*ಆನೆ ಹಾನಿ ಮಾಡಿದ ಪ್ರದೇಶಕ್ಕೆ ಶಾಸಕರ ಭೇಟಿ*...
ಆನಂದಪುರ :ಕಾಡುಗಳೆಲ್ಲ ಕಡಿದು ಊರಾಗಿದೆ ಇದರಿಂದ ಕಾಡುಪ್ರಾಣಿಗಳು ಊರಿಗೆ ಬರುತ್ತಿರುವುದು ಸಹಜ ಎಂದು ಶಾಸಕರು ಹಾಗೂ ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಗೋಪಾಲಕೃಷ್ಣ ಬೇಳೂರು ತಿಳಿಸಿದರು.
ಇವರು ಸಮೀಪದ ಕಂಚಾಳಸರ ದಲ್ಲಿ ಆನೆಗಳಿಂದ ಹಾನಿಗೊಳಗಾದ ಪ್ರದೇಶಕ್ಕೆ ಭೇಟಿ ನೀಡಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ನಮ್ಮ ಕ್ಷೇತ್ರದಲ್ಲಿ ಆನೆಗಳು ರೈತರ ಜಮೀನಿಗೆ ನುಗ್ಗಿ ಹಾನಿಯನ್ನು ಉಂಟು ಮಾಡಿದೆ, ಇದನ್ನೆಲ್ಲ ಇಲಾಖೆಯ ಅಧಿಕಾರಿಯೊಂದಿಗೆ ಚರ್ಚಿಸಿ ಅರಣ್ಯ ಇಲಾಖೆ ಕಾಯ್ದೆಯ ಪ್ರಕಾರ
ಸೂಕ್ತವಾದ ದಾಖಲೆಯನ್ನು ಹೊಂದಿದ ರೈತರಿಗೆ ಆದಷ್ಟು ಬೇಗನೆ ಪರಿಹಾರ ದೊರಕಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.
ಹಾಗೆ ಆನೆಗಳನ್ನು ಯಾವುದೇ ಕಾರಣಕ್ಕೂ ತಡೆಹಿಡಿಯಲಾಗುವುದಿಲ್ಲ ಆದ್ದರಿಂದ ರೈತರು ಯಾವುದೇ ಕಾರಣಕ್ಕೂ ಎದೆಗುಂದದಿರಿ ನಿಮ್ಮ ಜೊತೆ ನಮ್ಮ ಸರ್ಕಾರ ಹಾಗೂ ನಾವು ಇದ್ದೇವೆ .ಹಾಗೆ ಮುಖ್ಯವಾಗಿ ಇತ್ತೀಚಿನ ದಿನಗಳಲ್ಲಿ ರೈತರಿಗೆ ಮಂಗಗಳು ಬಹಳಷ್ಟು ಕಾಟಗಳನ್ನು ನೀಡುತ್ತಿದ್ದಾವೆ ಇದಕ್ಕೆ ಸೂಕ್ತ ಸಲಹೆ ಎಂದರೆ ನಮ್ಮ ಅರಣ್ಯ ಇಲಾಖೆಗೆ ಅರ್ಜಿಯನ್ನು ಕೊಟ್ಟರೆ ಮಂಗಗಳನ್ನು ಹಿಡಿದು ಸ್ಥಳಾಂತರಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಉಪವಲಯಸಂರಕ್ಷಣಾಧಿಕಾರಿಮೋಹನ್‌ಕುಮಾರ್ ಹಾಗೂ ಚೋರಡಿ ವಲಯ ಅರಣ್ಯ ಅಧಿಕಾರಿ ರವಿಕುಮಾರ್,ಮತ್ತು ಕಾಂಗ್ರೆಸ್ ನ ಪ್ರಮುಖರಾದ ಸೋಮಶೇಖರ್ ಲಾವಿಗೇರೆ, ಚೇತನ್ ರಾಜ್ ಕಣ್ಣೂರ್, ಮಾಜಿ ಜಿ.ಪಂ. ಸದಸ್ಯ ಅನಿತಾ ಕುಮಾರಿ, ಉಮೇಶ್, ಕಲೀಮುಲ್ಲಾ ಖಾನ್, ಬಗರ್‌ಹುಕ್ಕುಂ ಸಮಿತಿ ಸದಸ್ಯ ರವಿಕುಮಾರ್,ರೆಹಮತುಲ್ಲಾ,ಎಂ. ಎಲ್.ಈಶ್ವರಪ್ಪ, ನಾಗಪ್ಪ,ಮಂಜುನಾಥ್ ದಾಸಕೊಪ್ಪ ಸೇರಿದಂತೆ ರೈತರು, ಅರಣ್ಯ ಸಿಬ್ಬಂದಿ ಉಪಸ್ಥಿತರಿದ್ದರು.

Leave a Comment