ಶಿಕಾರಿಪುರ :ಅಹಿಂದ ಸಂಘಟನೆ ಯಾವುದೇ ಜಾತಿ ಮತ್ತು ಪಕ್ಷಗಳಿಗೆ ಸೀಮಿತವಲ್ಲ;ಚಂದ್ರಬೋಪಾಲ್

ಶಿಕಾರಿಪುರ :  ಅ ಹಿಂದ ಸಂಘಟನೆಯಲ್ಲಿ ಸಮಾನ ಚಿಂತನೆಗಳ, ಸಮಾನಮನಸ್ಕರಿಗೆ ಮುಕ್ತ ಅವಕಾಶವಿದೆ ಎಂದು ಪಂಚ ಗ್ಯಾರಂಟಿಗಳ ಜಿಲ್ಲಾಧ್ಯಕ್ಷರು ಹಾಗೂ ಅಹಿಂದ ಸಂಘಟನೆಯ ಜಿಲ್ಲಾಧ್ಯಕ್ಷರಾದ ಚಂದ್ರಬೋಪಾಲ್ ರವರು ಹೇಳಿದರು. 

ಶಿಕಾರಿಪುರ ನಗರ ಘಟಕದ ನೂತನ ಅಧ್ಯಕ್ಷರಿಗೆ  ಅಭಿನಂದನೆ ಸಲ್ಲಿಸಿ ಅವರು ಮಾತನಾಡಿದರು. 

ಅಹಿಂದ ಸಂಘಟನೆ ಯಾವುದೇ ಮುಂದುವರೆದ ಜಾತಿಗಳ ವಿರುದ್ಧದ ಸಂಘಟನೆ ಅಲ್ಲಾ, ಅಹಿಂದ ವರ್ಗದವರು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ತೀರಾ ಹಿಂದುಳಿದಿದ್ದು, ಅಂಥವರ ಸಂಘಟನೆ ಮತ್ತು ಹೋರಾಟದ ಮೂಲಕ ಅವರ ಹಕ್ಕನ್ನು  ಪ್ರತಿಪಾದಿಸುವ ಮೂಲಕ  ಪಡೆದುಕೊಳ್ಳಬೇಕೆಂಬುದು ಸಂಘಟನೆ ಉದ್ದೇಶ ಎಂದರು. ಅಹಿಂದ ವರ್ಗದವರು ಇಡೀ ರಾಜ್ಯದಲ್ಲಿ ಶೇಕಡ 85% ಇದ್ದು, ಅವರಿಗೆ ದೊರೆಯಬೇಕಾದ ರಾಜಕೀಯದ ವಿವಿಧ ಕ್ಷೇತ್ರದ ಹಕ್ಕುಗಳು ದೊರೆಯದಾಗಿದೆ, ರಾಜಕೀಯವಲ್ಲದೆ ಸರ್ಕಾರಿ ಹುದ್ದೆಗಳಲ್ಲಿ ತುಂಬಾ ಹಿಂದಿದ್ದು, ಇದೇ ರೀತಿ ಮುಂದುವರೆದರೆ ತುಂಬಾ        ಕೆಳಮಟ್ಟಕ್ಕೆ ಹೋಗುವ ಅಪಾಯವಿದೆ ಎಂದ ಅವರು ಸರ್ಕಾರದ ಎಲ್ಲಾ ವಿವಿಧ ಸಂಘ, ಸಂಸ್ಥೆ, ರಾಜಕಾರಣ   ಕ್ಷೇತ್ರದಲ್ಲಿ ಮೀಸಲಾತಿ ದೊರಕಬೇಕು, ಈ ಜನಗಣತಿ ಕಡ್ಡಾಯವಾಗಿ ಅನುಷ್ಠಾನವಾಗಬೇಕು ಎಂದರು. ನೂತನ ಅಧ್ಯಕ್ಷ ನಗರದ ಮಾಲ್ತೇಶ್ ಮಾತನಾಡಿ ನನಗೆ ವಹಿಸಿರುವ ಈ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ಸಂಘಟನೆ ಮಾಡುತ್ತೇನೆ ಹಾಗೂ ಎಲ್ಲಾ ಗುರುಹಿರಿಯರ ಮಾರ್ಗದರ್ಶನದಲ್ಲಿ ಹೋರಾಟ ಮಾಡುತ್ತೇನೆ ಎಂದರು. ಕಾಂಗ್ರೆಸ್ ನ ಹಿರಿಯ ಮುಖಂಡರಾದ ನಗರದ ಮಹದೇವಪ್ಪನವರು ಮಾತನಾಡಿ ಪ್ರಸ್ತುತ ಸನ್ನಿವೇಶದಲ್ಲಿ ಅಹಿಂದ ಸಂಘಟನೆಯ  ಹೋರಾಟದ ಅವಶ್ಯಕತೆ ಇದೆ, ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಅವರು ಹೇಳಿದಂತೆ ಪ್ರಜಾಪ್ರಭುತ್ವದಲ್ಲಿ ಜಾತಿ ರಾಜಕೀಯ ಮಾಡಿದರೆ ಸಾಮಾನ್ಯ ಜನರು ಸತ್ತಂತೆ ಪ್ರತಿಯೊಬ್ಬರಲ್ಲಿ ನಾಯಕತ್ವದ ಗುಣ ಬೆಳೆಸಿ ಅದರ ಹಕ್ಕನ್ನು ಪಡೆಯುವುದು ಅನಿವಾರ್ಯವಾಗಿದೆ ಎಂದರು. ಅಹಿಂದ ಎಂದರೆ ಬಹಳ ಜನಕ್ಕೆ ಅರ್ಥವಾಗುವುದಿಲ್ಲ, ಇದರಲ್ಲಿ ರಾಜಕೀಯವಿಲ್ಲ, ದೇವರಾಜ್ ಅರಸ್, ಬಂಗಾರಪ್ಪನವರ ನಂತರ ಸಿದ್ದರಾಮಯ್ಯನವರು ಆ ಶಕ್ತಿಯನ್ನು ಬಳಸಿ ಸಂವಿಧಾನಾತ್ಮಕವಾದ ಹಕ್ಕುಗಳನ್ನು ಪಡೆಯಲು ಹೆಜ್ಜೆ ಇಟ್ಟಿದ್ದಾರೆ ಆ ನಿಟ್ಟಿನಲ್ಲಿ ಅ ಹಿಂದ ಸಂಘಟನೆ ಒಟ್ಟಿಗಿ ಎಲ್ಲಾ ಪಕ್ಷದವರು ಇದಕ್ಕೆ ಕೈಜೋಡಿಸಬೇಕು ಎಂದರು. ಇನ್ನೋರ್ವ್ ಮುಖಂಡ ಬಂಡಾರಿ ಮಾಲತೇಶ್ ಮಾತನಾಡಿ ಅಹಿಂದ ಸಂಘಟನೆ ಪಕ್ಷಾತೀತವಾಗಿದ್ದು ಎಲ್ಲಾ ಪಕ್ಷದವರಿಗೂ ಮುಕ್ತ ಅವಕಾಶವಿದೆ,ದಯಮಾಡಿ ಎಲ್ಲರೂ ಒಗ್ಗಟ್ಟಾಗಿ ಕೈಜೋಡಿಸಬೇಕೆಂದು ಮನವಿ ಮಾಡಿದರು. ಈ ಸಂದರ್ಭ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಾರಿವಾಳ ಶಿವರಾಂ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಲೋಕೇಶ್, ಮೈನಾರಿಟಿ ರಾಜ್ಯಾಧ್ಯಕ್ಷ ಮಕ್ಬುಲ್ ಸಾಬ್, ಶಿವಮೊಗ್ಗ ಜಿಲ್ಲಾ ಅಹಿಂದ ಪ್ರಧಾನ ಕಾರ್ಯದರ್ಶಿ ವಸಂತ್ ಕುಮಾರ್, ಸೇರಿದಂತೆ  ಹಿರಿಯ ಮುಖಂಡರಾದ ಕಣಿವೆ ಮನೆ ಅರುಣ್   ನಗರದ ಕಿಟ್ಟಿ, ಕಳೆ ಗುಡ್ಡಿ ಮಂಜುನಾಥ್, ಸೇರಿದಂತೆ ಹಲವರು ಹಾಜರಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.