ನಿಯಮಿತವಾಗಿ ಸಾತ್ವಿಕ ಆಹಾರವನ್ನ ಸ್ವೀಕರಿಸುವುದರಿಂದ ಹಾಗೂ ದುಷ್ಚಟಗಳಿಂದ ದೂರವಿರುವುದರಿಂದ ಕ್ಯಾನ್ಸರ್ ರೋಗವನ್ನು ತಡೆಗಟ್ಟಬಹುದ: ಕ್ಯಾನ್ಸರ್ ಆಸ್ಪತ್ರೆಯ ವೈದ್ಯ ಡಾಕ್ಟರ್ ದಿವ್ಯ ಜ್ಯೋತಿ
ಶಿವಮೊಗ್ಗ: ನಿಯಮಿತವಾಗಿ ಸಾತ್ವಿಕ ಆಹಾರವನ್ನ ಸ್ವೀಕರಿಸುವುದರಿಂದ ಹಾಗೂ ದುಷ್ಚಟಗಳಿಂದ ದೂರವಿರುವುದರಿಂದ ಕ್ಯಾನ್ಸರ್ ನಂತಹ ರೋಗವನ್ನು ತಡೆಗಟ್ಟಬಹುದು ಎಂದು ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಆಂಕಾಲಜಿ ಸೂಪರ್ ಸ್ಪೆಷಾಲಿಟಿ ಕ್ಯಾನ್ಸರ್ ಆಸ್ಪತ್ರೆಯ ವೈದ್ಯರಾದ ಡಾಕ್ಟರ್ ದಿವ್ಯ ಜ್ಯೋತಿಯವರು ತಿಳಿಸಿದರು.
ಅವರು ಗುರುವಾರ ಸಹ್ಯಾದ್ರಿ ಕಲಾ ಕಾಲೇಜು, ಸಾಹಸ ಮತ್ತು ಸಂಸ್ಕೃತಿ ಅಕಾಡೆಮಿ, ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಅಂಕಾಲಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ತೀರ್ಥಹಳ್ಳಿ, ಯೂತ್ ಹಾಸ್ಟೆಲ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ತರುಣೋದಯ ಘಟಕ ಮತ್ತು ಮಥುರಾ ಪ್ಯಾರಡೈಸ್ ರಜತೋತ್ಸವ ಸಮಿತಿಯ ಸಹಯೋಗದಲ್ಲಿ ಸಹ್ಯಾದ್ರಿ ಕಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ಒಂದು ದಿನದ ಪ್ರವಾಸ ಮತ್ತು ಕ್ಯಾನ್ಸರ್ ಕುರಿತು ಅರಿವು ಕಾರ್ಯಕ್ರಮವನ್ನು ತೀರ್ಥಹಳ್ಳಿಯಲ್ಲಿರುವ ಎಮ್.ಐ.ಓ. ಸೂಪರ್ ಸ್ಪೆಷಾಲಿಟಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಕಾರ್ಯಗಾರವನ್ನ ಉದ್ಘಾಟಿಸಿ
ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಸಿಕೊಡುತ್ತ
ರೋಗದ ಸೂಚನೆ ಹಾಗೂ ರೋಗ ಲಕ್ಷಣಗಳ ಬಗ್ಗೆ ವಿವರಣೆ ನೀಡಿದರು. ಮೂರು ವಾರಗಳಿಗಿಂತ ಹೆಚ್ಚು ಕಾಲ ಇರುವ ಬಾಯಿ ಅಥವಾ ನಾಲಿಗೆ ಹುಣ್ಣು, ಅಜೀರ್ಣ ಹೆಚ್ಚುಕಾಲ ಇದ್ದರೆ,
ರಕ್ತವನ್ನು ಕೆಮ್ಮುವುದು
ಮಹಿಳೆಯರಲ್ಲಿ ಸ್ತನಗಳ ಗಾತ್ರ, ಆಕಾರ ಅಥವಾ ಅನುಭವದ ಬದಲಾವಣೆಗಳು ಇತ್ಯಾದಿ, ಸಾಮಾನ್ಯವಾಗಿ 4-6 ವಾರಗಳು ಅಥವಾ ಅದಕ್ಕೂ ಹೆಚ್ಚಿನ ಕಾಲ ಕರುಳಿನ ಚಲನೆ, ಮೂತ್ರದಲ್ಲಿ ರಕ್ತ ಹಾಗೂ ವಿಸರ್ಜನೆಯಲ್ಲಿ ತೊಂದರೆ ಕಾಷಿಸಿಕೊಳ್ಳುವುದು.
ತೂಕ ಕಡಿಮೆ ಜಾಸ್ತಿ ರಾತ್ರಿ ಬೆವರುವಿಕೆ, ಹಲವಾರು ವಾರಗಳ ನಂತರ ಗುಣವಾಗದೇ ಇರುವ ನೋಯುತ್ತಿರುವ ನೋವು. ಇವೆಲ್ಲವೂ ಕ್ಯಾನ್ಸರ್ ನ ಲಕ್ಷಣಗಳು ಎಂದು ತಿಲಿಸಿದರು.
ಕ್ಯಾನ್ಸರ್‌ನ ಬಗ್ಗೆ ಜನ ಜಾಗೃತಿ ಮೂಡಿಸುವ ಕೆಲಸಕ್ಕೆ ಸಹ್ಯಾದ್ರಿ ಕಲಾ ಕಾಲೇಜಿನ ವಿದ್ಯಾರ್ಥಿ ಸಮೂಹ ಮುಂದಾಗಿರುವುದು ಶ್ಲಾಘನೀಯ ಎಂದರು.
ಪ್ರಾಸ್ಥಾವಿಕವಾಗಿ ಸಹ್ಯಾದ್ರಿ ಕಲಾ ಕಾಲೇಜಿನ ಪ್ರಾಧ್ಯಾಪಕರಾದ ಡಾ.ಕೆ.ಎನ್.ಮಂಜುನಾಥ್ ಮಾತನಾಡುತ್ತ ಹಣ ಇದ್ದರೆ ಎಲ್ಲಾ ಸಿಗುತ್ತೆ ಆದರೆ ಆರೋಗ್ಯ ಸಿಗುವುದಿಲ್ಲ ನಮ್ಮ ಆರೋಗ್ಯವನ್ನು ನಾವು ಚೆನ್ನಾಗಿ ಕಾಪಾಡಿಕೊಳ್ಳಬೇಕು,
ನಿಯಮಿತ ಆಹಾರ, ವ್ಯಾಯಾಮ, ಇವುಗಳನ್ನು ಸರಿಯಾಗಿ ಮಾಡಬೇಕು ಎಂದರು. ಹಳ್ಳಿ ಹಳ್ಳಿಗಳಲ್ಲಿ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ವಿದ್ಯಾರ್ಥಿಗಳು ಹಮ್ಮಿಕೊಳ್ಳಬೇಕು ಎಂದು ಕರೆ ನೀಡಿದರು.
ಡಾ.ಭವ್ಯರವರು ಮಂಗಳೂರು ಇನಸ್ಟಿಟ್ಯೂಟ್ ಆಫ್ ಆಂಕಾಲಜಿ ಸೂಪರ್ ಸ್ಪೆಷಾಲಿಟಿ ಕ್ಯಾನ್ಸರ್ ಆಸ್ಪತ್ರೆ ಬಗ್ಗೆ ಪರಿಚಯ ಮಾಡಿಕೊಟ್ಟರು.
ಕಾರ್ಯಕ್ರಮದಲ್ಲಿ ಸಹ್ಯಾದ್ರಿ ಕಲಾ ಕಾಲೇಜಿನ ಪ್ರಾಧ್ಯಾಪಕರಾದ ಡಾ.
ಕೆ.ಎನ್.ಮಹದೇವ ಸ್ವಾಮಿ,
ಡಾ.ಷಪೀಯುಲ್ಲ, ಸಾಹಸ ಮತ್ತು ಸಂಸ್ಕೃತಿ ಅಕಾಡೆಮಿಯ ಬಂಗಾರ ಲಕ್ಷ್ಮಿ ಮತ್ತು ಅ.ನಾ. ವಿಜಯೇಂದ್ರ ರಾವ್, ಉಪಸ್ಥಿತರಿದ್ದರು.
ಸಂಜನ, ರಕ್ಷಿತ, ನೀತ ರವರು ಪ್ರಾರ್ಥಿಸಿದರು.
ಜ್ಯೋತಿಯವರು ಎಲ್ಲರನ್ನು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ನೀತ ವಂದಿಸಿದರು.
Leave a Comment