ಶಿವಮೊಗ್ಗ ಶಾಸಕ ಎಸ್ ಎನ್ ಚನ್ನಬಸಪ್ಪ ರಿಂದ ಕೋರ್ಪಲಯ್ಯ ಛತ್ರ ಮಂಟಪದ ಬಳಿ ತುಂಗೆಗೆ ಪೂಜೆ ಬಾಗಿನ ಸಮರ್ಪಣೆ
ಶಿವಮೊಗ್ಗ:ಮಲೆನಾಡಿನ ಹೆಬ್ಬಾಗಲು ಶಿವಮೊಗ್ಗ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮೈದುಂಬಿ ಹರಿಯುತ್ತಿರುವ ತುಂಗಾ ನದಿಗೆ ಚಾತುರ್ಮಾಸ ಪ್ರಾರಂಭ ಆಷಾಢ ಏಕಾದಶಿಯ ವಿಶೇಷ ಶುಭಸಂದರ್ಭದಲ್ಲಿ ಶಿವಮೊಗ್ಗ ನಗರದ ಶಾಸಕರಾದ *ಎಸ್ ಎನ್ ಚನ್ನಬಸಪ್ಪ* ಅವರು ಕೋರ್ಪಲಯ್ಯ ಛತ್ರ ಮಂಟಪದ ಬಳಿ ನಮ್ಮೆಲ್ಲರ ಜೀವನದಿ ತುಂಗೆಗೆ ಸಾಂಪ್ರದಾಯಿಕವಾಗಿ ಪೂಜಿಸಿ, ಬಾಗಿನ ಸಮರ್ಪಿಸಿದರು.
ಈ ಸಂದರ್ಭದಲ್ಲಿ ವಿಭಾಗ ಪ್ರಭಾರಿ *ಗಿರೀಶ್ ಪಟೇಲ್*, ನಗರ ಬಿಜೆಪಿ ಅಧ್ಯಕ್ಷರಾದ *ಮೋಹನ್ ರೆಡ್ಡಿ*, ಪ್ರಮುಖರಾದ *ಜ್ಞಾನೇಶ್ವರ್, ಎನ್ ಜಿ.ನಾಗರಾಜ್, ಎನ್ ಕೇ ಜಗದೀಶ್*, ಬಿಜೆಪಿ ಪದಾಧಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು.
Leave a Comment