ರಾಷ್ಟ್ರೀಯ ಯೋಗಾಸನ ಸ್ಪರ್ಧೆಯಲ್ಲಿ ಭದ್ರಾವತಿಯ ಶಾಲಿನಿ ರೆಫರಿ
ಶಿವಮೊಗ್ಗ: ಯೋಗ ಫೆಡರೇಷನ್ ಆಫ್ ಇಂಡಿಯಾ ವತಿಯಿಂದ ಹಿಮಾಚಲ ಪ್ರದೇಶದ ಊನಾ ಜಿಲ್ಲೆಯಲ್ಲಿ ಏರ್ಪಡಿಸಿದ್ದ 49 ನೇ ಸಬ್ ಜೂನಿಯರ್ ಮತ್ತು ಜೂನಿಯರ್ ರಾಷ್ಟ್ರೀಯ ಯೋಗಾಸನ ಸ್ಪರ್ಧೆಯಲ್ಲಿ ಭದ್ರಾವತಿಯ ಶಾಲಿನಿ ಜಿ.ವಿ ಅವರು ಕಾರ್ಯಕ್ರಮದ ನಿರೂಪಕರಾಗಿ ಹಾಗೂ ರೆಫರಿಯಾಗಿ ಭಾಗವಹಿಸುವ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಮೈಲಿಗಲ್ಲು ಸಾಧಿಸಿದ್ದಾರೆ.
ಕಾರ್ಯಕ್ರಮದಲ್ಲಿ ಮಾಜಿ ಕ್ರೀಡಾ ಸಚಿವರಾದ ಅನುರಾಗ್ ಠಾಕೂರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಸ್ಪರ್ಧೆಯಲ್ಲಿ ಆಯ್ಕೆಯಾದ ಯೋಗಪಟುಗಳು ಸಿಂಗಾಪುರದಲ್ಲಿ ನಡೆಯುವ ಏಷ್ಯನ್ ಯೋಗಾ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಶಾಲಿನಿ ಅವರ ಈ ಸಾಧನಾ ಮೈಲಿಗಲ್ಲು ಯೋಗಾದಲ್ಲಿರುವ ಕೌಶಲ್ಯ ಪೂರ್ಣ ಉತ್ಸಾಹವನ್ನು ಪ್ರತಿನಿಧಿಸುತ್ತಿದೆ. ಸುಮಾರು 9 ಭಾಷೆಗಳನ್ನು ಮಾತನಾಡಬಲ್ಲ ಇವರು ಭದ್ರಾವತಿಯ ಹಿರಿಯ ಸಾಹಿತಿ ಜಿ.ವಿ.ಸಂಗಮೇಶ್ವರ ಮತ್ತು ರತ್ನಮ್ಮ ಚಕ್ರಸಾಲಿ ದಂಪತಿಗಳ ಮಗಳು.

Leave a Comment