸ್ಟ್ ಡೀಡ್ ಬೈಲಾ ಉಲ್ಲಂಘನೆ ಯಾಗಿದೆ.
ಮೊದಲ ಅವಧಿಗೆ 2008ನೇ ಸಾಲಿನಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಆಯ್ಕೆಯಾದ
ಅಧ್ಯಕ್ಷರು, ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿ, ನಗರ ಕಾರ್ಯದರ್ಶಿ, ಖಜಾಂಚಿ ಯವರು ಕ್ರಮವಾಗಿ ಟ್ರಸ್ಟಿನ
ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ, ಸಹ ಕಾರ್ಯದರ್ಶಿ, ಖಜಾಂಚಿಗಳನ್ನಾಗಿ ನೇಮಕಗೊಳಿಸಲಾಗಿದೆ. ಇವರೇ ಇಲ್ಲಿಯವರೆಗೂ ಮುಂದುವರಿದಿದ್ದಾರೆ.
ಮೊದಲ ಅವಧಿ ನಂತರ ಅಧ್ಯಕ್ಷ ಹುದ್ದೆಯನ್ನು ಹೊರತುಪಡಿಸಿ ಟ್ರಸ್ಟ್ ನಲ್ಲಿ ಉಳಿದ ಹುದ್ದೆಗಳಿಗೆ ಚುನಾವಣೆ ನಡೆಯಬೇಕು ಎಂಬುದು ನಿಯಮ ಪಾಲನೆ ಆಗಿಲ್ಲ ಇದು ಸಹ ಟ್ರಸ್ಟ್ ಡೀಡ್ ಉಲ್ಲಂಘನೆ ಆಗಿದೆ.
ಇದೀಗ ಶಿವಮೊಗ್ಗ ಪ್ರೆಸ್ ಟ್ರಸ್ಟ್ ಅಧ್ಯಕ್ಷರು ಬೈಲಾ ಉಲ್ಲಂಘನೆ ಮಾಡುತ್ತಿರುವ ಬಗ್ಗೆ ಮತ್ತು ಸರ್ಕಾರದ ಪತ್ರಿಕಾಭವನ ದಲ್ಲಿ ಹಣ ವಸೂಲಿ ಮಾಡಿ ಲೆಕ್ಕಾಚಾರವನ್ನು ಕೊಡದೇ ಅವ್ಯವಹಾರ ನಡೆಯುತ್ತಿರುವ ಬಗ್ಗೆ ಈಗಾಗಲೇ ದೂರು ಅರ್ಜಿಯನ್ನು ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗಿದೆ. ಶಿವಮೊಗ್ಗ ಪ್ರೆಸ್ ಟ್ರಸ್ಟ್ ಗೆ ಮತ್ತು ಪತ್ರಿಕಾಭವನ ಕ್ಕೆ ಆಡಳಿತಾಧಿಕಾರಿ ನೇಮಿಸುವಂತೇ ಒತ್ತಾಯಿಸಲಾಗಿದೆ.
ನಮ್ಮ ಸಂಘಟನೆ ನ್ಯಾಯಯುತ ಹೋರಾಟಕ್ಕೆ ಮುಂದಾಗಿದೆ. ಪತ್ರಿಕಾ ಭವನ ಶಿವಮೊಗ್ಗ ಜಿಲ್ಲೆಯ ಎಲ್ಲಾ ಪತ್ರಕರ್ತರಿಗೆ ಸೇರತಕ್ಕದ್ದು.ಆದರೇ ಒಬ್ಬ ವ್ಯಕ್ತಿಯ ಸ್ವಂತ ಆಸ್ತಿ ಯಂತಾಗಿದೆ.
ಸರ್ಕಾರದ ಅನುದಾನ, ಜನಪ್ರತಿನಿಧಿಗಳ ಅನುದಾನದ ಹಣದಿಂದ ಕಟ್ಟಿದ ಪತ್ರಿಕಾ ಭವನ ಅದು.ಪ್ರೆಸ್ ಟ್ರಸ್ಟ್ ಬೋರ್ಡ್ ಮೊದಲಿಗೆ ಪತ್ರಿಕಾಭವನದಿಂದ ತೆಗೆಸಬೇಕು.ಇವರು ಬೇರೆ ಕಡೆ ಕಚೇರಿ ಮಾಡಿಕೊಂಡು ಇರಲಿ. ಈ ಬಗ್ಗೆ ಸಹ ಕಾನೂನು ಕ್ರಮ ಕೈಗೊಳ್ಳಲು ಒತ್ತಾಯಿಸಲಾಗಿದೆ.
ಠಾಣಾಧಿಕಾರಿಗಳಲ್ಲಿ ಮತ್ತು
ದಕ್ಷ,ಪ್ರಾಮಾಣಿಕ ಶಿವಮೊಗ್ಗ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾರಕ್ಷಣಾಧಿಕಾರಿಗಳು ಇತ್ತ ಕಡೆ ಗಮನಹರಿಸಿ ಸೂಕ್ತವಾದ ತನಿಖೆ ನಡೆಸಿ ಕಾನೂನು ಕ್ರಮಕೈಗೊಳ್ಳಬೇಕು.
ಶಿವಮೊಗ್ಗ ಪ್ರೆಸ್ ಟ್ರಸ್ಟ್ ವಿರುದ್ದ ಮತ್ತು ಅಧ್ಯಕ್ಷ ನ ವಿರುದ್ದ ಸೂಕ್ತವಾದ ಕ್ರಮ ಕೈಗೊಳ್ಳದಿದ್ದಲ್ಲಿ ಸಂಬಂಧಿಸಿದ ಅಧಿಕಾರಿಗಳ ವಿರುದ್ದ ನ್ಯಾಯಕ್ಕಾಗಿ ನ್ಯಾಯಾಲಯದ ಮೊರೆ ಹೋಗಲಾಗುತ್ತದೆ ಎಂದು ಮನವಿ ನೀಡಲಾಗಿದೆ.
Leave a Comment