ಭದ್ರಾವತಿಯಲ್ಲಿ ಮಾದಕ ವಸ್ತು ಗಾಂಜಾವನ್ನು ಸಾರ್ವಜನಿಕರಿಗೆ ಮಾರಾಟ:ಇಬ್ಬರು ಆರೋಪಿಗಳ ಬಂಧನ ಗಾಂಜಾ ವಶಕ್ಕೆ
ಶಿವಮೊಗ್ಗ: ದಿನಾಂಕ: 04-11-2024 ರಂದು ಸಂಜೆ *ಭದ್ರಾವತಿ ಬಿಳಕಿ ಕ್ರಾಸ್ ಹತ್ತಿರ ಇರುವ ಫ್ಲೈ ಓವರ್ ಹತ್ತಿರ* ಸಾರ್ವಜನಿಕ ಸ್ಥಳದಲ್ಲಿ, ಮಾದಕ ವಸ್ತು ಗಾಂಜಾವನ್ನು ಸಾರ್ವಜನಿಕರಿಗೆ ಮಾರಾಟ* *02 ಜನರು ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ದಾಳಿ ಮಾಡಲಾಗಿದೆ.
*ಶ್ರೀ ಮಿಥುನ್ ಕುಮಾರ್ ಜಿ.ಕೆ ಐಪಿಎಸ್,* ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ, *ಶ್ರೀ ಅನಿಲ್ ಕುಮಾರ್ ಭೂಮರಡ್ಡಿ,* ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1 ಶಿವಮೊಗ್ಗ ಜಿಲ್ಲೆ ಮತ್ತು *ಶ್ರೀ ಕಾರಿಯಪ್ಪ ಎ.ಜಿ,* ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2 ಶಿವಮೊಗ್ಗ ಜಿಲ್ಲೆರವರ ಮಾರ್ಗದರ್ಶನದಲ್ಲಿ ಶ್ರೀ ಕೃಷ್ಣಮೂರ್ತಿ ಕೆ ಪೊಲೀಸ್ ಉಪಾಧೀಕ್ಷಕರು, ಸಿ.ಇ.ಎನ್. ಕ್ರೈಂ ಪೊಲೀಸ್ ಠಾಣೆ ರವರ ಮೇಲ್ವಿಚಾರಣೆಯಲ್ಲಿ, ಶ್ರೀ ಮಂಜುನಾಥ ಪಿಐ ಸಿಇಎನ್ ಕ್ರೈಂ ಪೊಲೀಸ್ ಠಾಣೆ ರವರ ನೇತೃತ್ವದ ಸಿಬ್ಬಂಧಿಗಳ ತಂಡವು ಸ್ಥಳಕ್ಕೆ ಹೋಗಿ ದಾಳಿ ನಡೆಸಿದರು.
ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿತರಾದ *1) ಮೊಹಮ್ಮದ್ ಅಕ್ರಂ, 26 ವರ್ಷ, ಬೊಮ್ಮನ ಕಟ್ಟೆ ಭದ್ರಾವತಿ ಮತ್ತು 2) ಅಬ್ದುಲ್ ರಜಾಕ್, 35 ವರ್ಷ, ಸತ್ಯಸಾಯಿ ನಗರ ಭದ್ರಾವತಿ,* ಇವನನ್ನು ದಸ್ತಗಿರಿ ಮಾಡಿ ಸದರಿ ಆರೋಪಿಯಿಂದ *ಅಂದಾಜು ಮೌಲ್ಯ 1,40,000/- ರೂಗಳ 4 ಕೆಜಿ 461 ಗ್ರಾಂ ತೂಕದ ಒಣ ಗಾಂಜಾ ಮತ್ತು ಅಂದಾಜು ಮೌಲ್ಯ 3,000/- ರೂ ಗಳ ಮೊಬೈಲ್ ಫೋನ್ ಹಾಗೂ ಅಂದಾಜು ಮೌಲ್ಯ 70,000/- ರೂ ಮೌಲ್ಯದ ದ್ವಿ ಚಕ್ರ ವಾಹನ ಸೇರಿ ಒಟ್ಟು 2,13,000/- ರೂಗಳ ಮಾಲನ್ನುನ್ನು* ಅಮಾನತ್ತು ಪಡಿಸಿಕೊಳ್ಳಲಾಗಿದೆ.
*ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಗುನ್ನೆ ಸಂಖ್ಯೆ 0123/2024 ಕಲಂ 20(b)(ii)(B) NDPS ಕಾಯ್ದೆ* ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.

Leave a Comment