ಶಿವಮೊಗ್ಗದ ಸರ್ಕಾರಿ ಶಾಲೆಯೊಂದರಲ್ಲಿ 11 ಜನ ಮಕ್ಕಳಿಗೆ 3 ಜನ ಟೀಚರ್, ಶಿಕ್ಷಣ ಸಚಿವರ ಕ್ಷೇತ್ರದಲ್ಲಿ ಹೀಗೂ ಉಂಟೇ!!
ಶಿವಮೊಗ್ಗ: ಶಿಕ್ಷಣ ಸಚಿವರ ತವರು ಕ್ಷೇತ್ರದಲ್ಲಿ ಶಿವಮೊಗ್ಗ ಜಯಂತಿಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2024-25 ಸಾಲಿಗೆ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ ಕೇವಲ 11, ಅದರಲ್ಲಿ ವಿದ್ಯಾರ್ಥಿಗಳು ಎಸ್.ಸಿ-9,ಇತರೇ 2 ವಿದ್ಯಾರ್ಥಿಗಳು ಮಾತ್ರ ಇದ್ದಾರೆ.ಒಟ್ಟು 11 ಜನ ವಿದ್ಯಾರ್ಥಿಗಳಿಗೆ 3 ಜನ ಟೀಚರ್ ಇದ್ದಾರೆ ಎಂದು ಹೇಳಲಾಗುತ್ತಿದೆ.ಇದು ಬಾರಿ ಚರ್ಚೆಗೆ ಗ್ರಾಸವಾಗಿದೆ.
ಕರ್ನಾಟಕ ಸರ್ಕಾರದ ಮಾನ್ಯ ಶಿಕ್ಷಣ ಸಚಿವರು ಮತ್ತು ಜಿಲ್ಲೆಯ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಗಮನಹರಿಸುವರೇ.....
ಒಂದನೇ ತರಗತಿಯಲ್ಲಿ ವಿದ್ಯಾರ್ಥಿಗಳು-2,2 ನೇ ತರಗತಿಯಲ್ಲಿ-1,3 ನೇ ತರಗತಿಯಲ್ಲಿ -3,4 ನೇ ತರಗತಿಯಲ್ಲಿ -3,5 ನೇ ತರಗತಿಯಲ್ಲಿ ಇಲ್ಲ,6 ನೇ ತರಗತಿಯಲ್ಲಿ- 1, 7 ನೇ ತರಗತಿಯಲ್ಲಿ- 2, 8 ನೇ ತರಗತಿಯಲ್ಲಿ ಇಲ್ಲ.ಒಟ್ಟು ಎಲ್ಲಾ ತರಗತಿ ವಿದ್ಯಾರ್ಥಿಗಳ ಸಂಖ್ಯೆ-11 ಆಗಿರುತ್ತದೆ.ಸರ್ಕಾರಿ ಶಾಲೆಯ ಸ್ಥಿತಿಗತಿಯನ್ನು ನೋಡಿದರೇ ಆಶ್ಚರ್ಯವಾಗುತ್ತದೆ.ಶಿಕ್ಷಣ ಸಚಿವರ ತವರು ಕ್ಷೇತ್ರದಲ್ಲಿ ಹೀಗೂ ಉಂಟೇ!! ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.ಈ ವಿಷಯ ಸಾರ್ವಜನಿಕ ವಲಯದಲ್ಲಿ ಬಿಸಿ ಬಿಸಿ ಚರ್ಚೆಯಾಗತೊಡಗಿದೆ.
ಮಾನ್ಯ ಶಿಕ್ಷಣ ಸಚಿವರ ತವರು ಕ್ಷೇತ್ರದಲ್ಲಿ ಶಿವಮೊಗ್ಗದಲ್ಲಿ ಇಂತಹ ಪ್ರಕರಣ ಕಂಡುಬಂದಿದೆ. ಈ ಶಾಲೆಗೆ ದಿನಕ್ಕೊಂದು ಶಿಕ್ಷಕರು ಮಾತ್ರ ಬರುತ್ತಾರೆ. ಕೆಲವೊಮ್ಮೆ ತಿಂಗಳಲ್ಲಿ ಒಂದು ದಿವಸ ಬಂದು ಅಟೆಂಡೆನ್ಸ್ ಹಾಕಿ ಹೋಗುತ್ತಾರೆ ಎಂದು ಹೇಳಲಾಗುತ್ತಿದೆ.ಆಯಾಗಿ ಸಂಬಳ ಪಡೆದು ಹೋಗುತ್ತಿದ್ದಾರೆ. ವಿದ್ಯಾರ್ಥಿಗಳ ಸಂಖ್ಯೆ ಮಾತ್ರ ವರ್ಷಾವಾರು ಕಡಿಮೆಯಾಗಿದೆ.ಶಿಕ್ಷಕರು ಮಾಡಿದ ಪ್ರಗತಿ ಸಾಧನೆ ಏನು ಎಂಬುದು ಸಾರ್ವಜನಿಕರ ದೂರು ಆಗಿದೆ.
ಶಿವಮೊಗ್ಗದಲ್ಲಿ ಜಯಂತಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 11 ಜನ ವಿದ್ಯಾರ್ಥಿಗಳ ಹೆಸರಿನಲ್ಲಿ , 3 ಜನ ಶಿಕ್ಷಕರು ಸಂಬಳ ಪಡೆದು ಸರ್ಕಾರಕ್ಕೆ ಅಪಾರ ನಷ್ಟ ಉಂಟು ಮಾಡುತ್ತಿದ್ದಾರೆ. ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ಸಚಿವರು ಈ ಬಗ್ಗೆ ಗಮನಹರಿಸದೇ ಇರುವುದು ಬೇಸರ ತರಿಸಿದೆ ಎಂದು ಸಾರ್ವಜನಿಕರ ದೂರಾಗಿರುತ್ತದೆ.
ಶಿವಮೊಗ್ಗದಲ್ಲಿ ಜಯಂತಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 3 ಜನ ಶಿಕ್ಷಕರು ಇರುವುದಾಗಿ ಮಾಹಿತಿ ಲಭ್ಯವಾಗಿದೆ. 1) ಸರೋಜ.ಜಿ 2) ಸೌಮ್ಯ.ಎಸ್ 3) ಮಲ್ಲೇಶಪ್ಪ ಎನ್.
ಇದರಲ್ಲಿ ಸೌಮ್ಯ. ಎಸ್, ಟಿ.ಜಿ.ಟಿ ಶಿಕ್ಷಕಿ ಇವರು ಸದರಿ ಶಾಲೆಗೆ ದಿನಾಂಕ 2-7-2011 ರಿಂದ ಸುಮಾರು 13 ವರ್ಷದಿಂದ ಹಾಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಮಾಹಿತಿಯನ್ನು ನೀಡಲಾಗಿದೆ. ಆದರೇ ಇವರು ಸೇವೆಗೆ ಸೇರಿದ್ದು 27-4-2015 ಎಂದು ಮಾಹಿತಿಯನ್ನು ಸದರಿ ಶಾಲೆಯ ಮುಖ್ಯೋಪಾಧ್ಯಾಯರು ನೀಡಿದ್ದಾರೆ.ಇದು ಸಹ ಅನುಮಾನಕ್ಕೆ ಕಾರಣವಾಗಿದೆ.ಈ ಬಗ್ಗೆ ಕೂಲಂಕಷವಾಗಿ ಸಂಪೂರ್ಣವಾಗಿ ತನಿಖೆಯಾಗಬೇಕು ಎಂಬುದು ಸಾರ್ವಜನಿಕರ ಒತ್ತಾಸೆಯಾಗಿದೆ.ಇವರು ಶಾಲೆಗೆ ಹೋಗುವುದೇ ಅಪರೂಪ ಎಂಬ ಆರೋಪ ಕೀಡ ಕೇಳಿ ಬಂದಿದೆ.ಇವರು ಸದರಿ ಶಾಲೆಯಲ್ಲಿ ಒಂದೇ ಕಡೆ 13 ವರ್ಷದಿಂದ ಕರ್ತವ್ಯ ನಿರ್ವಹಿಸುತ್ತಿದ್ದರೂ ಬೇರೆ ಕಡೆಗೆ ವರ್ಗಾವಣೆಗೊಂಡಿಲ್ಲ. ಇವರು ಮಾಡಿದ ಸಾಧನೆ ಏನು ಅಂತಾ ಗೊತ್ತಿಲ್ಲ.
ಶಿವಮೊಗ್ಗ ಶಿಕ್ಷಣ ಇಲಾಖೆಯ ಡಿಡಿಪಿಐ, ಮತ್ತು ಶಿಕ್ಷ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಮಧುಬಂಗಾರಪ್ಪರವರು ಇತ್ತ ಕಡೆ ಗಮನಹರಿಸಿ ಸೂಕ್ತವಾದ ಕ್ರಮ ಕೈಗೊಳ್ಳುವರೇ ಎಂಬುದನ್ನು ಕಾದುನೋಡಬೇಕಾಗಿದೆ.

ಇಂತಹ ಶಿಕ್ಷಕರನ್ನು ಅಮಾನತು ಗೊಳಿಸಲಿ ಶಿಕ್ಷಣ ಸಚಿವರು ಮಧುಬಂಗಾರಪ್ಪನವರು ನೋಡೋಣ ಅವರ ದಕ್ಷತೆಯನ್ನು ಉಳಿಸಿಕೊಳ್ಳಲಿ ಎಂಬುವುದು ಅಶಯವಾಗಿದೆ.ಅದರೆ ವಾರ್ತಿಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಕಡುಭ್ರಷ್ಟ ಮತ್ತು ಪರ್ತಕರ್ತರ ಮಧ್ಯೆತಂದಿಡುವ ಬಕೆಟ್ ಅಧಿಕಾರಿ ಮಾರುತಿಯ ಧರ್ಮ ಪತ್ನಿ ಸೌಮ್ಯರವರು ಅಗಿದ್ಸರಿಂದ ಶಿಕ್ಷಣ ಸಚಿವರು ಕ್ರಮ ಜರುಗಿಸುವುದು ಕಷ್ಠವಾಗುತ್ತದೆ ಎಂದು ತೋರುತ್ತದೆ. ಹೆಚ್ ಎಸ್ ವಿ.ಸಂಪಾದಕರು.
ಪ್ರತ್ಯುತ್ತರಅಳಿಸಿ