ಸೆ.26 ರಂದು ರಾಜ್ಯ ರೈಲ್ವೆ ಮತ್ತು ಜಲಶಕ್ತಿ ಸಚಿವ ವಿ.ಸೋಮಣ್ಣ ಶಿವಮೊಗ್ಗಕ್ಕೆ ಭೇಟಿ: ಅಭಿವೃದ್ಧಿ ಯೋಜನೆಗಳ ವೀಕ್ಷಣೆ
ಮಾನ್ಯ ರೈಲ್ವೆ ಮತ್ತು ಜಲ ಶಕ್ತಿ ರಾಜ್ಯ ಸಚಿವರಾದ ಶ್ರೀ ವಿ ಸೋಮಣ್ಣ ಅವರು ಗುರುವಾರ, ಸೆಪ್ಟೆಂಬರ್ 26, 2024 ರಂದು ಶಿವಮೊಗ್ಗಕ್ಕೆ ಭೇಟಿ ನೀಡಲಿದ್ದು, ಈ ಪ್ರದೇಶದಲ್ಲಿನ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳ ಪ್ರಗತಿಯನ್ನು ವೀಕ್ಷಿಸಲಿದ್ದಾರೆ. ಇವರೊಂದಿಗೆ ಶ್ರೀ ಬಿ ವೈ ರಾಘವೇಂದ್ರ, ಮಾನ್ಯ ಸಂಸದರು, ಶಿವಮೊಗ್ಗ, ಮತ್ತು ಇತರ ಸಾರ್ವಜನಿಕ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಸಚಿವರ ಭೇಟಿಯ ವಿವರಗಳು :
ಬೆಳಿಗ್ಗೆ 9:00 ಘಂಟೆಗೆ: ಶಿಕಾರಿಪುರ-ಶಿವಮೊಗ್ಗ ನಡುವೆ ಶಿಕಾರಿಪುರ ಯಾರ್ಡ್ ಬಳಿ ಕಿ.ಮೀ 45/700 ಮತ್ತು ರಾಜ್ಯ ಹೆದ್ದಾರಿ 57 ರಲ್ಲಿ ಕಿಮೀ 34/900 ರಲ್ಲಿ ರಸ್ತೆ ಕೆಳ ಸೇತುವೆ ನಿರ್ಮಾಣದ ಪರಿಶೀಲನೆ.
11:30 ಘಂಟೆಗೆ: ಕೋಟೆಗಂಗೂರು ಕೋಚಿಂಗ್ ಟರ್ಮಿನಲ್‌ನಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ.
ಮಧ್ಯಾಹ್ನ 12:00 ಘಂಟೆಗೆ: ಶಿವಮೊಗ್ಗ/ಮಲೆನಾಡು ಭಾಗದಾದ್ಯಂತ ನಡೆಯುತ್ತಿರುವ ಅಭಿವೃದ್ಧಿ ಯೋಜನೆಗಳು ಮತ್ತು ಕಾಮಗಾರಿಗಳ ಕುರಿತು ಚರ್ಚಿಸಲು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನೈಋತ್ಯ ರೈಲ್ವೆ ಅಧಿಕಾರಿಗಳು, ಸಾರ್ವಜನಿಕ ಪ್ರತಿನಿಧಿಗಳು ಮತ್ತು ಸ್ಥಳೀಯ ಆಡಳಿತದೊಂದಿಗೆ ಸಭೆ.
ಸಭೆಯ ನಂತರ ಸಚಿವರು ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಲಿದ್ದಾರೆ.
ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮದ ಪ್ರತಿನಿಧಿಗಳನ್ನು ಸಚಿವರ ಪರಿಶೀಲನೆಗಳು, ಸಭೆಯ ಕಾರ್ಯಚಟುವಟಿಕೆಗಳನ್ನು ವರದಿ ಮಾಡಲು ಮತ್ತು ಪ್ರಚಾರಕ್ಕಾಗಿ ಆಹ್ವಾನಿಸಲಾಗಿದೆ..
ಗಿರಿಶ್ ಧರ್ಮರಾಜ ಕಲಗೊಂದ್,ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಮತ್ತುಜನಸಂಪರ್ಕ ಅಧಿಕಾರಿ,ನೈರುತ್ಯ ರೈಲ್ವೆ, ಮೈಸೂರು ವಿಭಾಗ ಇವರು ಪತ್ರಿಕಾ ಪ್ರಕಟಣೆ ನೀಡಿದ್ದಾರೆ.
Leave a Comment