ಶಿವಮೊಗ್ಗ: ಅಕ್ರಮವಾಗಿ ಆಕ್ರಮಿಸಿ ಬೇಲಿ ಹಾಕಿದ್ದ ಪಾಲಿಕೆಯ ಜಾಗದ ಬೇಲಿ ತೆರವು ಮಾಡಿದ ಪಾಲಿಕೆ ಅಧಿಕಾರಿಗಳು: ಜೆಸಿಬಿ ಘರ್ಜನೆ ಸ್ಥಳಿಯರ ಮೆಚ್ಚುಗೆ

ಶಿವಮೊಗ್ಗ: ಗೋಪಾಲಗೌಡ ಬಡಾವಣೆಯಲ್ಲಿ ಗೋಪಾಳ ಸರ್ವೆ ನಂ 31/3 ರಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆಯ ಜಾಗವನ್ನು ಅಕ್ರಮವಾಗಿ ಅಕ್ರಮಿಸಿ ತಂತಿ ಬೇಲಿ ಹಾಕಿದ ಜಾಗವನ್ನು ಇಂದು ಪಾಲಿಕೆ ಅಧಿಕಾರಿಗಳ ತಂಡ ಸ್ಥಳಿಯರ ದೂರಿನ ಹಿನ್ನೆಲೆಯಲ್ಲಿ ಜೆಸಿಬಿ ತಂದು ತೆರವು ಗೋಳಿಸಿದ್ದಾರೆ.ಶಿವಮೊಗ್ಗ ಮಹಾನಗರ ಪಾಲಿಕೆ ಜಾಗ ಸುಮಾರು 15 ಎಕರೆಗೂ ಹೆಚ್ಚು ಇದ್ದು, ಕೆಲವು ಜಾಗವನ್ನು ಮಂಡಕ್ಕಿ ಬಟ್ಟಿಯವರಿಗೆ ವಿತರಣೆ ಮಾಡಿದ್ದಾಗಿರುತ್ತದೆ. ಉಳಿದ ಜಾಗ ಪಾಲಿಕೆಯ ಕಸದ ವಾಹನಗಳನ್ನು ನಿಲ್ಲಿಸಲು ಕಾಂಪೌಂಡ್ ಹಾಕಿ ನಿರ್ಮಾಣ ಮಾಡಲಾಗಿದೆ. ಕಾಂಪೌಂಡ್ ಪಕ್ಕದ ಜಾಗಕ್ಕೆ ಪಾಲಿಕೆಯವರು ಬೇಲಿ ಹಾಕಿ ಬಂದೋಬಸ್ತ್ ಮಾಡದೇ ಇರುವ‌ ಕಾರಣ ಕೆಲವರು ಬೇಲಿ ಹಾಕಿ ನಕಲಿ ಖಾತೆ ಮಾಡಿಸಿಕೊಂಡು ಮಾರಾಟ ಮಾಡಲು ಯತ್ನಿಸಿ ದಿಡೀರ್ ಬೇಲಿ ಹಾಕಿದ್ದರು.ಸದರಿ ಜಾಗ ಕೋಟಿ ಗೂ ಹೆಚ್ಚು ಬೆಲೆ ಬಾಳುವದರಿಂದ ಕೆಲವರ ಕಣ್ಣು ಅದರ ಮೇಲೆ ಬಿದ್ದು ತಮ್ಮ ಹೆಸರಿಗೆ ಮಾಡಿಕೊಳ್ಳಲು ಪ್ರಯತ್ನಿಸಿದ್ದರು.ಸ್ಥಳಿಯ ಮತ್ತು ಅಕ್ಕಪಕ್ಕದ ನಿವಾಸಿಗಳು ಇದನ್ನು ನೋಡಿ ಜಿಲ್ಲಾಧಿಕಾರಿಗಳಿಗೆ ಮತ್ತು ಜಿಲ್ಲಾ ರಕ್ಷಣಾದಿಕಾರಿಗಳಿಗೆ ದೂರು ನೀಡಿ ಪಾಲಿಕೆ ಜಾಗವನ್ನು ಆಕ್ರಮಿಸಿದ ಜಾಗವನ್ನು ಕೂಡಲೇ ತೆರವು ಗೋಳಿಸಲು ಒತ್ತಾಯಿಸಿ ನಿನ್ನೆ ತಾನೇ ಜಿಲ್ಲಾಧಿಕಾರಿಗಳಿಗರ ದೂರು ನೀಡಿದ್ದರು.ಈ ಹಿನ್ನೆಲೆಯಲ್ಲಿ ಪಾಲಿಕೆ ಅಧಿಕಾರಿಗಳ ತಂಡ ಜಗದೀಶ್ ಪಾಲಿಕೆಇಂಜಿನಿಯರ್,ವೇಣುಗೋಪಾಲ್,ಪಾಲಿಕೆ ಸರ್ವೆಯರ್,ಹಾಗೂ ರೆವಿನ್ಯೂ ಆಫೀಸರ್ ವಿಜಯಲಕ್ಷ್ಮಿ ರವರು ಜಿಲ್ಲಾಧಿಕಾರಿಗಳು ಮತ್ತು ಪಾಲಿಕೆ ಆಯುಕ್ತರ ನಿರ್ದೆಶನದ ಮೇರೆಗೆ ಜೆಸಿಬಿ ತಂದು ಕ್ಲಿಯರ್ ಮಾಡಿದ್ದಾರೆ.

ಸದರಿ ಪಾಲಿಕೆ ಜಾಗವನ್ನು ಕೆಲವು ರಿಯಲ್ ಎಸ್ಟೇಟ್ ಏಜೆಂಟರು ಖದೀಮರು 5 ರಿಂದ 10 ಲಕ್ಷ ತೆಗೆದು ಕೊಂಡು ಸೈಟ್ ಹಂಚಿದ್ದಾರೆ. ಕೆಲವರು 70 ಲಕ್ಷ ಹಣ ಕೊಟ್ಟಿರುವುದಾಗಿ ಹೇಳುತ್ತಾರೆ. ಕೆಲವರು 3 ಕೋಟಿಗೆ ಪೂರ್ತಿ ಜಾಗವನ್ನು ಸೇಲ್ ಮಾಡಲು ಹೊರಟಿದ್ದರು ಎಂದು ಸ್ಥಳೀಯ ಅಕ್ಕಪಕ್ಕದ ನಿವಾಸಿಗಳು ಹೇಳುತ್ತಾರೆ. ಇದರಲ್ಲಿ ಕೆಲವು ಪಾಲಿಕೆ ಅಧಿಕಾರಿಗಳು ಜಾಗ ಖಾತೆ ಮಾಡಿಕೊಡುವುದಾಗಿ ಹಣ ನುಂಗಿ ಶಾಮಿಲು ಆಗಿದ್ದಾರೆ ಎಂಬ ಆರೋಪ ಸಹ ಕೇಳಿ ಬರುತ್ತಿದೆ.

ಒಟ್ಟಿನಲ್ಲಿ ಕೋಟಿಗಟ್ಟಲೇ ಬೆಲೆ ಬಾಳುವ ಜಾಗವನ್ನು ಮಹಾನಗರ ಪಾಲಿಕೆ ಅಧಿಕಾರಿಗಳು ತೆರವು ಗೋಳಿಸಿರುವುದಕ್ಕೆ ಇವರ ಕಾರ್ಯಕ್ಕೆ ಗೋಪಾಲ ಗೌಡ ಬಡಾವಣೆಯ ನಿವಾಸಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದೇ ರೀತಿಯಲ್ಲಿ ಇನ್ನು ಹಲವು ಪಾಲಿಕೆ ಜಾಗವನ್ನು ಅಕ್ತಮಿಸಿದ್ದು ಅದನ್ನು ಗುರುತಿಸಿ ಕೂಡಲೇ ತೆರವು ಮಾಡಬೆಕೆಂಬುವುದು ಸ್ಥಳೀಯ ರ ಒತ್ತಾಯವಾಗಿದೆ.

ಜಿಲ್ಲಾಧಿಕಾರಿಗಳು ಮತ್ತು ಪಾಲಿಕೆ ಅಧಿಕಾರಿಗಳ ಕಾರ್ಯಕ್ಕೆ ತುರ್ತು ಸ್ಪಂದನೆಗೆ ಧನ್ಯವಾದ ತಿಳಿಸಿದ ಸ್ಥಳೀಯ ನಿವಾಸಿಗಳು;

ಗೋಪಾಲಗೌಡ ಬಡಾವಣೆಯ ಭಾರ್ಗವಿ ಪೆಟ್ರೋಲ್ ಬಂಕ್ ಹಿಂಭಾಗದ ಮಹಾನಗರ ಪಾಲಿಕೆ ಆಸ್ತಿ ಕಬಳಿಕೆ ಬಗ್ಗೆ ನಿನ್ನೆ ದಿನ ಗೋಪಾಲಗೌಡ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದಿಂದ ಮಾನ್ಯ ಜಿಲ್ಲಾಧಿಕಾರಿಗಳಿಗೆ ಹಾಗೂ ಮಾನ್ಯ ಮಹಾನಗರ ಪಾಲಿಕೆಯ ಆಯುಕ್ತರಿಗೆ ಮನವಿ ಸಲ್ಲಿಸಿದ್ದರು.

ತುರ್ತಾಗಿ ಸ್ಪಂದಿಸಿದ ಜಿಲ್ಲಾಡಳಿತ ಇಂದು ಜೆಸಿಬಿ ಮೂಲಕ ಆಕ್ರಮಿಸಿಕೊಂಡ  ಜಾಗವನ್ನು ತೆರವು ಗೊಳಿಸಿರುವುದಕ್ಕೆ,
 ಮನವಿಗೆ ಸ್ಪಂದಿಸಿದ  ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ರಕ್ಷಣಾಧಿಕಾರಿಗಳು ಮತ್ತು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಗೋಪಾಲಗೌಡ ಬಡಾವಣೆ ನಿವಾಸಿಗಳ ಕ್ಷೇಮದ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಧನ್ಯವಾದಗಳನ್ನು ತಿಳಿಸಿದ್ದಾರೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.