ವಿಕಲಚೇತನ ನಿಯೋಗದಿಂದ ಬೇಡಿಕೆ ಸಲ್ಲಿಕೆ

ಶಿವಮೊಗ್ಗ : ಇಂಡಿಯನ್ ದಿವ್ಯಾನ್ಗ  ಎಂಪೂವೆರ್ಮೆಂಟ್ ಅಸೋಸಿಯೇಷನ್ ಇದರ ಅಧ್ಯಕ್ಷ ಶ್ರೀ ಕೊಡಕ್ಕಲ್ ಶಿವಪ್ರಸಾದ್ ಅವರನ್ನು ಬಳ್ಳಾರಿ ಜಿಲ್ಲೆಯ ವಿಕಲಚೇತನರ ನಿಯೋಗವೊಂದು ಬೇಟಿ ಮಾಡಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ವಿಕಲಚೇತನ ನೌಕರರಿಗೆ ಆಗುತ್ತಿರುವ ಕಿರಿ ಕಿರಿ ಹಾಗೂ ಸೌಲಭ್ಯಗಳಿಂದ ವಂಚಿತರಾಗುತ್ತಿರುವ ವಿಷಯಗಳನ್ನು ಪ್ರಸ್ತಾಪಿಸಿ ಈ ಬಗ್ಯೆ  ಬ್ಯಾಂಕುಗಳ ಪ್ರಧಾನ ಕಚೇರಿಯೊಂದಿಗೆ ಸಂವಹನ ನಡೆಸಬೇಕು ಎಂದು ಮನವಿ ಸಲ್ಲಿಸಿದರು.

ಬ್ಯಾಂಕುಗಳಲ್ಲಿ ವಿಕಲಚೇತನರ ಸಮಸ್ಯೆ ಆಲಿಸಲು ಪ್ರತ್ಯೇಕ ವಿಭಾಗ ಇದ್ದರೂ ಅದು ನಿಷಕ್ರಿಯವಾಗಿದ್ದು ಎಸ್ ಸಿ - ಎಸ್ ಟಿ ವಿಭಾಗದೊಳಗೆ ಕಾರ್ಯ ನಿರ್ವಹಿಸುವ ವ್ಯವಸ್ಥೆಯೊಂದಿಗೆ ನಿರೂಪಿತಗೊಂಡಿರುವುದರಿಂದ ತಕ್ಷಣ ನೆರವಿಗೆ ಧಾವಿಸಲು ಈ ವಿಭಾಗಕ್ಕೆ ಸಾಧ್ಯವಾಗುವುದಿಲ್ಲ ಆದುದರಿಂದ ವಿಕಲಚೇತನರಿಗೆ ಪ್ರತ್ಯೇಕ ಸಮಸ್ಯೆಗಳ ಪರಿಹಾರ ವಿಭಾಗ ತೆರೆಯಲು ಪ್ರಯತ್ನಿಸಬೇಕು ಎಂದು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಕೊಡಕ್ಕಲ್ ಶಿವಪ್ರಸಾದ್ ಅವರು ವಿಕಲಚೇತನರ ಸಮಸ್ಯೆಗಳನ್ನು ಆಲಿಸುವ ವಿಭಾಗದ ಪ್ರತಿಯೊಂದು ಕಚೇರಿಯು ಆಯಾಯ ಬ್ಯಾಂಕುಗಳಲ್ಲಿ ಈಗಾಗಲೇ ತೆರೆಯಲಾಗಿದ್ದು ನಾವು ಈಗಾಗಲೇ ಅಂಗವಿಕಲರ ಮುಖ್ಯ ಆಯುಕ್ತರ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದು ದೆಹಲಿಯಲ್ಲಿರುವ ಅಂಗವಿಕಲರ ಮುಖ್ಯ ಆಯುಕ್ತರ ನ್ಯಾಯಾಲಯವು ಎಸ್ ಸಿ /ಎಸ್ ಟಿ ವಿಭಾಗದಿಂದ ಅಂಗವಿಕಲರ ವಿಭಾಗವನ್ನು ಪ್ರತ್ಯೇಕಿಸಿ ವಿಕಲಚೇತನ ನೌಕರರ ಸಮಸ್ಯೆ ಪರಿಹಾರ ವಿಭಾಗದ ಸ್ವತಂತ್ರ ಕಾರ್ಯ ನಿರ್ವಹಣಾ ಕಚೇರಿಯನ್ನು ಆರಂಭಿಸಬೇಕು ಎಂದು ಅದೇಶಿಸಿರುವದನ್ನು ಉಲ್ಲೇಖಸಿದರು.  ಈ ಬಗ್ಯೆ ಪುನ್ಹ ಪರಿಶೀಲಿಸಲು ಬ್ಯಾಂಕುಗಳ ಎಲ್ಲಾ ಕಚೇರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಅವರು ಭರವಸೆ ನೀಡಿದರು.


ನಿಯೋಗದಲ್ಲಿ ವಿಕಾಚೇತನ ನೌಕರರಾದ ಶ್ರೀಯುತ ಹನುಮಂತ, ಟಿ. ಶಿವಾನಂದ, ಕೆ. ಆನಂದ ಮತ್ತು ಪ್ರಕಾಶ್ ಅವರುಗಳು ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.