ಆನಂದಪುರ:*ಭೀಕರ ಅಪಘಾತ -.*ಸ್ಥಳದಲ್ಲೇ ಇಬ್ಬರು ಸಾವು*...
ಆನಂದಪುರ:ಆನಂದಪುರದ ರಾಷ್ಟೀಯ ಹೆದ್ದಾರಿಯ ಮುರುಘಮಠದ ಹತ್ತಿರ ಕಾರು ಹಾಗೂ ಬಸ್ಸಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು ಇಬ್ಬರು ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ.
ಸಾಗರದಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ( J R B ) ಜಾನಕಿ ರಾಮ ಭರತ್ ಖಾಸಗಿ ಬಸ್ಸು ಹಾಗೂ ಎರ್ಟಿಗಾ ಕಾರಿನ ನಡುವೆ ಭೀಕರವಾದ ಅಪಘಾತ ಇಂದು ಮುಂಜಾನೆ ಸಂಭವಿಸಿದೆ.
ಕಾರಿನಲ್ಲಿದ್ದ ದೊಡ್ಡಬಳ್ಳಾಪುರದ ಮೂಲದ ಶರಣ್ (ಸರಿ ಸುಮಾರು 25ವರ್ಷ )ಮತ್ತು ಅಕ್ಷಯ್ (ಸರಿ ಸುಮಾರು 28 ವರ್ಷ) ಇವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಹಾಗೂ ಬಸ್ಸಿನಲ್ಲಿ 20 ಕ್ಕಿಂತ ಹೆಚ್ಚು ಪ್ರಯಾಣಿಕರು ಇದ್ದು ಅವರಿಗೆ ಯಾವುದೇ ರೀತಿಯ ಹಾನಿಯಾಗಿಲ್ಲವೆಂದು ತಿಳಿದು ಬಂದಿದೆ.
ಸ್ಥಳಕ್ಕೆ ಆನಂದಪುರ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಯುವರಾಜ್ ಕಂಬಳಿ ಮತ್ತು ಸಿಬ್ಬಂದಿ ವರ್ಗದವರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
Leave a Comment