ಆನಂದಪುರ: ಹೆಚ್ಚಾದ ಆನೆ ಹಾವಳಿ*...*ಸರ್ಕಾರ ಕೂಡಲೇ ಪರಿಹಾರ ನೀಡುವಂತೆ ಒತ್ತಾಯ
ಇವರು ಆನಂದಪುರದ ಪತ್ರೆಹೊಂಡದಲ್ಲಿ ಆನೆ ಹಾನಿ ಮಾಡಿದ ಪ್ರದೇಶಕ್ಕೆ ಭೇಟಿ ನೀಡಿ ಮಾತನಾಡಿದರು.
ಆನೆಗಳ ಹಾವಳಿಯಿಂದ ರೈತರು ಅನೇಕ ನಷ್ಟವನ್ನು ಅನುಭವಿಸುತ್ತಿದ್ದಾರೆ. ಅಡಿಕೆ ಮತ್ತು ತೆಂಗನ್ನು ಅವರು ಮಕ್ಕಳು ಸಾಕಿದಂತೆ ಸಾಕಿರುತ್ತಾರೆ. ಇದನ್ನು ಬೆಳೆಸುವಾಗ ಅನೇಕ ಕಷ್ಟವನ್ನು ಹಾಗೂ ನಷ್ಟವನ್ನು ಒಳಗಾಗುತ್ತಾರೆ .ಇದನ್ನರಿತು ಸರ್ಕಾರ ಕೂಡಲೇ ಪ್ರತಿ ಅಡಿಕೆ ಮರಕ್ಕೆ 25 ಸಾವಿರ ರೂಪಾಯಿ ಯಂತೆ ಪರಿಹಾರವನ್ನು ದೊರಕಿಸಿಕೊಡಬೇಕೆಂದು ಆಗ್ರಹಿಸಿದರು.
ಹಾಗೆ ಆನೆಗಳನ್ನು ಇಲ್ಲಿಂದ ಓಡಿಸುವ ಕೆಲಸ ಆದಷ್ಟು ಬೇಗನೇ ಆಗಬೇಕು ಇದಕ್ಕೆ ಗ್ರಾಮಸ್ಥರು ಸಹಕಾರ ಕೊಡಲು ತಯಾರಿದ್ದಾರೆ, ಆದರೆ ಅಧಿಕಾರಿಗಳು ಉದಾಸಿನ ಮಾಡುತ್ತಿದ್ದಾರೆಂದು ನನಗೆ ಅನಿಸುತ್ತಿದೆ ಎಂದು ಅಭಿಪ್ರಾಯ ಪಟ್ಟರು.
ಹಾಗೆ ಪ್ರಮುಖವಾಗಿ ಖಾತೆ ಇರದವರು ಸಹ ರೈತರು ಇವರು ಆನೆಗಳ ಹಾವಳಿಯಿಂದ ಆರ್ಥಿಕ ನಷ್ಟವನ್ನು ಅನುಭವಿಸಿದ್ದಾರೆ ಸರ್ಕಾರ ಇವರಿಗೂ ಸಹ ಪರಿಹಾರವನ್ನು ದೊರಕಿಸಿಕೊಡಬೇಕು ಒತ್ತಾಯಿಸಿದರು.
ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ರತ್ನಾಕರ ಹೊನಗೋಡು ರವರು ಮಾತನಾಡಿ ಈ ಭಾಗದಲ್ಲಿ ಆನೆಗಳು ಬಹಳಷ್ಟು ರೈತರ ತೆಂಗು,ಅಡಿಕೆ, ಬಾಳೆಯನ್ನು ಹಾನಿ ಮಾಡಿದೆ. ಒಂದು ಅಡಿಕೆ ಮರ ಬೆಳೆಸಲು 15 ರಿಂದ 20 ಸಾವಿರ ರೂಪಾಯಿ ಖರ್ಚಾಗುತ್ತದೆ ಇಲ್ಲಿ ಅಪಾರವಾದ ಅಡಿಕೆ ನಾಶವಾಗಿದೆ.ಆದರೆ ನಮ್ಮ ಕ್ಷೇತ್ರದಲ್ಲಿ ಶಾಸಕರು ಇದರ ಬಗ್ಗೆ ಗಮನವೇ ಹರಿಸುತ್ತಿಲ್ಲ ಅಧಿಕಾರಿಗಳ ಸಭೆ ಕರಿಯುತ್ತಿರಲಿಲ್ಲ ಇದಕ್ಕೆ ಪರಿಹಾರವೂ ಸೂಚಿಸುತ್ತಿಲ್ಲ, ಸುಮ್ಮನೆ ಕಾಟಾಚಾರಕ್ಕೆ ಬಂದು ಹೋಗುತ್ತಿದ್ದಾರೆ.ಹಾಗೂ ಇವರ ಆಪ್ತರು ಪ್ರಚಾರಕ್ಕಾಗಿ ಬೇಟಿ ನೀಡಿ ಹೋಗುವಂತ ಕೆಲಸವಾಗುತ್ತಿದೆ ಎಂದರು .
ಈ ಸಂದರ್ಭದಲ್ಲಿ ಶಾಂತಕುಮಾರ್,ರೇವಪ್ಪ ಪಟೇಲ್, ಗೀತಮ್ಮ,ದೇವೇಂದ್ರಪ್ಪ ಯಲಕುದ್ಲಿ,ಚಂದ್ರು,ಪ್ರಕಾಶ್ ಹಾಗೂ ಇತರರು ಇದ್ದರು.

Leave a Comment