ಕೋಮುವಾದಿ ಬಿಜೆಪಿ ಪಕ್ಷವನ್ನು ಸೋಲಿಸಿ,ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ: ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ರಾಜ್ಯದ ಜನತೆಗೆ ಕರೆ

ಶಿವಮೊಗ್ಗ,ಮೇ3: ಕೋಮುವಾದಿ ಬಿಜೆಪಿ ಪಕ್ಷವನ್ನು ಸೋಲಿಸಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಮತ ನೀಡಬೇಕು ಎಂದು ಕರ್ನಾಟಕ ಶೋಷಿತ ಸಮುದಾಯಗಳ ಮಹಾ(ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಮತ್ತು ಜನಪರ ಸಂಘಟನೆಗಳು) ಒಕ್ಕೂಟ ರಾಜ್ಯದ ಜನತೆಗೆ ಕರೆ ನೀಡಿದೆ.
ಕಳ್ಳರ ಸುಳ್ಳರ ಕೈಯಲ್ಲಿ ದೇಶ ಸಿಕ್ಕರೆ ಯಾವ ಯಾವ ಅನಾಹುತಗಳಾಗಿವೆ ಎಂಬುವುದಕ್ಕೆ ಕಳೆದ 10 ವರ್ಷಗಳ ಬಿಜೆಪಿ ಆಳ್ವಿಕೆಯ ನೇರ ನಿರ್ದೇಶನ, ಒಂದು ದೇಶದ ನೈತಿಕ ಶಕ್ತಿ ಮತ್ತು ಆತ್ಮಸಾಕ್ಷಿಯನ್ನು ನಿರ್ಧಯವಾಗಿ ಕೊಂದು ಹೇಗೆ ರಾಜಕೀಯ ಪ್ರಾಬಲ್ಯ ಬೆಳೆಸಬಹುದು ಎಂದು ಹಲವು ವಿಧದಲ್ಲಿ ಅದು ತೋರಿಸಿಕೊಟ್ಟಿದೆ ಎಂದು ಒಕ್ಕೂಟ ರಾಜ್ಯ ಸಂಚಾಲಕ ಅನಂತನಾಯಕ್ ಇಂದು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.
ಕೇಂದ್ರ ಸರ್ಕಾರ ಹುಸಿಯಾದ ಭರವಸೆಗಳು, ದಿಕ್ಕೆಟ್ಟ ಜನಸಾಮಾನ್ಯರ ಬದುಕು, ಜನರಿಗಾದ ಮಹಾದ್ರೋಹ, ವಿಷಪೂರಿತ ವಾತಾವರಣ, ಕರ್ನಾಟಕಕ್ಕೆ ಸತತ ವಂಚನೆ, ಆತಂಕದಲ್ಲಿ ಭವಿಷ್ಯ ಮತ್ತು ಇತರೆ ಅನೇಕ ಕೇಂದ್ರ ಸರ್ಕಾರದ ರೀತಿ ನೀತಿಗಳಿಂದ ದೇಶದಲ್ಲಿ 80 ಭಾಗ ಇರುವ ಶೋಷಿತ ಸಮುದಾಯಗಳನ್ನು ಅತಂತ್ರ ಸ್ಥಿತಿಗೆ ತಳ್ಳಲ್ಪಪಡುತ್ತಿರುವ ಕೋಮು ವೈಷಮ್ಯದ ವಿಷ ಬೆರೆಸುವ ಹುನ್ನಾರಗಳು ವ್ಯವಸ್ಥಿತವಾಗಿ ಸಾಗಿವೆ ಎಂದರು.
ಈ ದೇಶದ ಪ್ರಜಾಪ್ರಭುತ್ವ ಮತ್ತು ಸಾಮರಸ್ಯದ ಬದುಕು ಉಳಿಯಬೇಕಾದರೆ ಬಿಜೆಪಿ ಪಕ್ಷವನ್ನು ಶತಾಯಗತಾಯ ಸೋಲಿಸಬೇಕಾಗಿದೆ. ಎಂಬ ನಿರ್ಣಯವನ್ನು ಒಕ್ಕೂಟ ತೆಗೆದುಕೊಂಡಿದೆ. ಜನವಿರೋಧಿ, ಸಂವಿಧಾನ ವಿರೋಧಿ, ಸುಲಿಗೆಕೋರ, ಸರ್ವಾಧಿಕಾರಿ ಬಿಜೆಪಿ ಸರ್ಕಾರಕ್ಕೆ ಪಾಠ ಕಲಿಸಲು ರಾಜ್ಯದ ಜನತೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಮತ ನೀಡಬೇಕು ಎಂದು ಮನವಿ ಮಾಡಿಕೊಂಡರು.
ಒಕ್ಕೂಟದ ಸದಸ್ಯೆ ಕೆ. ಅನಿತಾಕುಮಾರಿ ಮಾತನಾಡಿ, ಪ್ರಧಾನಿ ಮೋದಿ ಅವರು ಮಹಿಳಾ ಮೀಸಲಾತಿಯನ್ನು ಹೆಚ್ಚಿಸುತ್ತೇವೆ ಎಂದು ವಾಗ್ದಾನ ಮಾಡಿದ್ದರು. ಆದರೆ, ಹೆಚ್ಚಿಸಲೇ ಇಲ್ಲ. ದೇಶದಲ್ಲಿ ಶೇ. 50ಕ್ಕೂ ಅಧಿಕ ಮಹಿಳಾ ಮತದಾರರೇ ಇದ್ದಾರೆ. ಸ್ಥಳೀಯ ಸಂಸ್ಥೆಗಳಲ್ಲಿ ರಾಜ್ಯ ಸರ್ಕಾರದಿಂದ ಮೀಸಲಾತಿ ಇದೆ. ಆದರೆ, ಕೇಂದ್ರದಿAದ ಈ ಮೀಸಲಾತಿ ಇಲ್ಲ. ಮೋದಿ ಅವರಿಗೆ ಈ ಬಗ್ಗೆ ಅರಿವೇ ಇಲ್ಲ ಎಂದರು.
ಪ್ರಜ್ವಲ್ ರೇವಣ್ಣ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ. ಆತ ವಿದೇಶಕ್ಕೆ ಹೋಗಲು ಮೋದಿ ಸರ್ಕಾರ ಸಹಕಾರ ನೀಡಿದೆ. ಪ್ರಧಾನಿಯ ಮೊಮ್ಮಗನೊಬ್ಬ ಇಂತಹ ಬಹುದೊಡ್ಡ ತಪ್ಪು ಮಾಡಿದಾಗ ಪ್ರಧಾನಿ ಮೋದಿ ಅವರು ಮತ್ತು ಬಿಜೆಪಿ ಮುಖಂಡರು ಕನಿಷ್ಠ ಖಂಡನೆ ಕೂಡ ಮಾಡಲಿಲ್ಲ. ರಾಜ್ಯ ರ‍್ಕಾರದಲ್ಲಿ ಮಹಿಳೆಯರಿಗೆ ರಕ್ಷಣೆ ಇದೆ. ಆದರೆ, ಕೇಂದ್ರ ಸರ್ಕಾರದಲ್ಲಿ ಇಲ್ಲ. ಹಾಗಾಗಿ ಮಹಿಳೆಯರ ಧ್ವನಿಯಾಗಿ ಗೀತಾ ಶಿವರಾಜ್ ಕುಮಾರ್ ಅವರನ್ನು ಗೆಲ್ಲಿಸಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟ ಪ್ರಧಾನ ಸಂಚಾಲಕ ಕೆ.ಎಂ.ರಾಮಚAದ್ರಪ್ಪ, ಸುರೇಶ್ ಎಂ ಲಾತೋರ್, ಆದರ್ಶ ಯಲ್ಲಪ್ಪ, ಕಲ್ಲೇಶ್ ನಾಯಕ್, ಕೆ.ರಂಗನಾಥ್, ಪ್ರಸನ್ನ ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.