ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವದ ಪಥಸಂಚಲನಕ್ಕೆ ಆಯ್ಕೆಯಾದ ಶಿವಮೊಗ್ಗದ ಪ್ರಜ್ವಲ್
ಶಿವಮೊಗ್ಗ ಡಿ ೩೦ : ಜನವರಿ ೨೬ ರಂದು ದೆಹಲಿಯ ಕೆಂಪು ಕೋಟೆಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವದ ಪಥಸಂಚಲನಕ್ಕೆ ಶಿವಮೊಗ್ಗದ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ ದ್ವಿತೀಯ ಬಿ.ಕಾಂ ಹಾಗೂ ಎನ್‌ಎಸ್ಎಸ್ ಸ್ವಯಂ ಸೇವಕ ಪ್ರಜ್ವಲ್.ಪಿ ಆಯ್ಕೆಯಾಗಿದ್ದಾರೆ. ಗಣರಾಜ್ಯೋತ್ಸವ ಸಮಾರಂಭದ ಪಥಸಂಚಲನದಲ್ಲಿ ಭಾಗವಹಿಸಲು ಭಾರತ ಸರ್ಕಾರ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದಿಂದ ಆಯ್ಕೆಯಾಗಿದ್ದು, ಕರ್ನಾಟಕದ ಎನ್ಎಸ್ಎಸ್ ವಿದ್ಯಾರ್ಥಿ ಸ್ವಯಂ ಸೇವಕ - ಸೇವಕಿಯರ ಎನ್ಎಸ್‌ಎಸ್‌ತಂಡ ಗಣರಾಜ್ಯೋತ್ಸವದ ಪಥಸಂಚಲನ ಶಿಬಿರದಲ್ಲಿ ಪಾಲ್ಗೊಳ್ಳಲು ಇದೆ ಡಿಸೆಂಬರ್‌೨೯ ರಂದು ಬೆಂಗಳೂರಿನಿಂದ ಹೊರಟು ಚೆನೈ ಮಾರ್ಗವಾಗಿ ದೆಹಲಿಗೆ ಪ್ರಯಾಣ ಬೆಳಸಲಿದ್ದಾರೆ.ಕರ್ನಾಟಕದಿಂದ ಆರು ಜನ ಸ್ವಯಂ ಸೇವಕರು ಆಯ್ಕೆಯಾಗಿದ್ದು, ಕುವೆಂಪು ವಿಶ್ವವಿದ್ಯಾಲಯದಿಂದ ಪ್ರಜ್ವಲ್ ಪಿ ಶಿವಮೊಗ್ಗ ನಗರದ ಪ್ರಕಾಶ್ ಬಿ.ಎಂ ಹಾಗೂ ಉಮಾ ಬಿ.ಎಲ್ ರವರ ಪುತ್ರರಾಗಿದ್ದು ಇವರ ಆಯ್ಕೆಯು ಕುವೆಂಪು ವಿಶ್ವವಿದ್ಯಾಲಯಕ್ಕೆ, ರಾಷ್ಟ್ರೀಯ ಶಿಕ್ಷಣ ಸಂಸ್ಥೆಗೆ, ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿಗೆ ತುಂಬಾ ಹೆಮ್ಮೆಯ ವಿಷಯವಾಗಿದ್ದು, ಗಣರಾಜ್ಯೋತ್ಸವದ ಸಮಾರಂಭದಲ್ಲಿ ಅತ್ಯುತ್ತಮ ಕವಾಯಿತು ಪ್ರದರ್ಶಿಸುವ ಮೂಲಕ ಶಿಬಿರವನ್ನು ಯಶಸ್ವಿಯಾಗಿ ಪೂರೈಸಿ ರಾಜ್ಯಕ್ಕೆ, ಶಿವಮೊಗ್ಗ ಜಿಲ್ಲೆಗೆ ಕೀರ್ತಿ ತರುವಂತಾಗಲಿ ಎಂದು ವಿಶ್ವ ವಿದ್ಯಾಲಯದ ಅಧಿಕಾರಿವರ್ಗ, ರಾಷ್ಟ್ರೀಯ ಶಿಕ್ಷಣ ಸಮಿತಿಯ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಪದಾಧಿಕಾರಿಗಳು, ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ ಪ್ರಾಂಶುಪಾಲರು, ಎನ್‌ಎಸ್ಎಸ್ ಅಧಿಕಾರಿಗಳು ಅಧ್ಯಾಪಕರು, ಅಧ್ಯಾಪಕೇತರರು ಹಾಗೂ ವಿದ್ಯಾರ್ಥಿ ವೃಂದವು ಶುಭ ಹಾರೈಸಿದೆ.
Leave a Comment