*ಶಿವಮೊಗ್ಗ ಜಿಲ್ಲಾ ೧೯ ನೆಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸರ್ವಾಧ್ಯಕ್ಷರ ಆಯ್ಕೆ*
*ಶಿವಮೊಗ್ಗ :-ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾ ಸಮಿತಿ ನೇತೃತ್ವದಲ್ಲಿ ಡಿ. ೨೮ ರಂದು ಸಂಜೆ ಜಿಲ್ಲಾ ಅಧ್ಯಕ್ಷರಾದ ಶ್ರೀ ಡಿ. ಮಂಜುನಾಥ ಅವರ ಅಧ್ಯಕ್ಷತೆಯಲ್ಲಿ ನಡೆದ ಮೂರು ಸಂಸ್ಥೆಗಳ ಜಿಲ್ಲಾ, ತಾಲ್ಲೂಕು, ಹೋಬಳಿ ಸಮಿತಿಗಳ ಸಭೆಯಲ್ಲಿ ಶಿವಮೊಗ್ಗ ಜಿಲ್ಲಾ ೧೯ ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರ ಆಯ್ಕೆ, ಸಮ್ಮೇಳನದ ಗೋಷ್ಠಿ, ಅತಿಥಿಗಳು ಸೇರಿದಂತೆ ಹಲವು ವಿಚಾರಗಳ ಚರ್ಚೆ ನಡೆಸಲಾಯಿತು.
ಸಮ್ಮೇಳನಕ್ಕೆ ನಾಲ್ಕು ಸಾವಿರ ಪ್ರತಿನಿಧಿಗಳ ನೋಂದಣಿ ಕಾರ್ಯ ಮಾಡಬೇಕು. ಪ್ರತಿ ನಿಧಿ ಶುಲ್ಕ ರೂ. ಎರಡು ನೂರು ನಿಗದಿ ಮಾಡಲಾಗಿದ್ದು. ಹೋಬಳಿ, ತಾಲ್ಲೂಕು, ಜಿಲ್ಲಾ ಸಮಿತಿ ಪದಾಧಿಕಾರಿಗಳು ಪ್ರತಿನಿಧಿ ನೋಂದಣಿಗೆ ಸಹಕರಿಸಲು ಕೋರಲಾಯಿತು. ಪ್ರತಿನಿಧಿಗಳಿಗೆ ಎರಡು ದಿನ ಊಟ, ತಿಂಡಿ, ಕಾಫಿ, ಟೀ ಜೊತೆಯಲ್ಲಿ ಉತ್ತಮ ಕಾರ್ಯಕ್ರಮ ವ್ಯವಸ್ಥೆ ಮಾಡಲಾಗುವುದು. ಸಾವಿರಾರು ಸಂಖ್ಯೆಯಲ್ಲಿರುವ ಕಸಾಪ ಸದಸ್ಯರು, ಅಭಿಮಾನಿಗಳು, ಕನ್ನಡದ ಮನಸ್ಸುಗಳನ್ನು ಸಂಪರ್ಕ ಮಾಡಿ ಪ್ರತಿ ನಿಧಿಗಳನ್ನು ನೋಂದಾಯಿಸಿಕೊಳ್ಳಲು ತೀರ್ಮಾನ ಮಾಡಲಾಯಿತು. ನೋಂದಣಿಗೆ ರಶೀದಿ, ಕರ ಪತ್ರ ವಿತರಿಸಲಾಯಿತು.*
*೨೦೨೫ ನೆಯ ಫೆಬ್ರವರಿ ೬ ಮತ್ತು ೭ ರಂದು ಗುರುವಾರ, ಶುಕ್ರವಾರ ಶಿವಮೊಗ್ಗ ಸಾಹಿತ್ಯ ಗ್ರಾಮದಲ್ಲಿ ನಡೆಸಲು ತೀರ್ಮಾನ ಮಾಡಲಾಯಿತು.*
*ಸಮ್ಮೇಳನ ಸರ್ವಾಧ್ಯಕ್ಷರಾಗಿ ತೀರ್ಥಹಳ್ಳಿ ಯ ಹಿರಿಯ ಸಾಹಿತಿಗಳಾದ ಡಾ. ಜೆ. ಕೆ. ರಮೇಶ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಡಿ. ಮಂಜುನಾಥ ಎಲ್ಲರ ಕರತಾಡನದ ನಡುವೆ ಅವರ ಹೆಸರನ್ನು ಪ್ರಕಟಿಸಿದರು.*
Leave a Comment