ತೀರ್ಥಹಳ್ಳಿಯ ಮೇಗರವಳ್ಳಿ ಶಾಲೆಯಲ್ಲಿ ವನಮಹೋತ್ಸವ ಕಾರ್ಯಕ್ರಮ
ತೀರ್ಥಹಳ್ಳಿ ತಾಲೂಕ್ ಆಗುಂಬೆ ವಲಯ ಅರಣ್ಯ ಇಲಾಖೆ ವತಿಯಿಂದ ಮೇಗರವಳ್ಳಿ ಶ್ರೀ ಶಿವಶಕ್ತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ 2024 ವನಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
DRFO ಸುನಿಲ್ ಕುಮಾರ್,DRFO ಗುರುರಾಜ್, ಬೀಟ್ ಫಾರೆಸ್ಟ್ ರತೀಶ್ ,ನಿವೃತ್ತ ಶಿಕ್ಷಕರಾದ ಪಡುವಳ್ಳಿ ಕಿಟ್ಟಪ್ಪ ,SDMC ಅಧ್ಯಕ್ಷರಾದ ಪಡುವಳ್ಳಿ ಹರ್ಷೇಂದ್ರ ಕುಮಾರ್ , ಪಡುವಳ್ಳಿ ಗಿರೀಶ್, ಕೈನಲ್ಲಿ ರಾಜೇಶ್, ಮುಖ್ಯ ಶಿಕ್ಷಕರಾದ ಎಂ ಜಿ ಸುರೇಶ್, ಶಾಲಿನಿ ,ಪೂಜಾ ,ವೀಣಾ , ರಮ್ಯ ಶಿಕ್ಷಕ ವೃಂದದವರು ಮಕ್ಕಳು ಉಪಸ್ಥಿತರಿದ್ದರು. ಮಕ್ಕಳಿಂದ ಅಕ್ಷರ ಅನ್ನ -ಪರಿಸರ ಚಿನ್ನ ಪರಿಸರ ನಮ್ಮೆಲ್ಲರ ಹೊಣೆ ಕಾಡನ್ನು ಬೆಳೆಸಿ ನಾಡನ್ನು ಉಳಿಸಿ ಎಂಬ ಘೋಷಣೆಗಳನ್ನು ಮಕ್ಕಳಿಂದ ಕೂಗಿಸಲಾಯಿತು. ಕಾಡು ಬಾದಾಮಿ ,ಸಂಪಿಗೆ, ಮುರುಗನ ಹುಳಿ ಹಾಗೂ ಪೆನ್ನೇರಳೆದಂತಹ ಸ್ಥಳೀಯ ಜಾತಿ ಗಿಡಗಳನ್ನು ನಡೆಸಲಾಯಿತು.

Leave a Comment