ಬಿಜೆಪಿ ಮುಖಂಡ ಸರಳ,ಸಜ್ಜನ ವ್ಯಕ್ತಿ ರಾಜಶೇಖರ್(ಸುಭಾಷ್)ಇನ್ನಿಲ್ಲ
ಶಿವಮೊಗ್ಗ: ವೀರಶೈವ ಕಲ್ಯಾಣ ಮಂದಿರದ ಅಧ್ಯಕ್ಷರು, ಶ್ರೀ ಬಸವೇಶ್ವರ ವೀರಶೈವ ಸಮಾಜ ಸೇವಾ ಸಂಘದ ಮಾಜಿ ಅಧ್ಯಕ್ಷರು, ವೀರಶೈವ ಸಮಾಜದ ಹಿರಿಯ ಮುಖಂಡರು, ಮಾಜಿ ನಗರಸಭಾ ಅಧ್ಯಕ್ಷರು, ಬಿಜೆಪಿಯ ಹಿರಿಯ ಮುತ್ಸದ್ದಿಗಳು ಆದ ಶ್ರೀ ರಾಜಶೇಖರ್(ಸುಭಾಷ್) ಅವರು ಇಹಲೋಕ ತ್ಯಜಿಸಿದ್ದಾರೆ.ನಿಧನದ ಸುದ್ದಿ ತಿಳಿದು ಅತೀವ ದುಃಖವಾಗಿದೆ.
ಸುಭಾಶಣ್ಣ ಎಂದೆ ಹೆಸರಾಗಿದ್ದ ಎನ್.ಜೆ. ರಾಜಶೇಖರ್ (67 ) ನಿನ್ನೆ ಸಂಜೆ ನಿಧನರಾಗಿದ್ದಾರೆ.ಕಳೆದ ಕೆಲವು ತಿಂಗಳುಗಳಿಂದ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು ಆದರೆ ಚಿಕಿತ್ಸೆ ಫಲಿಸದೆ ಕೊನೆ ಉಸಿರು ಎಳೆದರು.
ನನಗೆ ಹಲೋ ನಾಗರಾಜ್ ಅಂತಾ ಕರೆಯುತ್ತಿದ್ದರು.ಯಾವಾಗಲೂ ನಗುಮೊಗದ ವ್ಯಕ್ತಿತ್ವ...ಅವರ ಪ್ರೀತಿಯ ಮಾತು ಬಹಳ ಇಷ್ಟವಾಗುತ್ತಿತ್ತು. ನನಗೆ ತುಂಬಾ ಬೇಸರ ನೋವು ತರಿಸಿದೆ.
ಮೃತರ ಅತ್ಮಕ್ಕೆ ಚಿರ ಶಾಂತಿ ಕೊರುತ್ತಾ, ಕುಟುಂಬ ವರ್ಗದವರಿಗೆ ದುಃಖ ಭರಿಸುವ ಶಕ್ತಿ ಭಗವಂತ ನೀಡಲಿ ಎಂದು ಪ್ರಾರ್ಥಿಸುವ..
*ಶುಭಾಷ್ ನಿಧನಕ್ಕೆ ಸಚಿವ ಮಧುಬಂಗಾರಪ್ಪ ಸಂತಾಪ*
ಶಿವಮೊಗ್ಗ: ನಗರ ಸಭೆ ಮಾಜಿ ಅಧ್ಯಕ್ಷರು ವೀರಶೈವ ಸಮಾಜದ ಪ್ರಮುಖರೂ ಆದ ಎನ್.ಜೆ.ರಾಜಶೇಖರ್ (ಸುಭಾಷ್) ನಿಧನಕ್ಕೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರು ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಮಧುಬಂಗಾರಪ್ಪ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಸರಳ ಮತ್ತು ಸಹೃದಯಿ ವ್ಯಕ್ತಿಯಾಗಿದ್ದ ಸುಭಾಷ್ ನಿಧನ ನೋವು ತಂದಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಕುಟುಂಬಕ್ಕೆ ನೋವು ಸಹಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಅವರು ತಮ್ಮ ಸಂತಾಪ ಸೂಚಕ ಸಂದೇಶದಲ್ಲಿ ತಿಳಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಉದ್ಯಮ ವಲಯಕ್ಕೆ ತಮ್ಮದೇ ಆದ ಸೇವೆ ಸಲ್ಲಿಸಿರುವ ರಾಜಶೇಖರ್ ಕುಟುಂಬ ರಾಜಕೀಯವಾಗಿಯೂ ಸೇವೆ ಸಲ್ಲಿಸಿದೆ. ಶುಭಾಷ್ ಹಿರಿಯ ಸೋದರ ಎನ್.ಜೆ.ವೀರಣ್ಣ ಅವರು ತಮ್ಮ ಕುಟುಂಬಕ್ಕೆ ಆತ್ಮೀಯರಾಗಿದ್ದು, ತಂದೆ ಬಂಗಾರಪ್ಪ ಅವರಿಗೆ ಅತ್ಯಾಪ್ತರಾಗಿದ್ದರು ಎಂದು ಹೇಳಿರುವ ಸಚಿವರು,ಸುಭಾಷ್ ನಿಧನದಿಂದ ಶಿವಮೊಗ್ಗ ಜಿಲ್ಲೆ ಒಬ್ಬ ಸಭ್ಯ ವ್ಯಕ್ತಿಯನ್ನು ಕಳೆದುಕೊಂಡಂತಾಗಿದೆ ಎಂದು ದುಃಖ ವ್ಯಕ್ತಪಡಿಸಿದ್ದಾರೆ.
ಓಂ ಶಾಂತಿ 🙏

Leave a Comment