ಶಿಕಾರಿಪುರ ತಾಲ್ಲೂಕಿನ ಹಳೇಮುಗಳಗೆರೆ ಗ್ರಾಮದಲ್ಲಿ ರಾಷ್ಟ್ರೀಯ ರೈತರ ದಿನಾಚಾರಣೆ ಅಂಗವಾಗಿ ರೈತರಿಗೆ ನಮನ
ಶಿಕಾರಿಪುರ ತಾಲ್ಲೂಕಿನ ಹಳೇಮುಗಳಗೆರೆ ಗ್ರಾಮದಲ್ಲಿ ರಾಷ್ಟ್ರೀಯ ರೈತರ ದಿನಾಚಾರಣೆ ಅಂಗವಾಗಿ ರೈತರಿಗೆ ನಮನವನ್ನು ಸಲ್ಲಿಸಿ ಶುಭಾಷಯಗಳನ್ನು ಕೋರಲಾಯಿತು.
ಕಾರ್ಯಕ್ರಮದಲ್ಲಿ ರೈತರೆಲ್ಲ ಪಾಲ್ಗೊಂಡು ರೈತನ ದಿನನಿತ್ಯದ ಬದುಕಿನಲ್ಲಿ ತಾನು ಪಡುವ ಸಮಸ್ಯೆಗಳು ಅವನ ಕಷ್ಟಗಳ ಕುರಿತು ಮಾತನಾಡಿದರು .ಅನ್ನಕ್ಕೆ ಬೆಲೆಕಟ್ಟಲಾಗದು, ಅನ್ನದಾತನ ಋಣವನ್ನು ತೀರಿಸಲಾಗದು. ನಾವು ತಿನ್ನುವ ಪ್ರತಿ ಅಗುಳಿನಲ್ಲೂ ರೈತನ ಅಪಾರ ಪರಿಶ್ರಮ ಅಡಗಿದೆ. ರಾಷ್ಟ್ರೀಯ ರೈತ ದಿನದಂದು ಎಲ್ಲ ರೈತಬಾಂಧವರಿಗೆ ಗೌರವ ನಮನಗಳನ್ನು ಸಲ್ಲಿಸುವುದು ಎಲ್ಲರ ಧರ್ಮ.
ಅನೇಕ ರೈತರು ತಮ್ಮ ಮನದಾಳದ ಮಾತುಗಳನ್ನಾಡಿದರು.ರೈತರ ದಿನವು ಭಾರತದ ಆರ್ಥಿಕತೆ, ಗ್ರಾಮೀಣಾಭಿವೃದ್ಧಿ ಮತ್ತು ಆಹಾರ ಭದ್ರತೆಯನ್ನು ಕಾಪಾಡುವಲ್ಲಿ ರೈತರ ಪ್ರಮುಖ ಪಾತ್ರವನ್ನು ಪ್ರತಿಬಿಂಭಿಸುತ್ತದೆ ನ್ಯಾಯಯುತ ಬೆಲೆ, ಹವಾಮಾನ ಬದಲಾವಣೆಯ ಹೊಂದಾಣಿಕೆ, ಸುಸ್ಥಿರ ಕೃಷಿ ಪದ್ಧತಿಗಳು ಮತ್ತು ಆಧುನಿಕ ತಂತ್ರಜ್ಞಾನಗಳ ಪ್ರವೇಶದಂತಹ ಪ್ರಮುಖ ಅಂಶಗಳು ರೈತನು ಅರಿತು ಸಮಸ್ಯೆಗಳು ಅನುಗುಣವಾಗಿ ಬೆಳೆ ಬೆಳೆಯಬೇಕೆಂದು ಮಾತನಾಡಿದರು.
*ಅನೇಕ ರೈತರಿಗೆ ಹೆಣ್ಣು ಕೊಡಲು ಯಾರು ಮುಂದೆ ಬರುತ್ತಿಲ್ಲ ಇದೊಂದು ಯುವ ರೈತರ ಪ್ರಮುಖ ಸಮಸ್ಯೆ ಇದು ಸಮಸ್ಯೆಯಾಗಿಯೇ ಉಳಿದಿದೆ* ಸರ್ಕಾರ ಇದರ ಕಡೆ ಗಮನ ಹರಿಸಬೇಕೆಂದು ಅನೇಕರು ಹೇಳಿದರು. ಇದೊಂದು ಕಾರ್ಯಕ್ರಮದಂತೆ ಕಾಣದೆ ಮಾತುಕಥೆಯಾಗಿ ಮೂಡಿಬಂತು.
ಇದು ರೈತರ ಜೀವನವನ್ನು ಸುಧಾರಿಸಲು ಸರ್ಕಾರದ ಯೋಜನೆಗಳು ಮತ್ತು ಸುಧಾರಣೆಗಳ ಬಗ್ಗೆ ಕಾರ್ಯನಿರ್ವಹಿಸಬೇಕು. ಈ ದಿನದಂದು, ಕೃಷಿಯಲ್ಲಿ ವೈಜ್ಞಾನಿಕ ಮತ್ತು ತಾಂತ್ರಿಕ ಆವಿಷ್ಕಾರಗಳು ಪರಿಚಯಿಸುವಲ್ಲಿ ಸರ್ಕಾರ ಮುಂದಾಗಬೇಕು ಎಂದು ಅಭಿಪ್ರಾಯ ಪಟ್ಟರು. ಗ್ರಾಮದ ಎಲ್ಲಾ ರೈತ ಮುಖಂಡರು ಮತ್ತು ರೈತ ಬಾಂಧವರು ಉಪಸ್ಥಿತರಿದ್ದರು.

Leave a Comment