ಭದ್ರಾವತಿ: ಮಾದಕ ವಸ್ತು ಗಾಂಜಾ ಸಾರ್ವಜನಿಕರಿಗೆ ಮಾರಾಟ: ಗಾಂಜಾ ಸಮೇತ ಆರೋಪಿಗಳು ವಶಕ್ಕೆ

ಶಿವಮೊಗ್ಗ: ದಿನಾಂಕ: 28-10-2024 ರಂದು ಮಧ್ಯಾಹ್ನ *ಭದ್ರಾವತಿ ಹಳೇನಗರ ಪೊಲೀಸ್ ಠಾಣಾ ವ್ಯಾಪ್ತಿಯ ಹೊಳೆ ಹೊನ್ನೂರು ಕ್ರಾಸ್ ನಿಂದ ಸೀಗೆಬಾಗಿ ಕಡೆಗೆ ಹೋಗುವ ರಸ್ತೆಯ ಪಕ್ಕದ ಖಾಲಿ ಜಾಗದಲ್ಲಿ*   2 ದ್ವಿಚಕ್ರವಾಹನದಲ್ಲಿ ಬಂದ  ಅಪರಿಚಿತ ವ್ಯಕ್ತಿಗಳು *ಮಾದಕ ವಸ್ತು ಗಾಂಜಾವನ್ನು ಸಾರ್ವಜನಿಕರಿಗೆ* ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ದಾಳಿ ಮಾಡಲಾಯಿತು.

 *ಶ್ರೀ ಮಿಥುನ್ ಕುಮಾರ್ ಜಿ.ಕೆ ಐಪಿಎಸ್,* ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ, *ಶ್ರೀ ಅನಿಲ್ ಕುಮಾರ್ ಭೂಮರೆಡ್ಡಿ,* ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1  ಶಿವಮೊಗ್ಗ ಜಿಲ್ಲೆರವರ ಮಾರ್ಗದರ್ಶನದಲ್ಲಿ *ಶ್ರೀ ನಾಗರಾಜ್* ಪೊಲೀಸ್  ಉಪಾಧೀಕ್ಷಕರು ಭದ್ರಾವತಿ ಉಪ ವಿಭಾಗ ರವರ ನೇತೃತ್ವದಲ್ಲಿ, *ಶ್ರೀ ಚಂದ್ರಶೇಖರ ನಾಯ್ಕ್ ಪಿಎಸ್ಐ* ಹಳೆನಗರ ಪೊಲೀಸ್ ಠಾಣೆ ಮತ್ತು ಸಿಬ್ಬಂಧಿಗಳ ತಂಡವು ಸ್ಥಳಕ್ಕೆ  ಹೋಗಿ ದಾಳಿ ನಡೆಸಿದ್ದಾರೆ.

 ಗಾಂಜಾ ಮಾರಾಟ ಮಾಡುತ್ತಿದ್ದ *ಆರೋಪಿತರಾದ  1) ನವೀನ್ @ ನವೀನ್ ಬಾಬು ಬಿ @ ಬಿ ಡಿ ನವೀನ, 24 ವರ್ಷ ಕೃಷ್ಣಾಪುರ ಮಂಗಳೂರು, 2) ದರ್ಶನ್, 19 ವರ್ಷ, ಕಾಳಿಂಗನಹಳ್ಳಿ ಭದ್ರಾವತಿ, 3) ವಿಷ್ಣು ಗವಾಡೆ ಎಂ ವಿ @ಬೆಣ್ಣೆ 24 ವರ್ಷ, ಕಂಚಿಬಾಗಿಲು ಭದ್ರಾವತಿ, 4) ಮಂಜು @ ಸಣ್ಣ ಮಂಜ @ ಮಂಜುನಾಥ, 24 ವರ್ಷ ಹೊಸಮನೆ ಭದ್ರಾವತಿ, 5) ಸಚಿನ್ ಎಸ್, 23 ವರ್ಷ, ಸಿಡಕನಹಳ್ಳಿ, ಚಿಕ್ಕಮಗಳೂರು, 6) ಪ್ರಸಾದ್ ಎಸ್, 23 ವರ್ಷ, ಹೊಸಮನೆ ಭದ್ರಾವತಿ* ಇವರುಗಳನ್ನು ದಸ್ತಗಿರಿ ಮಾಡಿ, ಸದರಿ ಆರೋಪಿತರಿಂದ *ಅಂದಾಜು ಮೌಲ್ಯ 30,000/-  ರೂ ಗಳ ಒಟ್ಟು 1 ಕೆಜಿ 300 ಗ್ರಾಂ ತೂಕದ ಒಣ ಗಾಂಜಾ ಮತ್ತು ಕೃತ್ಯಕ್ಕೆ ಬಳಸಿದ 2 ದ್ವಿಚಕ್ರ ವಾಹನಗಳನ್ನು* ಅಮಾನತ್ತು ಪಡಿಸಿಕೊಂಡು, ಭದ್ರಾವತಿ ಹಳೆನಗರ ಪೊಲೀಸ್ ಠಾಣೆಯಲ್ಲಿ *ಗುನ್ನೆ ಸಂಖ್ಯೆ  0174/2024 ಕಲಂ 20(b)(ii)(B) NDPS* ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.