ನಮ್ಮೂರ ನಾಡಹಬ್ಬ ಶಿವಮೊಗ್ಗ ದಸರಾ-2024 ಅ.3 ರಿಂದ ಅ.12 ರವರೆಗೆ ಅದ್ದೂರಿಯಾಗಿ ನಡೆಯಲಿದೆ: ಶಾಸಕ ಚನ್ನಬಸಪ್ಪ

ಶಿವಮೊಗ್ಗ: ನಮ್ಮೂರ ನಾಡಹಬ್ಬ ಶಿವಮೊಗ್ಗ ದಸರಾ-2024 ಸಾಂಸ್ಕೃತಿಕ ನಾಡಹಬ್ಬ ಅ.3 ರಿಂದ ಅ.12 ರವರೆಗೆ ನಡೆಯಲಿದೆ. ದಸರಾ ಹಬ್ಬವನ್ನು ವಿಜೃಂಭಣೆಯಿಂದ,ವೈಭಯುತವಾಗಿ ನಡೆಸಲು ಎಲ್ಲಾ ಸಿದ್ದತೆ ಏರ್ಪಾಡು ಮಾಡಿಕೊಳ್ಳಲಾಗಿದೆ.ಶಿವಮೊಗ್ಗದಲ್ಲಿ  ದಸರಾಹಬ್ಬವು  ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಮತ್ತು ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ಅದ್ದೂರಿಯಾಗಿ ನಡೆಯಲಿದೆ ಎಂದು ಶಿವಮೊಗ್ಗ ಶಾಸಕ ಚನ್ನಬಸಪ್ಪ ಹೇಳಿದರು.ಇಂದು ಬೆಳಿಗ್ಗೆ ಮಹಾನಗರಪಾಲಿಕೆ ಆವರಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಶಿವಮೊಗ್ಗ ದಸರಾ ಮಹೋತ್ಸವ ನಾಳೆ ಕೋಟೆ ಶ್ರೀ ಚಂಡಿಕಾ ದುರ್ಗಾ ಪರಮೇಶ್ವರಿ  ದೇವಸ್ಥಾನದ ಹತ್ತಿರ ಉದ್ಘಾಟನೆ ಗೊಳ್ಳಲಿದೆ.ಶ್ರೀ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿ ಪ್ರತಿಷ್ಟಾಪನೆ ಗೊಳ್ಳಲಿದೆ ಎಂದರು.

ಇಂದು ಮಕ್ಕಳ ದಸರಾ ಹಬ್ಬದ ಅಂಗವಾಗಿ 24 ಸಾವಿರ ಮಕ್ಕಳು ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಾರೆ ಐದು ದಿಕ್ಕಿನಿಂದ ಬಂದು ಮಕ್ಕಳು ಒಟ್ಟಿಗೆ ಸೇರುತ್ತಾರೆ ಎಂದರು.

ಶಿವಮೊಗ್ಗದಲ್ಲಿ ವಿದ್ಯುತ್ ಅಲಂಕಾರದ ಖರ್ಚನ್ನು ಸೂಡಾ ಅಭಿವೃದ್ಧಿ ಪ್ರಾಧಿಕಾರ ಭರಿಸಲಿದೆ ಎಂದರು. ಎಲ್ಲರ ಸಹಕಾರದಿಂದ  ಶಿವಮೊಗ್ಗ ನಾಡ ಹಬ್ಬವನ್ನು ಆಚರಿಸೋಣ ಶಿವಮೊಗ್ಗದ ಎಲ್ಲಾ ನಾಗರೀಕರು ದಸರಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರ ಮೂಲಕ ಯಶಸ್ವಿಯಾಗಿ ನಡೆಯಲು ಸಹಕರಿಸಬೇಕಾಗಿ ವಿನಂತಿಸಿದರು.

ದಸರಾ ಉತ್ಸವ ಯಶಸ್ವಿಯಾಗಿ ನಡೆಯಲು 14 ಕಮಿಟಿ ರಚಿಸಲಾಗಿದೆ.68 ಚಟುವಟಿಕೆ ಕಾರ್ಯಕ್ರಮ ಗಳು ನಡೆಯಲಿದೆ ಎಂದರು.ಸಾಂಸ್ಕೃತಿಕ ದಸರಾ,ಯಕ್ಷದಸರಾ,ಮಹಿಳಾ ದಸರಾ,ದಸರಾಚಲನ ಚಿತ್ರೋತ್ಸವ,ಪತ್ರಕರ್ತರ ದಸರಾ,ಮಕ್ಕಳ ದಸರಾ,ಯೋಗಾದಸರಾ,ರೈತದಸರಾ,ರಂಗದಸರಾ,ರಂಗಗೀತೆ ಗಾಯನ,ಯುವದಸರಾ,ಮಕ್ಕಳ ನಾಟಕ,ಮಹಿಳಾ ನಿರ್ದೆಶಿತ ನಾಟಕ ಪ್ರದರ್ಶನ, ಗಮಕ ದಸರಾ,ಪರಿಸರ ದಸರಾ,ಏಕವ್ಯಕ್ತಿ ನಾಟಕ ಪ್ರದರ್ಶನ,ಪೌರಾಣಿಕ ನಾಟಕ ಪ್ರದರ್ಶನ, ಕಲಾದಸರಾ,ಆಹಾರ ದಸರಾ,ಜ್ಞಾನ ದಸರಾ,ನಾಟ್ಯ ವೈವಿಧ್ಯ ಸಂಗೀತ ಸಂಬ್ರಮ ಕಾರ್ಯಕ್ರಮ ಗಳು ನಡೆಯಲಿವೆ ಎಂದರು.

ಬೆಳ್ಳಿ ಮಂಟಪದಲ್ಲಿ ಶ್ರೀ ಚಾಮುಂಡೇಶ್ವರಿ ದೇವಿಯ ಬೆಳ್ಳಿ ವಿಗ್ರಹದ ಅಂಬಾರಿ ಉತ್ಸವ ನಡೆಯಲಿದೆ. ಮೆರವಣಿಗೆಯಲ್ಲಿ  ರಾಜಬೀದಿ ಉತ್ಸವದಲ್ಲಿ ಮೂರು ಆನೆಗಳು ಸಾಗರ್,ಬಾಲಣ್ಣ,ಬಹದ್ದೂರ್ ಭಾಗವಹಿಸಲಿವೆ ಎಂದರು. 150 ಕ್ಕೂ ಹೆಚ್ಚು ಶಿವಮೊಗ್ಗದಲ್ಲಿನ ದೇವಾನು ದೇವತೆಗಳು ಉತ್ಸವದ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ ಎಂದರು.
ಅಲ್ಲಮ ಪ್ರಭು ಮೈದಾನದಲ್ಲಿ ದಸರಾ ಉತ್ಸವ ಸಂಪನ್ನಗೊಳ್ಳಲಿದೆ ಎಂದರು.

ಈ ಬಾರಿ ವಿಶೇಷವಾಗಿ ಪೌರಕಾರ್ಮಿಕ ದಸರಾ,ಪತ್ರಕಾ ದಸರಾ ನಡೆಯುತ್ತಿರುವುದು ವಿಶೇಷವಾಗಿ ದೆ ಎಂದರು.

 ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತರಾದ ಶ್ರೀಮತಿ ಕವಿತಾ ಯೋಗಪ್ಪನವರು ಮಾತನಾಡಿ ಪ್ರತಿವರ್ಷದಂತೇ ಈ ಬಾರಿಯು ಶಿವಮೊಗ್ಗ ದಸರಾ ವೈಭಯುತವಾಗಿ ಅದ್ದೂರಿಯಾಗಿ ನಡೆಯಲಿದೆ. ನಮ್ಮೂರ ನಾಡಹಬ್ಬವನ್ನು ಎಲ್ಲರೂ ಸೇರಿ ಆಚರಿಸೋಣ ಎಂದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಶಾಸಕ ಡಿ.ಎಸ್.ಅರುಣ್,ನಿಂಗನಗೌಡ, ಮತ್ತಿತರರು ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.