ಭಾರತದ ಸಂವಿಧಾನದ ಅಂಗೀಕಾರದ ಸ್ಮರಣಾರ್ಥ ಸಂವಿಧಾನ ದಿನಾಚರಣೆ
ನವೆಂಬರ್ 26 ಭಾರತದ ಸಂವಿಧಾನದ ಅಂಗೀಕಾರದ ಸ್ಮರಣಾರ್ಥ ಸಂವಿಧಾನ ದಿನಾಚರಣೆಯನ್ನು ಪಿಇಎಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ & ಮ್ಯಾನೇಜ್ಮಂಟ್ ಕಾಲೇಜಿನ ವಿದ್ಯಾರ್ಥಿಗಳು ಪಾದಯಾತ್ರೆ ಮಾಡುವುದರ ಮೂಲಕ ಆಚರಿಸಿದರು.ಸಂವಿಧಾನ ದಿನಾಚರಣೆಯ ಅಂಗವಾಗಿ ಪಿಇಎಸ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ವಿಭಾಗದ ವತಿಯಿಂದ ಎಲ್ಲಾ ಇಂಜಿನಿಯರಿಂಗ್ ವಿಭಾಗದ ಎನ್ಎಸ್ಎಸ್ ವಿದ್ಯಾರ್ಥಿಗಳನ್ನೊಳಗೊಂಡ ಪಾದಯಾತ್ರೆ
ಶಿವಮೊಗ್ಗ ನಗರದ ಶಿವಮೂರ್ತಿ ವೃತ್ತದಿಂದ ಪ್ರಾರಂಭಗೊಂಡು- ಮಹಾವೀರ ವೃತ್ತ- ಬಸವೇಶ್ವರ ವೃತ್ತ- ಮಹಾನಗರ ಪಾಲಿಕೆ ಮುಂಭಾಗದ ಅಂಬೇಡ್ಕರ್ ಪುತ್ಥಳಿ ಬಳಿ ಮುಕ್ತಾಯಗೊಂಡಿತು.
ಸುಮಾರು 300ಜನ ವಿದ್ಯಾರ್ಥಿಗಳು ಪಾದಯಾತ್ರಯಲ್ಲಿ ಪಾಲ್ಗೋಂಡು, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಪುತ್ಥಳಿ ಮುಂಭಾಗದಲ್ಲಿ ಭಾರತದ ಸಂವಿಧಾನದ ಪ್ರಸ್ತಾವನೆಯ ಪ್ರತಿಜ್ಞಾವಿಧಿ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಎಲ್ಲಾ ಇಂಜಿನಿಯರಿಂಗ್ ವಿಭಾಗದ ಎನ್ ಎಸ್ ಎಸ್ ಸಂಯೋಜಕರುಗಳು ಉಪಸ್ಥಿತರಿದ್ದರು.
Leave a Comment