ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ *ಸಾರ್ವಜನಿಕರಿಗೊಂದು* ಕಾನೂನು *ಪಾಲಿಕೆಗೊಂದು* ಕಾನೂನು: ಮಾಜಿ ಸದಸ್ಯ ಐಡಿಯಲ್ ಗೋಪಿ ಆಕ್ರೋಶ
ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಸಾರ್ವಜನಿಕರು ನೂತನವಾಗಿ ತಮ್ಮ ಜಾಗದಲ್ಲಿ ಕಟ್ಟಡ ನಿರ್ಮಿಸಲು ಹೋದಾಗ ನಗರ ಯೋಜನೆಯ ಪ್ಲಾನ್ ಪ್ರಕಾರವಾಗಿ ಅನುಮೋದನೆಗೊಂಡಿರುವ ರಸ್ತೆಯ ಜಾಗವನ್ನು ದಾನ ಪತ್ರ ಕೊಟ್ಟು ಪಾಲಿಕೆಗೆ ಹಸ್ತಾಂತರವಾದ ನಂತರ ಲೈಸೆನ್ಸ್ ಅನ್ನು ನೀಡುತ್ತಾರೆ ಆದರೆ ನಗರದ ಹೃದಯ ಭಾಗವಾಗಿರುವ ಜನನಿಬಿಡ ರಸ್ತೆಯಾದ
LLR ರಸ್ತೆಯಲ್ಲಿ ಪಾಲಕೆಯ 6 ಕೋಟಿಗಳ ಅನುದಾನದಿಂದ ನಿರ್ಮಿಸ ಲಾದ ಹೂವ ಹಣ್ಣು ಮಾರುಕಟ್ಟೆಯನ್ನು ಕಾನೂನು ಪ್ರಕಾರವಾದ ರಸ್ತೆಯ ಜಾಗವನ್ನು ಬಿಡದೆ ಅಕ್ರಮವಾಗಿ ಕಾಂಪೌಂಡನ್ನು ನಿರ್ಮಿಸಿರುತ್ತಾರೆ
ರಸ್ತೆಯ ಜಾಗದಲ್ಲಿ ನಿರ್ಮಿಸಿರುವ ಕಾಂಪೌಂಡನ್ನು ತೆರವುಗೊಳಿಸದಿದ್ದರೆ ಮುಂದಿನ ದಿನಗಳಲ್ಲಿ ಪಾಲಿಕೆ ವಿರುದ್ಧ ಉಗ್ರವಾದ ಹೋರಾಟವನ್ನು ಹಮ್ಮಿಕೊಳ್ಳಲಾಗುತ್ತದೆ ಶಿವಮೊಗ್ಗ ಮಹಸನಗರ ಪಾಲಿಕೆಯ ಮಾಜಿ ಕಾರ್ಪೊರೇಟ್ ರ್ ಐಡಿಯಲ್ ಗೋಪಿ* ಹೇಳಿದ್ದಾರೆ
ಇಲ್ಲಿ ಬೇಲಿಯೇ ಎದ್ದು ಹೊಲ ಮೇಯುವ ಹಾಗೆ ಕಾನೂನು ಭಾಹಿರವಾಗಿ ಕಟ್ಟಡ ನಿರ್ಮಾಣ ಮಾಡಿರುವುದು ಹಾಸ್ಯಸ್ಪದವಾಗಿದೆ
ಪಾಲಿಕೆಯಲ್ಲಿ ಹೇಳುವವರು ಇಲ್ಲ ಕೇಳುವವರು ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Leave a Comment