*25ನೇ ವರ್ಷದ ಶಾಲಾ ಬೆಳ್ಳಿಯ ಹಬ್ಬ*...

ಆನಂದಪುರ :ಕಾಗೋಡು ತಿಮ್ಮಪ್ಪನವರ ಅಧಿಕಾರ ಅವಧಿಯಲ್ಲಿ ಸ್ಥಾಪನೆಯಾದ ನಮ್ಮ ಸಿದ್ದೇಶ್ವರ ಕಾಲೋನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಇಂದು 25 ವರ್ಷ ತುಂಬಿ ಬೆಳ್ಳಿ ಹಬ್ಬಕ್ಕೆ ಸಜ್ಜಾಗಿದೆ ಎಂದು ಶಾಲೆಯ ಎಸ್ .ಡಿ.ಎಂ .ಸಿ ಅಧ್ಯಕ್ಷರಾದ ಮುರಳಿ .ಎನ್  ರವರು  ತಿಳಿಸಿದರು.

ಅವರು ಇಂದು ಪತ್ರಕರ್ತರೊಂದಿಗೆ ಮಾತನಾಡಿ ನಮ್ಮ ಗ್ರಾಮದ ಬಡ ಜನರಿಗೆ ಹಾಗೂ ಕೂಲಿ ಕಾರ್ಮಿಕರಿಗೆ ಅನುಕೂಲಕರವಾಗಲೆಂದು ಕಾಗೋಡು ತಿಮ್ಮಪ್ಪನವರು ತಮ್ಮ ಅಧಿಕಾರದ ಅವದಿಯಲ್ಲಿ ಸುಸಜ್ಜಿತ ರಸ್ತೆ ಹಾಗೂ ವಿದ್ಯಾರ್ಥಿನಿ ಯರಿಗೆ  ಎರಡು ಹಾಸ್ಟೆಲ್ ಸೌಲಭ್ಯ ಮತ್ತು ಶಾಲೆಯನ್ನು  ನಿರ್ಮಿಸಿ ಕೊಟ್ಟಿದ್ದಾರೆ. 

ಇದರ ಸವಿ ನೆನಪಿಗಾಗಿ ಮತ್ತು  ಶಾಲೆಯ 25ನೇ ವಾರ್ಷಿಕೋತ್ಸವದ ಅಂಗವಾಗಿ ಶಾಲಾ ಬೆಳ್ಳಿ ಹಬ್ಬವನ್ನು ಇದೇ ಬರುವ 03/01/25 ರ ಶುಕ್ರವಾರದಂದು ಹಮ್ಮಿಕೊಳ್ಳಲಾಗಿದೆ ಎಂದರು.

ಹಾಗೆ ಈ ಕಾರ್ಯಕ್ರಮದ ಉದ್ಘಾಟನೆಯನ್ನು ಸಾಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಗೋಪಾಲಕೃಷ್ಣ ಬೇಳೂರು ರವರು ನೆರವೇರಿಸಲಿದ್ದಾರೆ. ಮತ್ತು ವಿಶೇಷವಾಗಿ ಕಾಗೋಡು ತಿಮ್ಮಪ್ಪನವರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ.

ಈ ಕಾರ್ಯಕ್ರಮಕ್ಕೆ ಮತ್ತು ಶಾಲೆ ಅಭಿವೃದ್ಧಿಗಾಗಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಅನೇಕ ಗಣ್ಯರು ಮತ್ತು ಶಾಲಾ ಅಭಿವೃದ್ಧಿಯ ಸಮಿತಿಯವರು ಹಾಗೂ ಗ್ರಾಮಸ್ಥರು ಸಹಕರಿಸಿದ್ದಾರೆ. ಅವರಿಗೆಲ್ಲರಿಗೂ ವಿಶೇಷವಾದ ಸನ್ಮಾನ ಕಾರ್ಯಕ್ರಮ ಇಟ್ಟುಕೊಂಡಿದ್ದೇವೆ. ನಂತರದಲ್ಲಿ ಮಕ್ಕಳಿಂದ ಸಾಂಸ್ಕೃತಿ ಕಾರ್ಯಕ್ರಮ ನೆರವೇರುವುದೆಂದು ತಿಳಿಸಿದರು.

ಪ್ರಮುಖರಾದ ಉಮೇಶ್ ಅವರು ಮಾತನಾಡಿ ನಮ್ಮ ಸಿದ್ದೇಶ್ವರ ಕಾಲೋನಿಯನ್ನು ಕಾಗೋಡು ತಿಮ್ಮಪ್ಪನವರು ಕಟ್ಟು ಕೊಟ್ಟಿರುವ ಒಂದು ಗ್ರಾಮವಿದು. ಇಲ್ಲಿ ಮೊದಲು ಯಾವುದೇ ರೀತಿಯ ಸೌಲಭ್ಯಗಳಿರಲಿಲ್ಲ ಶಾಲೆಯು ಕೂಡ ಇರಲಿಲ್ಲ ಇದರಿಂದ ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಸರಸ್ವತಮ್ಮನವರ ಮನೆಯಲ್ಲಿ ಮೊದಲ ಬಾರಿಗೆ ಶಾಲೆಯನ್ನು ಪ್ರಾರಂಭಿಸಿದ್ದು ನಂತರದಲ್ಲಿ ಕಾಗೋಡು ತಿಮ್ಮಪ್ಪನವರು ಇದನ್ನು ಅರಿತು ಸೌಲಭ್ಯವನ್ನು ನಮ್ಮ ಗ್ರಾಮಕ್ಕೆ ಕಲ್ಪಿಸಿಕೊಟ್ಟರು ನಮ್ಮ ಗ್ರಾಮದ ಏಳಿಗೆಗಾಗಿ ಅವರ ಪಾತ್ರ ತುಂಬಾ ದೊಡ್ಡದು ಎಂದರು.

ಈ ಸಂದರ್ಭದಲ್ಲಿ ಗ್ರಾ.ಪಂ.  ಸದಸ್ಯರಾದ ಶಂಕರ್ ಮತ್ತು  ಎಸ್. ಡಿ. ಎಂ.ಸಿ.ಉಪಾಧ್ಯಕ್ಷರಾದ ಶಶಿಕಲಾ ಹಾಗೂ ಪ್ರಮುಖರಾದ  ಸುಬ್ರಹ್ಮಣ್ಯ, ಸರಸ್ವತಮ್ಮ,  ,ಮತ್ತು ಮಧು, ರಾಮು,ಅರುಣ್   , ಹೇಮಂತ್, ತಿಮ್ಮಪ್ಪ, ನೇತ್ರಾವತಿ ,ಸುಮಂಗಲಾ ,ಹಾಗೂ ಶಿಕ್ಷಕರಾದ ಕುಮಾರ ಸ್ವಾಮಿ ಇತರರು ಇದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.