ಭದ್ರಾವತಿಯ ‌ಪೋಲಿಸರ ಕಾರ್ಯಾಚರಣೆ:ಕತರ್ ನಾಕ್ ಕಳ್ಳಿ ಮತ್ತು ಕಳ್ಳನ‌ ಬಂಧನ

ಮನೆ ಬೀಗ ಒಡೆದು ಕಳ್ಳತನ:

15-08-2024ರಂದು ಹೊಸಮನೆ ಭದ್ರಾವತಿ ನಿವಾಸಿಯಾದ ವಿನೋದ್ ಜಿ ಆರ್, ತಮ್ಮ ವಾಸದ ಮನೆಗೆ ಬೀಗ ಹಾಕಿಕೊಂಡು ಸಂಬಂಧಿಕರ ಮನೆಗೆ ಹಬ್ಬಕ್ಕೆ ಹೋಗಿದ್ದು ಹಬ್ಬ ಮುಗಿಸಿಕೊಂಡು ದಿನಾಂಕ 21.08.2024ರಂದು ಮಧ್ಯಾಹ್ನ ವಾಪಸ್ಸು ಮನೆಗೆ ಬಂದು ನೋಡಿದಾಗ, ಮನೆಯ ಬೀಗ ಒಡೆದು ಬೀರುವಿನ ಒಳಗೆ ಇಟ್ಟಿದ್ದ ಅಂದಾಜು ಮೌಲ್ಯ ಇಪ್ಪತ್ತು ಲಕ್ಷ ರೂಗಳ ಒಟ್ಟು 400 ಗ್ರಾಂ ತೂಕದ ಬಂಗಾರದ ಆಭರಣಗಳನ್ನು ಯಾರು ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಭದ್ರಾವತಿ ಹೊಸಮನೆ ಪೊಲೀಸ್ ಠಾಣೆಗೆ ದೂರು ನೀಡುತ್ತಾರೆ. ದೂರಿನ ಪ್ರಕರಣವನ್ನು ಕೈಗೆತ್ತಿಕೊಂಡಂತಹ ಸದರಿ ತನಿಕಾ ತಂಡವು ದಿನಾಂಕ 31.2024ರಂದು ಪ್ರಕರಣದ ಆರೋಪಿತನಾದ

 ಎಸ್ ಎಸ್ ನಿತಿನ್, 27 ವರ್ಷ, ಐಟಿ ಉದ್ಯೋಗಿ, ಭದ್ರಾವತಿ ಹೊಸಮನೆ ಕೇಶವಪುರ ಬಡಾವಣೆಯ ವಾಸಿಯಾದ ಈತನನ್ನು ದಸ್ತಗಿರಿ ಮಾಡಿದ್ದು, ಆರೋಪಿತನು ಕಳ್ಳತನ ಮಾಡಿದಂತ ಬಂಗಾರವನ್ನು ಕರಗಿಸಿ ಇಟ್ಟಿದ್ದ ಸುಮಾರು ಅಂದಾಜು ಮೌಲ್ಯ ಹದಿನಾರು ಲಕ್ಷ 50,000 ರೂಗಳ 259 ಗ್ರಾಂ ತೂಕದ 6 ಬಂಗಾರದ ಗಟ್ಟಿಗಳು ಮತ್ತು ಒಂದು ಬಂಗಾರದ ಕೈ ಕಡಗವನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ.

ಶಿವಮೊಗ್ಗ KSRTC ಬಸ್ ನಿಲ್ದಾಣದಲ್ಲಿ ಕಳ್ಳತನ:

ಶಿವಮೊಗ್ಗ ಕಾಶಿಪುರ ನಗರದ ನಿವಾಸಿಯಾದ. ಶ್ರೀಮತಿ ಪ್ರಭಾವತಿ, 43 ವರ್ಷ ಈ ಮಹಿಳೆ ದಿನಾಂಕ 1.11.2024ರಂದು ಮಧ್ಯಾಹ್ನ ಭದ್ರಾವತಿ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಿಂದ ಶಿವಮೊಗ್ಗಕ್ಕೆ ಹೋಗುವ ಬಸ್ ಹತ್ತಿ ಶಿವಮೊಗ್ಗಕ್ಕೆ ಬಂದಿದ್ದು ಶಿವಮೊಗ್ಗ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಬಸ್ ಇಳಿಯುವಾಗ ತಮ್ಮ ಬ್ಯಾಗುಗಳನ್ನು ನೋಡಿಕೊಂಡಾಗ ತಮ್ಮ ಬಳಿಯಲ್ಲಿ ತಂದಿದ್ದ ಬಂಗಾರದ ಆಭರಣಗಳಿಂದ ಕಿಟ್ ಬ್ಯಾಗನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಸದರಿ ಬ್ಯಾಗಲ್ಲಿ ಅಂದಾಜು ಮೌಲ್ಯ 20 ಲಕ್ಷ 9,000 ರೂಗಳ ಒಟ್ಟು 20087 ಗ್ರಾಂ ತೂಕದ ಬಂಗಾರದ ಆಭರಣಗಳು ಮತ್ತು ಅಂದಾಜು ಮೌಲ್ಯ ಹದಿನಾರು ಸಾವಿರ ರೂಗಳ ಎರಡು ರೇಷ್ಮೆ ಸೀರೆಗಳು ಕಳ್ಳತನವಾಗಿದೆ ಎಂದು ಪ್ರಭಾವತಿ ಎಂಬ ಮಹಿಳೆ ಭದ್ರಾವತಿ ನ್ಯೂ ಟೌನ್ ಪೊಲೀಸ್ ಠಾಣೆಗೆ ದೂರು ನೀಡಿದ ದೂರನ್ನು ದಾಖಲಿಸಿ ಕೊಂಡಂತಹ ಭದ್ರಾವತಿ ನ್ಯೂ ಟೌನ್ ಪೊಲೀಸರು ಕಳುವಾದ ಮಾಲು ಮತ್ತು ಆರೋಪಿತರ ಪತ್ತೆಗಾಗಿ ಮಿಂಚಿನ ಕಾರ್ಯಾಚರಣೆ ನಡೆಸಿ ಸದರಿ ತನಿಖಾ ತಂಡವು ದಿನಾಂಕ 3.11.2024 ರಂದು ಪ್ರಕರಣದ ಆರೋಪಿಗಳಾದ

ಕಮಲಮ್ಮ 48 ವರ್ಷ, ಅಟೆಂಡರ್ ಕೆಲಸ, ವಾಸ ಹೊಸ ಸೀಗೆಬಾಗಿ, ಚನ್ನಗಿರಿ ರಸ್ತೆ ಭದ್ರಾವತಿ ನಿವಾಸಿಯಾದಂತಹ ಆರೋಪಿಯನ್ನು ದಸ್ತಗಿರಿ ಮಾಡಿ ಮೇಲ್ಕಂಡ ಪ್ರಕರಣದಲ್ಲಿ ಕಳವು ಮಾಡಲಾಗಿದ್ದ ಬಂಗಾರದ ಆಭರಣಗಳು ಮತ್ತು ಎರಡು ರೇಷ್ಮೆ ಸೀರೆಗಳನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ.

 ಪ್ರಕರಣದಲ್ಲಿ ಕಳುವಾದ ಮಾಲು ಮತ್ತು ಆರೋಪಿತರ ಪತ್ತೆಗಾಗಿ, ಶ್ರೀ ಮಿಥುನ್ ಕುಮಾರ್ ಜಿ ಕೆ ಐಪಿಎಸ್ ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ, ಶ್ರೀ ಅನಿಲ್ ಕುಮಾರ್ ಭೂಮರೆಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ಮತ್ತು ಶ್ರೀ ಎ. ಜಿ ಕಾರ್ಯಪ್ಪ ಹೆಚ್ಚುವರಿ ಪೊಲೀಸ್ ಅಧೀಕ್ಷಕರು -2 ಶಿವಮೊಗ್ಗ ರವರ ಮಾರ್ಗದರ್ಶನದಲ್ಲಿ ಶ್ರೀ ನಾಗರಾಜ್ ಪೊಲೀಸ್ ಉಪಾದಧೀಕ್ಷಕರು ಭದ್ರಾವತಿ ಉಪ ವಿಭಾಗ ರವರ ಮೇಲ್ವಿಚಾರಣೆಯಲ್ಲಿ , ಶ್ರೀಶೈಲ ಕುಮಾರ್, ಪೊಲೀಸ್ ವೃತ್ತ ನಿರೀಕ್ಷಕರು, ಭದ್ರಾವತಿ ನಗರ ವೃತ್ತ ರವರ ನೇತೃತ್ವದಲ್ಲಿ, ಶ್ರೀ ಕೃಷ್ಣಕುಮಾರ್ ಬಿ ಮಾನೆ ಪಿ ಎಸ್ ಐ ಹೊಸಮನೆ ಪೊಲೀಸ್ ಠಾಣೆ ಭದ್ರಾವತಿ ಮತ್ತು ಸಿಬ್ಬಂದಿಗಳಾದ ಸಿ. ಎಚ್ .ಸಿ ಶ್ರೀ ಮಧುಪ್ರಸಾದ್ ಎಸ್, ಆದರ್ಶ ಶೆಟ್ಟಿ, ತೇಜ ಕುಮಾರ್ ರವರುಗಳನ್ನು ಒಳಗೊಂಡ ವಿಶೇಷ ತಂಡವನ್ನು ಆರೋಪಿಗಳ ಪತ್ತೆಗಾಗಿ ರಚಿಸಲಾಗಿತ್ತು.

 

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.