*ಗಾಜನೂರು: ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ತರಬೇತಿ ಪಡೆಯಲು ಅರ್ಜಿ ಆಹ್ವಾನ*
ಶಿವಮೊಗ್ಗ, ಮೇ 30; 2024 ನೇ ಸಾಲಿನಲ್ಲಿ ಗಾಜನೂರು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಖಾಲಿ ಇರುವ ವೃತ್ತಿಗಳಿಗೆ ಎಸ್.ಎಸ್.ಎಲ್.ಸಿ. ವಿದ್ಯಾರ್ಹತೆ ಹೊಂದಿದ ಆಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಎಸ್.ಎಸ್.ಎಲ್,ಸಿ ಉತ್ತೀರ್ಣರಾದವರಿಗೆ ಸಿಓಪಿಎ(ಎನ್‍ಸಿವಿಟಿ), ಎಲೆಕ್ಟ್ರೀಷಿಯನ್, ಎಲೆಕ್ಟ್ರಾನಿಕ್ ಮೆಕ್ಯಾನಿಕ್, ಫಿಟ್ಟರ್, ಇನ್ಸುಟ್ರುಮೆಂಟ್ ಮೆಕ್ಯಾನಿಕ್, ಮೆಕ್ಯಾನಿಕ್ ಎಲೆಕ್ಟ್ರಿಕ್ ವೆಹಿಕಲ್, ಇಂಡಸ್ಟ್ರಿಯಲ್ ರೋಬೊಟಿಕ್ ಆ್ಯಂಡ್ ಡಿಜಿಟಲ್ ಮ್ಯಾನ್ಯುಫ್ಯಾಕ್ಚರಿಂಗ್, ಅಡ್ವಾನ್ಸ್ ಸಿ.ಎನ್.ಸಿ ಮೆಷಿನಿಂಗ್, ಆರ್ಟಿಸನ್ ಯುಸಿಂಗ್ ಅಡ್ವಾನ್ಸಡ್ ಟೂಲ್, ಬೇಸಿಕ್ ಡಿಸೈನರ್ ಅನ್ ವಿರ್ಚುವಲ್ ವೆರಿಫಿಯರ್, ಮ್ಯಾನ್ಯುಫ್ಯಾಕ್ಚರಿಂಗ್ ಪ್ರೋಸೆಸ್ ಕಂಟ್ರೋಲ್ ಅನ್ ಆಟೋಮೇಷನ್ ಹುದ್ದೆಗಳಿಗೆ ತರಬೇತಿ ನೀಡಲಾಗುವುದು.
ಆಸಕ್ತ ಆಭ್ಯರ್ಥಿಗಳು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ- ಶಿವಮೊಗ್ಗ, ಗಾಜನೂರು ಅಂಚೆ ಇಲ್ಲಿಗೆ ಭೇಟಿ ನೀಡಿ ಅರ್ಜಿ ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ಆಯ್ಕೆ ಮಾಡಿಕೊಂಡ ಸರ್ಕಾರಿ ಐಟಿಐ ಗಳಲ್ಲಿ ಮೂಲ ದಾಖಲಾತಿ ಹಾಗೂ ದೃಢೀಕೃತ ದಾಖಲೆಗಳೊಂದಿಗೆ ತೆರಳಿ ಸಲ್ಲಿಸುವಂತೆ ಸಂಸ್ಥೆಯ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಮೊ.ಸಂ.: 9448530349/9449775239 ಗಳನ್ನು ಸಂಪರ್ಕಿಸುವುದು.
----------------------------------
Leave a Comment