ತಲೆಗೆ ಅರ್ಧ ಭಾಗದ ಹೆಲ್ಮೆಟ್ ಧರಿಸುವುದು ಪ್ರಾಣಕ್ಕೆ ರಕ್ಷಣೆಯಲ್ಲ: ಎಸ್‌ಪಿ ಮಿಥುನ್‌ಕುಮಾರ್


ಭದ್ರಾವತಿ:ಡಿ-೨೯.ದ್ವಿಚಕ್ರ ವಾಹನಗಳ ಸವಾರರು ತಲೆಗೆ ಅರ್ಧ ಭಾಗವಿರುವ ಹೆಲ್ಮೆಟ್ ಧರಿಸುವುದು ಸುರಕ್ಷತೆಯಲ್ಲ, ಅದು ತಪ್ಪು. ಅದರಿಂದ ಅಪಘಾತವಾದರೆ ಪ್ರಾಣಕ್ಕೆ ರಕ್ಷಣೆಯಿರಲ್ಲ. ಆದ್ದರಿಂದ ತಲೆಗೆ ಪೂರ್ಣ ಪ್ರಮಾಣದ ಐಎಸ್‌ಐ ಮಾರ್ಕ್ ಇರುವ ಹೆಲ್ಮೆಟ್‌ನ್ನು ಕಡ್ಡಾಯವಾಗಿ ಧರಿಸಬೇಕೆಂದು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್‌ಕುಮಾರ್ ಮನವಿ ಮಾಡಿದರು.

           ಅವರು ಭಾನುವಾರ ನಗರದ ರಂಗಪ್ಪ ವೃತ್ತದಲ್ಲಿ ಸಂಚಾರಿ ಪೊಲೀಸರು ಕಳೆದ ೬ ತಿಂಗಳಿAದ ವಶಕ್ಕೆ ಪಡೆದಿದ್ದ ಸುಮಾರು ೩ ಸಾವಿರ ಅರ್ಧ ಭಾಗದ ಹೆಲ್ಮೆಟ್‌ಗಳು ಹಾಗೂ ಕರ್ಕಶ ಶಭ್ದ ಮಾಡುವ ೨೦ ಸೈಲೆನ್ಸರ್‌ಗಳನ್ನು ಪೋಕ್‌ಲೈನ್ ಜೆಸಿಬಿ ರೋಲರ್ ಯಂತ್ರದ ಮೂಲಕ ಸಾರ್ವಜನಿಕವಾಗಿ ನಾಶ ಪಡಿಸುವ ಕಾರ್ಯಕ್ರಮಕ್ಕೆ ಆಗಮಿಸಿ ಮಾಹಿತಿ ನೀಡಿದರು.

        ಪೊಲೀಸ್ ಇಲಾಖೆಯು ಕಳೆದ ಆರು ತಿಂಗಳಿAದ ವಾಹನ ಸವಾರರಿಗೆ ಹೆಲ್ಮೆಟ್ ಹೇಗಿರಬೇಕು, ಎಂತಹ ಹೆಲ್ಮೆಟ್ ಧರಿಸಬೇಕೆಂದು ಅರಿವು ಮೂಡಿಸುತ್ತಿದ್ದರೂ ಅವರುಗಳು ಅದನ್ನು ಕಡ್ಡಾಯವಾಗಿ ಪಾಲಿಸುತ್ತಿರಲಿಲ್ಲ. ಹಾಗಾಗಿ ಅವರಲ್ಲಿ ಜಾಗೃತಿಯನ್ನು ಉಂಟು ಮಾಡುವ ಸಲುವಾಗಿ, ಅರ್ಧ ಭಾಗದ ಹೆಲ್ಮೆಟನ್ನು ವಶಕ್ಕೆ ಪಡೆದು ಅದನ್ನು ಏನು ಮಾಡುತ್ತಾರೆ ಎಂಬುದನ್ನು ಪ್ರದರ್ಶಿಸಿ ಎಚ್ಚರಿಕೆ ನೀಡಿದರು.

        ಅಂತಹ ವಶ ಪಡಿಸಿಕೊಂಡಿದ್ದ ಹೆಲ್ಮೆಟ್‌ಗಳನ್ನು ನಾಶ ಮಾಡಿ ಮುಂದಿನ ದಿನಗಳಲ್ಲಿ ವಾಹನ ಸವಾರರು ಪೊಲೀಸ್ ಇಲಾಖೆ ನೀಡುವ ಮಾಹಿತಿಯನ್ನು ಅನುಸರಿಸಬೇಕೆಂದು ಅರಿವು ಮೂಡಿಸಲು ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ವಾಹನ ಸವಾರರು ಪ್ರಾಣದ ಜೊತೆಗೆ ಚೆಲ್ಲಾಟವಾಡದೆ ಕುಟುಂಬ ಮಕ್ಕಳ ಹಿತದೊಂದಿಗೆ ತಮ್ಮ ರಕ್ಷಣೆಗಾಗಿ ಐಎಸ್‌ಐ ಮಾರ್ಕ್ವುಳ್ಳ ಹೆಲ್ಮೆಟ್ ಧರಿಸಬೇಕೆಂದು ಹೇಳಿದರು.

            ಡಿವೈಎಸ್‌ಪಿ ಕೆ.ಆರ್.ನಾಗರಾಜ್ ಹೊಸ ವರ್ಷದಂದು ಸಾರ್ವಜನಿಕರು ಶಾಂತಿಯಿAದ ತಮ್ಮ ಕುಟುಂಬದ ಜೊತೆ ಸಂತಸದಿAದ ಕಾಲ ಕಳೆಯಿರಿ. ಪರರಿಗೆ ಕಿರಿಕಿರಿಯಾಗದಂತೆ ಶಾಂತಿ ನೆಮ್ಮದಿಯಿಂದ ನಡೆದುಕೊಳ್ಳಬೇಕು. ವಾಹನ ಚಾಲಕರು ಮದ್ಯ ಸೇವಿಸಿ ಚಾಲನೆ ಮಾಡಬಾರದು. ಅಕಸ್ಮಾತ್ ಪೊಲೀಸರಿಗೆ ಸಿಕ್ಕಿಬಿದ್ದರೆ ಅಂತಹವರ ವಾಹನ ಚಾಲನೆಯ ಪರವಾನಿಗಿ ರದ್ದು ಪಡಿಸಲಾಗುವುದು. ಬಾರ್&ರೆಸ್ಟೋರೆಂಟುಗಳಿಗೆ ವಿಶೇಷವಾಗಿ ಯಾವುದೇ ಕಾಯ್ದೆ ಜಾರಿ ಮಾಡಿಲ್ಲ. ಈಗಿರುವ ಕಾನೂನು ಕಟ್ಟಳೆಯಂತೆ ನಡೆದುಕೊಳ್ಳಬೇಕು. ನಿಗದಿತ ವೇಳೆಗೆ ಬಾಗಿಲು ಹಾಕಬೇಕು. ಯುವಕರು ಶಾಂತಿಯಿAದ ನಡೆದುಕೊಳ್ಳಬೇಕೆಂದರು.

              ಈ ಸಂದರ್ಭದಲ್ಲಿ ಹೆಚ್ಚುವರಿ ರಕ್ಷಣಾಧಿಕಾರಿ ಅನಿಲ್‌ಕುಮಾರ್ ಭೂಮಿರೆಡ್ಡಿ, ಇನ್ಸ್ಪೆಕ್ಟರ್ ಜಗದೀಶ್, ನಾಗಮ್ಮ, ಸಬ್‌ಇನ್ಸ್ಪೆಕ್ಟರ್ ಗಳಾದ ಶಾಂತಲಾ, ಭಾರತಿ, ಚಂದ್ರಶೇಖರ್, ಕೃಷ್ಣಕುಮಾರ್, ಸಿಬ್ಬಂದಿ ವರ್ಗ ಹಾಗೂ ಉದ್ಯಮಿ ಬಿ.ಕೆ.ಶಿವಕುಮಾರ್ ಮುಂತಾದವರು ಭಾಗವಹಿಸಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.