ಸುತ್ತೂರು ಜಾತ್ರಾ ಮಹೋತ್ಸವ: ರಥೋತ್ಸವಕ್ಕೆ ಭವ್ಯ ಸ್ವಾಗತ
ಭದ್ರಾವತಿ: ಸುತ್ತೂರು ಶ್ರೀ ಮಠದಲ್ಲಿ ಜ: ೨೬ ರಿಂದ ೩೧ ರವರೆಗೆ ನಡೆಯುವ ಜಾತ್ರಾ ಮಹೋತ್ಸವ ಯಶಸ್ಸಿಗೆ ಅರಿವು ಮೂಡಿಸಲು ಆಗಮಿಸಿದ ರಥ ಯಾತ್ರೆಯು ನಗರದ ಲೋಯರ್ ಹುತ್ತಾದಲ್ಲಿ ಆಗಮಿಸಿದಾಗ ಅನೇಕ ಸಂಘ ಸಂಸ್ಥೆಗಳ ಪ್ರಮುಖರು ಅದ್ದೂರಿಯಾಗಿ ಭಾನುವಾರ ಭವ್ಯವಾಗಿ ಸ್ವಾಗತಿಸಿದರು.
ಸುತ್ತೂರು ಶ್ರೀಕ್ಷೇತ್ರವನ್ನು ಬೆಳಗಿಸಿದ ಮಹಾ ಮಹಿಮರಾದ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವವು ವೈಚಾರಿಕತೆ ವೈಜ್ಞಾನಿಕ, ಸಾಮೂಹಿಕ ವಿವಾಹ, ಭಜನಾ ಮೇಳ, ಕೃಷಿ ಮೇಳ, ದನಗಳ ಜಾತ್ರೆ, ಸಾಂಸ್ಕೃತಿಕ ಮೇಳ, ದೇಸೀ ಆಟಗಳು, ದೋಣಿವಿಹಾರ, ಚಿತ್ರಕಲೆ, ರಂಗೋಲಿ, ಗಾಳಿಪಟ, ಸೋಬಾನೆ ಪದ, ಛಾಯಾ ಚಿತ್ರ ಸ್ಪರ್ಧೆ ಮುಂತಾದವು ನಡೆಯಲಿರುವ ವರ್ಣ ರಂಜಿತ ವೈವಿದ್ಯಮಯ ಕಾರ್ಯಕ್ರಮವನ್ನು ನಾಡಿಗೆ ಪರಿಚಯಿಸಲು ನಾಡಿನಾದ್ಯಂತ ಅರಿವು ಮೂಡಿಸಲು ಸಂಚರಿಸಿ ಆಗಮಿಸಿದ ಜಾತ್ರಾ ಮಹೋತ್ಸವ ರಥ ಯಾತ್ರೆಯನ್ನು ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಹೆಚ್.ಎನ್.ಮಹಾರುದ್ರ ನೇತೃತ್ವದಲ್ಲಿ ಅನೇಕ ಸಂಘ ಸಂಸ್ಥೆಗಳ ಮುಖಂಡರು ಅದ್ದೂರಿಯಾಗಿ ಸ್ವಾಗತಿಸಿದರು.
ನಗರಸಭೆ ಪ್ರಭಾರ ಅಧ್ಯಕ್ಷ ಎಂ.ಮಣಿ ಮತ್ತು ಶಾಸಕರ ಹಿರಿಯ ಸಹೋದರ ಉದ್ಯಮಿ ಬಿ.ಕೆ.ಜಗನ್ನಾಥ್ ರಥವನ್ನು ಸ್ವಾಗತಿಸಿ ಶ್ರೀಗಳ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.
ಮುಖಂಡರುಗಳಾದ ಶರಣ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನಯ್ಯ, ವಿವಿಧ ಸಂಘ ಸಂಸ್ಥೆಗಳ ಮುಖಂಡರಾದ ಡಾ: ಜಿ.ಎಂ.ನಟರಾಜ್, ಸಿದ್ದಲಿಂಗಯ್ಯ, ಡಾ: ಬಿ.ಜಿ.ಧನಂಜಯ, ಮಹೇಶ್ವರಪ್ಪ, ಶಿವಮೂರ್ತಿ, ಟಿ.ಜಿ.ಬಸವರಾಜಯ್ಯ, ಪೂರ್ಣಿಮಾ, ನಂದಿನಿ ಮಲ್ಲಿಕಾರ್ಜುನ್, ಹೇಮಾವತಿ, ಪ್ರಗತಿಪರ ಚಿಂತಕ ರಾಜೇಂದ್ರ ಮುಂತಾದವರು ಪುಷ್ಪ ನಮನ ಸಲ್ಲಿಸಿ ಬರಮಾಡಿಕೊಂಡರು. ನಂತರ ರಥವನ್ನು ಜಾಥಾ ಮೂಲಕ ತರೀಕೆರೆ ರಸ್ತೆಯ ಗಾಂಧಿ ವೃತ್ತದಲ್ಲಿ ತರೀಕೆರೆಗೆ ಬೀಳ್ಕೊಡಲಾಯಿತು.
Leave a Comment