ಸರ್ಕಾರಿ ಶಾಲೆಯ ಹೆಚ್ಚಿನ ಅಭಿವೃದ್ಧಿಗಾಗಿ ಹಳೆ ವಿದ್ಯಾರ್ಥಿಗಳು ಮತ್ತು ದಾನಿಗಳು ಸಹಕಾರ ನೀಡಬೇಕು;ಶಾಸಕ ಗೋಪಾಲಕೃಷ್ಣ ಬೇಳೂರು
ಆನಂದಪುರ:ಸರ್ಕಾರಿ ಶಾಲೆಯ ಹೆಚ್ಚಿನ ಅಭಿವೃದ್ಧಿಗಾಗಿ ಹಳೆ ವಿದ್ಯಾರ್ಥಿಗಳು ಮತ್ತು ದಾನಿಗಳು ಸಹಕಾರ ನೀಡಬೇಕು ಎಂದು ಶಾಸಕರು ಹಾಗೂ ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ *ಶ್ರೀ ಗೋಪಾಲಕೃಷ್ಣ ಬೇಳೂರು ತಿಳಿಸಿದರು.*
ಇವರು ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ನಡೆದ ಶಾಲಾ ಅಭಿವೃದ್ಧಿ ಸಭೆಯಲ್ಲಿ ಮಾತನಾಡುತ್ತಾ ಸರ್ಕಾರಿ ಶಾಲೆಯಲ್ಲಿ ಬೇಕಾಗುವಂತಹ ಮೂಲಭೂತ ಸೌಕರ್ಯಗಳನ್ನು ಒದಗಿಸುತ್ತೇವೆ. ಹಾಗೆ ನಮ್ಮ ಕ್ಷೇತ್ರದಲ್ಲಿ ಸರ್ಕಾರಿ ಶಾಲೆಗೆ ಸುಣ್ಣ ಬಣ್ಣ ಹೊಡೆಯದೆ ಬಹಳಷ್ಟು ವರ್ಷಗಳಾಗಿವೆ ಇದರಿಂದ ಶಾಲೆಯ ಸ್ವರೂಪವೇ ಬದಲಾಗಿದೆ ಆದಷ್ಟು ಬೇಗನೆ ಸುಣ್ಣ ಬಣ್ಣ ಹೊಡೆಯುವ ಕೆಲಸ ಮಾಡಿಸುತ್ತೇವೆ ಎಂದರು.
ಹಾಗೆ ಕೆ.ಪಿ.ಎಸ್ ಶಾಲೆ ಪ್ರಾರಂಭ ಹಾಗೂ ಬಿಡುವ ಸಮಯದಲ್ಲಿ ರೋಡ್ ರೋಮಿಗಳ ಉಪಟಳ ಹೆಚ್ಚಾಗಿದ್ದು ಇದನ್ನು ತಪ್ಪಿಸಲು ಪೊಲೀಸರ ವ್ಯವಸ್ಥೆ ಕಲ್ಪಿಸಿ ಅಂತಹ ಯುವಕರನ್ನು ಹಿಡಿದು ಪ್ರಕರಣದ ದಾಖಲಿಸುವಂತೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಯುವರಾಜ್ ಕಂಬಳಿಗೆ ಆದೇಶಿಸಿದರು.
ಈ ಸಂದರ್ಭದಲ್ಲಿಪ್ರಾಂಶುಪಾಲರಾದ ರವಿಶಂಕರ್, ಉಪ ಪ್ರಾಚಾರ್ಯರಾದ ಈಶ್ವರಪ್ಪ ಹಾಗೂ ಕೆ.ಪಿ.ಎಸ್ ಶಾಲಾ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರಾದ ರಾಮಚಂದ್ರ, ಮತ್ತು ಆನಂದಪುರ ಗ್ರಾ.ಪಂ ಅಧ್ಯಕ್ಷ ರಾದ ಮೋಹನ್ ಕುಮಾರ್, ಆಚಾಪುರ ಗ್ರಾ.ಪಂ ಅಧ್ಯಕ್ಷ ರಾದ ಖಲಿಮುಲ್ಲಾ ಖಾನ್ ,ಹಾಗೂ ಸಮಿತಿಯ ಸದಸ್ಯರಾದ ಜಗನ್ನಾಥ್, ಉಮೇಶ್, ಬಿ.ಡಿ ರವಿಕುಮಾರ್,ರಂಗನಾಥ ಹಾಗೂ ಇನ್ನಿತರರು ಇದ್ದರು.
Leave a Comment