ಮನುಷ್ಯನಿಗೆ ರಕ್ತಕ್ಕಿಂತ ನೀರು ಬಹು ಮುಖ್ಯ- ಜೀವಜಲವನ್ನು ಮಲೀನ ಮಾಡುತ್ತಿರುವುದು ಸರಿಯಲ್ಲ: ಆನಂದಪುರದ ಬೆಕ್ಕನಕಲ್ಠಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮಿ

ಭದ್ರಾವತಿ:ಸೆ-೩೦.ಮನುಷ್ಯನಿಗೆ ರಕ್ತಕ್ಕಿಂತ ನೀರು ಬಹು ಮುಖ್ಯ. ಅಂತಹ ನೀರಿನ ಕೊರತೆಯಾದರೆ ಮನುಷ್ಯನು ಸುಸ್ತಿನಿಂದ ನಿಶ್ಯಕ್ತಿಯಿಂದ ನರಳುತ್ತಾನೆ. ಅಂತಹ ಜೀವಜಲವನ್ನು ನಾವೆಲ್ಲರೂ ಸೇರಿ ಮಲೀನ ಮಾಡುತ್ತಿರುವುದು ಸರಿಯಾದ ಸಂಗತಿಯಲ್ಲ ಎಂದು ಆನಂದಪುರದ ಬೆಕ್ಕನಕಲ್ಠಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮಿಗಳವರು ತಿಳಿಸಿದರು.
 ಅವರು ನಿರ್ಮಲ ಭದ್ರ‍್ರಾ ಆಭಿಯಾನದವತಿಯಿಂದ ಹಮ್ಮಿಕೊಂಡಿದ್ದ ಭದ್ರಾ ನದಿ ಸಂರಕ್ಷಣೆ ಅರಿವು ಜಾಥ ಕಾರ್ಯಕ್ರಮದ ಸಮಾರೋಪ ಸಮಾರಂಭದ ದಿವ್ಯ ಸಾನಿಧ್ಯವಹಿಸಿ ಮಾತನಾಡಿದರು.

       ಆಧುನಿಕ ಮನುಷ್ಯ ಪ್ರಕೃತಿಯಲ್ಲಿರುವ ಎಲ್ಲಾ ವಸ್ತುಗಳು ತನಗೆ ಮಾತ್ರ ಸೇರಿದ್ದು ಎಂಬ ಭ್ರಮೆಯಲ್ಲಿ ಅದನ್ನು ಅನುಭೋಗಿಸುತ್ತಾನೆ. ಆದರೆ ಅದು ನಮ್ಮ ಹಿರಿಯರು ನಿಡಿದ ಬಳುವಳಿ ಎಂಬುದನ್ನು ಮಾತ್ರ ಅರಿಯದಿರುವುದು ಇಂದಿನ ಜನಾಂಗದ ದುರಂತದ ಸಂಗತಿ. ಹಾಗಾಗಿ ಮುಂದಿನ ಜನಾಂಗಕ್ಕೆ ನಾವು ಏನು ಕೊಡುತ್ತೇವೆ ಎಂಬುದನ್ನು ಈಗಲೆ ಪ್ರಶ್ನಿಸಿಕೊಳ್ಳಬೇಕಿದೆ ಎಂದರು.

       ಈ ನಿಟ್ಟಿನಲ್ಲಿ ತುಂಗಾ ನದಿ ಬಗ್ಗೆ ಇದೇ ಅರಿವು ಮೂಡಿಸಿ ಪ್ರತಿಭಟನೆ ನಡೆಸಿ ಹೋರಾಟ ಮಾಡಿದ ಫಲ ಸರ್ಕಾರ ಎಚ್ಚೇತ್ತುಕೊಂಡು ಅದರ ಸ್ವಚ್ಚತೆಗೆ ಅಗತ್ಯವಾದ ಕ್ರಮ ಕೈಗೊಳ್ಳುತ್ತಿದೆ. ಅದೇ ರೀತಿಯಲ್ಲಿ ಭದ್ರಾ ನದಿ ಬಗ್ಗೆ ಅದರ ಮಾಲಿನ್ಯ ನಿರ್ಮೂಲನೆ ಮಾಡಿ ಸ್ವಚ್ಚತೆ ಬಗ್ಗೆ ಜನ ಜಾಗೃತರಾಗಿ ಎಚ್ಚೆತ್ತುಕೊಂಡು ಅಗತ್ಯ ಕ್ರಮ ಕೈಗೊಳ್ಳುವಂತಾಗಬೇಕು ಎಂದು ಕರೆ ನೀಡಿದರು.

       ಪರಿಸರವಾದಿ, ಸ್ವದೇಶಿ ಚಿಂತಕ, ಆರ್ಥಶಾಸ್ತçಜ್ಞ ಪ್ರೂ.ಬಿ.ಎಂ.ಕುಮಾರ ಸ್ವಾಮಿ ಮಾತನಾಡುತ್ತಾ ನಮ್ಮ ಸುತ್ತಮುತ್ತಲ ಪ್ರಕೃತಿ ಪರಿಸರ ವಾತಾವರಣವನ್ನು ಸ್ವಚ್ಚಗೊಳಿಸಿ ಮಾಲಿನ್ಯವಾಗದಂತೆ ಕಾಪಾಡುವ ಜವಾಬ್ದಾರಿ ನಮ್ಮೇಲ್ಲರದಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕಾರ್ಯತತ್ಪರರಾಗಬೇಕು ಎಂದು ಕರೆ ನೀಡಿದರು.

       ಭದ್ರಾ ನಾಲಾ ಹೋರಾಟ ಸಮಿತಿಯ ತೇಜಸ್ವಿ ಪಟೇಲ್ ಮಾತನಾಡಿ ಸರ್ಕಾರದ, ಸಾರ್ವಜನಿಕರ ಆಸ್ತಿ ಪಾಸ್ತಿಗಳು ನಷ್ಟ ಹಾನಿ ಆದರೆ ಅದು ಅಪರಾಧ, ಆದರೆ ಸಕಾರ ಅಭಿವೃಧ್ಧಿ ಹೆಸರಿನಲ್ಲಿ ಪರಿಸರ ಪ್ರಕೃತಿ ನಾಶ ಮಾಡಿದರೆ ಅದು ಅಪರಾಧವಲ್ಲ ಎಂಬAತಹ ಸ್ಥಿತಿ ಇದೆ. ಈ ಮನೋಭಾವವನ್ನು ಬದಲಾಯಿಸಿ ಪ್ರಕೃತಿ ಪರಿಸರವನ್ನು ಕಾಪಾಡುವ ಹೊಣೆಗಾರಿಕೆ ನಮ್ಮೇಲ್ಲರಾದಾಗಿದೆ ಎಂದರು .

       ನಿವೃತ್ತ ಪ್ರಾಂಶುಪಾಲ ಪ್ರೂ.ಎಲ್.ಕೆ.ಶ್ರೀಪತಿ ಮಾತನಾಡಿ ಭದ್ರಾ ಡ್ಯಾಂಗೆ ಬಂದು ಸೇರುವ ನೀರು ಅತ್ಯಂತ ಶುಧ್ಧ ಹಾಗು ಪವಿತ್ರವಾಗಿರುತ್ತದೆ. ಆದರೆ ನಂತರ ಅದು ನಗರದಲ್ಲಿ ಹಾದು ಹೋಗಬೇಕಾದರೆ ಅತ್ಯಂತ ಮಲೀನ ಆಗುತ್ತದೆ. ಈ ನಿಟ್ಟಿನಲ್ಲಿ ಜನ ಜಲ ಜಾಗೃತಿಯನ್ನು ಉಂಟು ಮಾಡುವ ಕಾರ್ಯದ ಹಿನ್ನಲೆಯಲ್ಲಿ ಈ ಆಭಿಯಾನವನ್ನು ನಡೆಸಲಾಗುತ್ತಿದೆ ಎಂದರು.

       ನವೆಂಬರ್ ೪ ರಿಂದ ತುಂಗಾ ನದಿ ಪಾತ್ರದ ಉದ್ದಕ್ಕೂ ಮಾಲಿನ್ಯದ ಬಗ್ಗೆ ಜಾಗೃತಿ ಮೂಡಿಸಲು ಶೃಂಗೇರಿಯಿAದ ಹೋಸಪೇಟೆ ವರೆಗೆ ೨೦ ದಿನಗಳ ಕಾಲ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

       ನಗರಸಭಾ ಸದಸ್ಯೆ ಅನುಪಮ ಚನ್ನೇಶ್ ಮಾತನಾಡಿ ದೇವರ ಪೂಜೆ ಹೊ ಮತ್ತಿತರ ಸಾಮಗ್ರಿಗಳನ್ನು ನದಿಗೆ ಎಸೆದರೆ ಒಳ್ಳೆಯದು ಪುಣ್ಯ ಲಭಿಸುತ್ತದೆ ಎಂಭ ಮನೋಭಾವದಿಂದ ನಾವುಗಳೆ ಅತಿ ಹೆಚ್ಚಿನ  ಜಲ ಮಾಲಿನ್ಯ ಮಾಡುತ್ತಿದ್ದೇವೆ ಇದರು ಸರಿಯಲ್ಲ. ಇದನ್ನು ಬದಲಾಯಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

       ಸಭೇಯನ್ನು ಉದ್ದೇಶಿಸಿ ಉದ್ದಿಮೆದಾರ ಬಿ.ಕೆ.ಜಗನ್ನಾಥ್, ಗೋಂದಿ ಜಯರಾಂ, ಮಾತನಾಡಿದರು. ಗೀರೀಶ್ ಪಟೇಲ್, ಮುರುಗೇಶ್, ಭೀಮರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

       ಈ ಅಭಿಯಾನವು ಭದ್ರಾ ಜಲಾಶಯದಲ್ಲಿ ಪೂಜೆ ಸಲ್ಲಿಸಿ ಪ್ರಾರಂಭ ಆಗಿ ಸಿಂಗನ ಮನೆ, ಕುವಿವಿ, ಗೋಣಿಬೀಡು, ಶ್ರೀ ಶೀಲಸಂಪಾದನಾ ಮಠ, ಹೊನ್ನಟ್ಟಿ ಹೋಸೂರು, ಕಾಳನಕಟ್ಟೆ, ಹಿರಿಯೂರು, ಬೊಮ್ಮನಕಟ್ಟೆ, ಬುಳ್ಳಾಪುರ ಬೈ ಪಾಸ್, ವಿದ್ಯಾ ಮಂದಿರ, ಜಯಶ್ರೀ ಸರ್ಕಲ್, ಭದ್ರಾವತಿ ಮುಖ್ಯ ಬಸ್ ನಿಲ್ದಾಣ, ಅಂಡರ್ ಬ್ರೀಡ್ಜ್, ಹಾಲಪ್ಪ ಸರ್ಕಲ್, ಮಾಧವಚಾರ್ ಸರ್ಕಲ್ ಮೂಲಕ ಹಾದು ಹಳೇ ನಗರದ ಭದ್ರಾ ನದಿ ತಟದಲ್ಲಿ ಮುಕ್ತಾಯವಾಗಿ ಸಂಜೆ ಭದ್ರಾ ನದಿಯಲ್ಲಿ ಭದ್ರಾ ಆರತಿಯನ್ನು ಮಾಡುವ ಮೂಲಕ ಸಮಾರೋಪ ಸಮಾರಂಭ ನಡೆಯಿತು.

       ಅಭಿಯಾನಕ್ಕೆ ಅಂಡರ್ ಬ್ರೀಡ್ಜ್ ನಿಂದ ಮಹಿಳೆಯರು ಪೂರ್ಣ ಕುಂಭದ ಮೂಲಕ ಸ್ವಾಗತಿಸಿ ಮೆರವಣಿಗೆಯಲ್ಲಿ ಪಾಲ್ಗೋಂಡಿದ್ದರು.

       ಅಭಿಯಾನದ ಉದ್ದಕ್ಕೂ ಗ್ರಾಮಗಳಲ್ಲಿ ಗ್ರಾಮಸ್ಥರು ರೈತರು ವಿಧ್ಯಾರ್ಥಿಗಳು ಶಿಕ್ಷಕರುಗಳು ವಿವಿಧ ಸಂಘ ಸಂಸ್ಥೆಗಳವರು ಭಗವಹಿಸಿ ಬೆಂಬಲ ವ್ಯಕ್ತಪಡಿಸಿದರು. ಓಪನ್ ಮೈಂಡ್ ಶಾಲಾ ವಿಧ್ಯಾರ್ಥಿಗಳು ಅಭಿಯಾನದ ಉದ್ದಕ್ಕೂ ಪಾಲ್ಗೋಂಡಿದ್ದು ವಿಶೇಷವಾಗಿತ್ತು.

       ತ್ಯಾಗರಾಜ್ ಸಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಆರ್.ಎಸ್.ಶೋಭಾ ವಂದನಾರ್ಪಣೆ ಮಾಡಿದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.