ಕೋಟೆಗಂಗೂರು ಮತ್ತು ಹೊಳಲೂರು ಗ್ರಾ.ಪಂ. ಉಪ ಚುನಾವಣೆ

ಶಿವಮೊಗ್ಗ : ನವೆಂಬರ್ 05 : ಶಿವಮೊಗ್ಗ ತಾಲೂಕು ಕೋಟೆಗಂಗೂರು ಹಾಗೂ ಹೊಳಲೂರು ಗ್ರಾಮ ಪಂಚಾಯತಿಗಳಲ್ಲಿ ವಿವಿಧ ಕಾರಣಗಳಿಂದ ಖಾಲಿ ಇರುವ ಒಂದು ಸದಸ್ಯ ಸ್ಥಾನಕ್ಕೆ ಚುನಾವಣೆ ನಡೆಸಲಾಗುತ್ತಿದ್ದು ರಾಜ್ಯ ಚುನಾವಣಾ ಆಯೋಗವು ವೇಳಾಪಟ್ಟಿಯನ್ನು ಹೊರಡಿಸಿದ್ದು, ಜಿಲ್ಲಾಧಿಕಾರಿಗಳು ಚುನಾವಣಾ ಅಧಿಸೂಚನೆಯನ್ನು ಹೊರಡಿಸುವ ದಿನಾಂಕ: 06/11/2024, ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕ: 12/11/2024, ನಾಮಪತ್ರಗಳನ್ನು ಪರಿಶೀಲಿಸುವ ದಿನಾಂಕ: 13/11/2024, ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನಾಂಕ: 15/11/2024, ಮತದಾನ ಅವಶ್ಯವಿದ್ದರೆ, ಮತದಾನವನ್ನು ನಡೆಸುವ ದಿನಾಂಕ: 23/11/2024 ರಂದು (ಬೆಳಗ್ಗೆ 7.00 ರಿಂದ ಸಂಜೆ 5.00ರವರೆಗೆ), ಮರು ಮತದಾನದ ಅವಶ್ಯವಿದ್ದಲ್ಲಿ ಮತದಾನ ನಡೆಸುವ ದಿನಾಂಕ: 25/11/2024, ಮತಗಳ ಎಣಿಕೆ ದಿನಾಂಕ: 26/11/2024 ರಂದು (ಬೆ. 8.00ರಿಂದ ) ನಡೆಸಲಾಗುವುದು.
ಸಾರ್ವಜನಿಕರು ಮುಕ್ತ ಹಾಗೂ ನ್ಯಾಯ ಸಮ್ಮತ, ಶಾಂತಿಯುತ ಚುನಾವಣೆ ನಡೆಸಲು ಸಹಕರಿಸುವಂತೆ ಶಿವಮೊಗ್ಗ ತಾಲೂಕು ತಹಶೀಲ್ದಾರ್ ಬಿ.ಎನ್. ಗಿರೀಶ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.