ಶಿವಮೊಗ್ಗ: ಮುಂಬರುವ ಗೌರಿ ಗಣೇಶ ಮತ್ತು ಈದ್ ಮಿಲಾದ್ ಹಬ್ಬಗಳ ಹಿನ್ನೆಲೆಯಲ್ಲಿ, ಶಾಂತಿ ಸಭೆ
ಈದ್ ಮಿಲಾದ್ ಮತ್ತು ಗಣೇಶ ಪ್ರತಿಷ್ಠಾಪನಾ ಸಮಿತಿ ಸದಸ್ಯರು ಗಳ ಸಹಕಾರ ಮುಖ್ಯ,ಎಲ್ಲರೂ ಸೇರಿ ಹಬ್ಬಗಳನ್ನು ವಿಜೃಂಭಣೆಯಿಂದ ಆಚರಿಸೋಣ: ಶಾಂತಿ ಸಮಿತಿಯ ಸಭೆಯಲ್ಲಿ ಎಸ್ಪಿ ಮಿಥುನ್ ಕುಮಾರ್ ಹೇಳಿಕೆ
ಶಿವಮೊಗ್ಗ: ಮುಂಬರುವ *ಗೌರಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬಗಳ* ಹಿನ್ನೆಲೆಯಲ್ಲಿ, ಈ ದಿನ ದಿನಾಂಕಃ 30-08-2024 ರಂದು ಸಂಜೆ ಶಿವಮೊಗ್ಗ ನಗರದ ಡಿಎಆರ್ ಪೊಲೀಸ್ ಸಭಾಂಗಣದಲ್ಲಿ ಶಾಂತಿ ಸಮಿತಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.*ಶ್ರೀ ಮಿಥುನ್ ಕುಮಾರ್ ಜಿ. ಕೆ. ಐಪಿಎಸ್,* ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು ಸದರಿ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದು, *ಶ್ರೀ ಚನ್ನಬಸಪ್ಪ,* ಮಾನ್ಯ ಶಾಸಕರು, ಶಿವಮೊಗ್ಗ ವಿಧಾನ ಸಭಾ ಕ್ಷೇತ್ರ ರವರು ಮುಖ್ಯ ಅಥಿತಿಗಳಾಗಿ ಭಾಗವಹಿಸಿದ್ದರು. ಮಾನ್ಯ ಪೊಲೀಸ್ ಅಧೀಕ್ಷಕರು ಸಭೆಯನ್ನು ಉದ್ದೇಶಿಸಿ ಮಾತನಾಡಿ ಈ ಕೆಳಕಂಡ ಸಲಹೆ ಸೂಚನೆಗಳನ್ನು ನೀಡಿದರು. 1) *ಪ್ರತೀ ಹಬ್ಬಗಳು ಆಯಾ ಧರ್ಮಗಳಿಗೆ ಪವಿತ್ರವಾದ* ಹಬ್ಬಗಳಾಗಿದ್ದು, ಅದರದೇ ಆದ ವಿಶೇಷತೆಗಳಿರುತ್ತವೆ, ಈ ಹಿಂದಿನಿಂದಲೂ ಆಯಾ ಧರ್ಮಗಳಲ್ಲಿನ ಆಚರಣಾ ಪದ್ಧತಿಯ ಪ್ರಕಾರ ವಿಜೃಂಭಣೆಯಿಂದ ಹಬ್ಬಗಳನ್ನು ಆಚರಿಸಿಕೊಂಡು ಬರಲಾಗುತ್ತಿದೆ. *ಬೇರೆಯವರೊಂದಿಗೆ ಪೈಪೋಟಿಯ* ರೀತಿ ಹಬ್ಬವನ್ನು ಆಚರಿಸದೇ, ಹಬ್ಬವನ್ನು ಸಹಬಾಳ್ವೆ ಮತ್ತು ವಿಜೃಂಭಣೆಯಿಂದ ಆಚರಿಸಬೇಕೆಂಬ ಮನೋಭಾವವನ್ನು ಬೆಳೆಸಿಕೊಂಡು ಎಲ್ಲಾ ಹಬ್ಬಗಳು ಸಮಾನವೆಂದು ಪರಿಗಣಿಸಿದರೆ *ಯಾವುದೇ ಸಮಸ್ಯೆಗಳಲ್ಲಿದೇ ಹಬ್ಬಗಳನ್ನು ಆಚರಿಸಲು ಸಾಧ್ಯವಿರುತ್ತದೆ.* 2) ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುವ ನಿಟ್ಟಿನಲ್ಲಿ *ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಶಿವಮೊಗ್ಗ ಜಿಲ್ಲಾಡಳಿತವು* ಎಲ್ಲಾ ರೀತಿಯ ಸಹಕಾರವನ್ನು ನೀಡುತ್ತದೆ ಹಾಗೂ *ಸಾರ್ವಜನಿಕ ಹಿತಾಸಕ್ತಿಂದ ಹಬ್ಬವನ್ನು ಶಾಂತ* ರೀತಿಯಲ್ಲಿ, ಯಾವುದೇ ಭಿನ್ನಾಭಿಪ್ರಾಯವಿಲ್ಲದೇ ಆಚರಣೆ ಮಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯು *ಕಾಲಕಾಲಕ್ಕೆ ಸಲಹೆ ಸೂಚನೆಗಳನ್ನು* ನೀಡಲಿದ್ದು, ಕಾನೂನು ಚೌಕಟ್ಟಿನ ಒಳಗೆ ಮಾಡುವ ಎಲ್ಲಾ ರೀತಿಯ ಆಚರಣೆಗಳಿಗೆ *ಯಾವುದೇ ನಿರ್ಬಂಧವಿಲ್ಲದೇ ಸಂಪೂರ್ಣ ಬೆಂಬಲ* ನೀಡುತ್ತೇವೆ. 3) ಹಬ್ಬದ ಆಚರಣೆಗೆ ಸಂಬಂಧಿಸಿದಂತೆ *ಯಾವುದೇ ಸಮಸ್ಯೆಗಳಿದ್ದಲ್ಲಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು, ಮುಖಂಡರು, ಚುನಾಯಿತ ಪ್ರತಿನಿಧಿಗಳ ಸಲಹೆ ಪಡೆದು* ಮುಂದುವರೆಯಿರಿ. ಹಬ್ಬಗಳ ಆಚರಣೆಯ ಸಂದರ್ಭದಲ್ಲಿ ಯಾವುದೇ *ಅಹಿತಕರ ಘಟನೆಗಳು ಸಂಭವಿಸಿದಾಗ ಆ ಪ್ರದೇಶದ ಜನರು,* ನಮ್ಮ ಕುಟುಂಭಸ್ಥರು, ನಮ್ಮ ಸುತ್ತಮುತ್ತಲಿನ ಮುಗ್ದ ನಾಗರೀಕರು, ನಮ್ಮ ಸ್ನೇಹಿತರು, ವಯೋವೃದ್ದರು, ಸಣ್ಣ ಮಕ್ಕಳೇ ಅದರ *ಪರಿಣಾಮವನ್ನು ಎದುರಿಸಬೇಕಾಗುತ್ತದೆ.* ಯಾವುದೇ ತುರ್ತು ಸಂದರ್ಭಗಳಲ್ಲಿ ಸಹಾಯಕ್ಕಾಗಿ ಕೂಡ ಯಾರೂ ಸಿಗದ ಪರಿಸ್ಥಿತಿಯು ನಿರ್ಮಾಣವಾಗುತ್ತದೆ.
4) *ಯಾರೋ ಕೆಲವು ಜನರು ಮಾಡುವ ಕಿಡಿಗೇಡಿತನದಿಂದ ಉಳಿದ ಎಲ್ಲರೂ ಅದರ ಪರಿಣಾಮವನ್ನು ಎದುರಿಸುವಂತಾಗತ್ತದೆ* ಆದ್ದರಿಂದ ಈಗಾಗಲೇ ಪೊಲೀಸ್ ಇಲಾಖೆಯು ಮುನ್ನೆಚ್ಚರಿಕಾ ಕ್ರಮವಾಗಿ ತೊಂದರೆಯನ್ನುಂಟು ಮಾಡಬಹುದಾದಂತಹ *ಕಿಡಿಗೇಡಿಗಳನ್ನು ಗುರುತಿಸಿ ಅವರುಗಳ ವಿರುದ್ಧ ಕಾನೂನು ರೀತ್ಯಾ ಕ್ರಮ ಜರುಗಿಸಿದ್ದು,* ಅಂತಹವರ ವಿರುದ್ಧ ಇಲಾಖೆಯು ಸೂಕ್ತ ನಿಗಾ ಸಹಾ ಇರಿಸಿರುತ್ತದೆ. ಒಂದು ವೇಳೆ ಸಾರ್ವಜನಿಕರಿಗೆ ಸಮಸ್ಯೆ / ತೊಂದರೆ ನೀಡುತ್ತಾರೆಂಬ ಬಗ್ಗೆ ಮಾಹಿತಿ ಇದ್ದಲ್ಲಿ ಪೊಲೀಸ್ ಇಲಾಖೆಗೆ ತಿಳಿಸಿ, *ಪೊಲೀಸ್ ಇಲಾಖೆಯು ಅವರುಗಳ ವಿರುದ್ಧ ಕಾನೂನಿನ ಅಡಿಯಲ್ಲಿ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಿದೆ.*
5) *ಸುಳ್ಳು ಸುದ್ದಿಗಳು / ತಿರುಚಿ ಬರೆದ ಸುದ್ದಿಗಳು ಸಾಮಾಜಿಕ ಜಾಲತಾಣದ* ಮುಖಾಂತರ ಹೆಚ್ಚಿನ ಜನ ಸಮೂಹ ಹಾಗೂ ವಿಶೇಷವಾಗಿ ಯುವಜನತೆಯನ್ನು ಸುಲಭವಾಗಿ ತಲುಪುತ್ತವೆ, ಸಾಮಾಜಿಕ ಜಾಲತಾಣದಲ್ಲಿ ಪ್ರಚಾರವಾಗುವ ಸುದ್ಧಿಗಳ ಮೇಲೆ ಪೊಲೀಸ್ ಇಲಾಖೆಯು ಸೂಕ್ತ ನಿಗಾವಹಿಸಿದ್ದು, ಯಾವುದೇ *ಸುಳ್ಳು ಸುಧ್ದಿಗಳು/ ಪ್ರಚೋದನಾತ್ಮಕ / ಆಕ್ಷೇಪಾರ್ಹ ಸುದ್ಧಿಗಳನ್ನು ಅಪ್ ಲೋಡ್ ಮಾಡುವ, ಫಾರ್ವರ್ಡ್ ಮಾಡುವ, ಶೇರ್ & ಟ್ಯಾಗ್* ಮಾಡುವವರ ವಿರುದ್ಧ ಪ್ರಕರಣ ದಾಖಲಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದ್ದು, ಸಾರ್ವಜನಿಕರು ಸಹಾ ಈ ಬಗ್ಗೆ *ಜಾಗೃತರಾಗಿ ಸಾಮಾಜಿಕ ಜಾಲತಾಣದಲ್ಲಿ ಯಾವುದೇ ಘಟನೆಗಳ ಕುರಿತು ಸುದ್ಧಿಗಳು ಬಂದಾಗ ಪೊಲೀಸ್ ಇಲಾಖೆಯ ಗಮನಕ್ಕೆ ತಂದು ಸುದ್ಧಿಗಳ ಸತ್ಯಾಸತ್ಯತೆಗಳನ್ನು* ಪರಿಶೀಲಿಸಿಕೊಳ್ಳುವುದು ಸೂಕ್ತ ವಿರುತ್ತದೆ.
6) ಹಬ್ಬಗಳ ಹಿನ್ನೆಲೆಯಲ್ಲಿ ಅಳವಡಿಸಲಾಗುವ *ಫ್ಲೆಕ್ಸ್ ಮತ್ತು ಬ್ಯಾನರ್ಸ್ ಗಳಲ್ಲಿ ಇತರರ ಭಾವನೆಗಳಿಗೆ ದಕ್ಕೆಯಾಗುವಂತಹ, ಇನ್ನೊಬ್ಬರನ್ನು ದೂಶಿಸುವಂತಹ ಫೋಟೋ / ಮಾಹಿಗಳನ್ನು ಹಾಕಬೇಡಿ,* ಹಬ್ಬದ ಹಿನ್ನೆಲೆಯನ್ನು ತಿಳಿದು ಅದಕ್ಕೆ ಸಂಬಂಧಿಸಿದಂತಹ *ಫ್ಲೆಕ್ಸ್ ಮತ್ತು ಬ್ಯಾನರ್ಸ್ ಗಳನ್ನು ಮಾತ್ರ* ಅಳವಡಿಸಿ. ಪೊಲೀಸ್ ಇಲಾಖೆಯು ಇದರ ಬಗ್ಗೆ ಸೂಕ್ತ ನಿಗಾವಹಿಸಿದ್ದು, ಒಂದು ವೇಳೆ ಯಾರಾದರೂ *ಆಕ್ಷೇಪಾರ್ಹ ಫ್ಲೆಕ್ಸ್ / ಬ್ಯಾನರ್ಸ್ ಗಳನ್ನು ಅಳವಡಿಸಿರುವುದು / ಪ್ರಿಂಟ್ ಮಾಡಿಕೊಟ್ಟಿರುವುದು* ಕಂಡುಬಂದರೆ ಅಂತಹವರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ರೀತ್ಯಾ ನಿರ್ಧಾಕ್ಷಿಣ್ಯ ಕ್ರಮ ಜರುಗಿಸಲಾಗುವುದು.
7) ಎಲ್ಲಾ *ಸಾರ್ವಜನಿಕರು ಸೇರಿ ಸಹಬಾಳ್ವೆಯಿಂದ ಹಬ್ಬವನ್ನು* ಆಚರಿಸುವಾಗ, ಯಾರೋ ಕೆಲವು ಕಿಡಿಗೇಡಿಗಳು ಹಬ್ಬದ *ಆಚರಣೆಗಳಿಗೆ ತೊಂದರೆ ನೀಡುತ್ತಾರೆ ಎಂದಾದರೆ ಅಂತಹವರ ವಿರುದ್ಧ* ಪೊಲೀಸ್ ಇಲಾಖೆಯು ಕಾನೂನು ರೀತ್ಯಾ ಕಠಿಣ ಕ್ರಮ ಕೈಗೊಳ್ಳುತ್ತದೆ.
8) *ಸಾರ್ವಜನಿಕ ಹಿತ ದೃಷ್ಠಿಯಿಂದ ಮುಂಜಾಗ್ರತಾ ಕ್ರಮವಾಗಿ* ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆಯ ಸಹಯೋಗದೊಂದಿಗೆ ಶಿವಮೊಗ್ಗ ನಗರದಾದ್ಯಂತ ಪ್ರಮುಖ ಮತ್ತು *ಸೂಕ್ಷ್ಮ ಸ್ಥಳಗಳಲ್ಲಿ ಸಿಸಿ ಟಿವಿ ಕ್ಯಾಮೆರಾಗಳ ಅಳವಡಿಕೆ, ಬೀದಿ ದೀಪಗಳ ದುರಸ್ಥಿ ಮತ್ತು ಅಳವಡಿಸುವ* ಕುರಿತು ಕ್ರಮ ಕೈಗೊಳ್ಳಲಾಗಿರುತ್ತದೆ. ಇದರ ಜೊತೆಗೆ *ದ್ರೋಣ್ ಕ್ಯಾಮೆರಾಗಳ ಕಣ್ಗಾವಲು ಹಾಗೂ ಇಲಾಖಾ ಮತ್ತು ಖಾಸಗೀ ವಿಡಿಯೋ ಗ್ರಾಫರ್ಸ್ ನೇಮಿಸಿಕೊಂಡು ಹಬ್ಬದ ಆಚರಣೆ / ಮೆರವಣಿಗೆಯ ಸಂಪೂರ್ಣ* ಚಿತ್ರೀಕರಣ ಮಾಡಲಾಗುತ್ತಿದೆ.
9) ಗಣೇಶ ಮೂರ್ತಿಗಳ ವಿಸರ್ಜನಾ ಸ್ಥಳಗಳಲ್ಲಿ *ಸುರಕ್ಷತಾ ದೃಷ್ಠಿಯಿಂದ ಮಹಾನಗರ ಪಾಲಿಕೆಯ ಸಹಯೋಗದೊಂದಿಗೆ ಸ್ಥಳದಲ್ಲಿ ಮೂಲಭೂತ ಸೌಕರ್ಯ,* ಸ್ವಚ್ಛತೆ, ಬ್ಯಾರಿಕೇಡಿಂಗ್ ಮತ್ತು ಸೂಕ್ತ ಬೆಳಕಿನ ವ್ಯವಸ್ಥೆಯನ್ನು ಮಾಡಲು ಕ್ರಮ ಕೈಗೊಳ್ಳಲಾಗಿರುತ್ತದೆ.
10) *ಹೊರ ವಲಯ ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಏರಿಯಾ ಡಾಮಿನೇಷನ್ ಮತ್ತು ವಿಶೇಷ ಕಾಲ್ನಡಿಗೆ ಗಸ್ತು ಮಾಡಿ,* ಸಾರ್ವಜನಿಕವಾಗಿ ಉಪಟಳ ನೀಡುವ ಕಿಡಿಗೇಡಿಗಳ ವಿರುದ್ಧ *4500 ಕ್ಕೂ ಹೆಚ್ಚು ಲಘು ಪ್ರಕರಣಗಳನ್ನು ಮತ್ತು ಗಾಂಜಾ ಮಾರಾಟ* ಮಾಡುವವರ ವಿರುದ್ಧ ಹಾಗೂ ಗಾಂಜಾ ಸೇವನೆ ಮಾಡಿರುವ ಬಗ್ಗೆ ಅನುಮಾನ ಬಂದ ವ್ಯಕ್ತಿಗಳನ್ನು ವೈಧ್ಯಕೀಯ ಪರೀಕ್ಷೆಗೆ ಒಳಪಡಿಸಿ, *ಗಾಂಜಾ ಸೇವನೆ ಮಾಡಿರುವುದು ದೃಡ ಪಟ್ಟವರ ವಿರುದ್ಧ NDPS ಕಾಯ್ದೆಯಡಿಯಲ್ಲಿ* ಪ್ರಕರಣ ದಾಖಲಿಸಿ ಕ್ರಮ ಜರುಗಿಸಲಾಗಿರುತ್ತದೆ.
*ಸಾರ್ವಜನಿಕರಿಗೆ ಹಾಗೂ ಪೊಲೀಸ್ ಇಲಾಖೆಗೆ ಚುನಾಯಿತ ಪ್ರತಿನಿಧಿಗಳು, ಈದ್ ಮಿಲಾದ್ ಮತ್ತು ಗಣೇಶ ಪ್ರತಿಷ್ಠಾಪನಾ ಸಮಿತಿ ಸದಸ್ಯರು ಗಳ ಸಹಕಾರ ಮುಖ್ಯವಾಗಿದ್ದು, ಎಲ್ಲರೂ ಸೇರಿ ಹಬ್ಬಗಳನ್ನು ವಿಜೃಂಭಣೆಯಿಂದ ಆಚರಿಸೋಣ ಎಂದು ಹೇಳಿದರು.*
ಈ ಸಂದರ್ಭದಲ್ಲಿ *ಶ್ರೀ ಕಾರ್ಯಪ್ಪ ಎ. ಜಿ.* ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ, *ಶ್ರೀ ಬಾಬು ಆಂಜನಪ್ಪ,* ಪೊಲೀಸ್ ಉಪಾಧೀಕ್ಷಕರು, ಶಿವಮೊಗ್ಗ-ಎ ಉಪ ವಿಭಾಗ, *ಶ್ರೀ ಸುರೇಶ್ ಎಂ,* ಪೊಲೀಸ್ ಉಪಾಧೀಕ್ಷಕರು, ಶಿವಮೊಗ್ಗ-ಬಿ ಉಪ ವಿಭಾಗ, ಶಿವಮೊಗ್ಗ ನಗರದ ಪೊಲೀಸ್ ನಿರೀಕ್ಷಕರು, ಪೊಲೀಸ್ ಉಪ ನಿರೀಕ್ಷಕರು, ಮಾಧ್ಯಮ ಮಿತ್ರರು, *ಮಹಾ ನಗರ ಪಾಲಿಕೆಯ ಚುನಾಯಿತ* ಸದಸ್ಯರು ಮತ್ತು *ಗಣೇಶ ಪ್ರತಿಷ್ಪಾನಾ ಮಂಡಳಿ ಮತ್ತು ಈದ್ ಮಿಲಾದ್ ಸಮಿತಿ ಸದಸ್ಯರು* ಉಪಸ್ಥಿತರಿದ್ದರು.

Leave a Comment