*ತೀರ್ಥಹಳ್ಳಿಯಲ್ಲಿ ಯಕ್ಷಗಾನ ಕಲಾವಿದರಿಂದ ಮತದಾನ ಜಾಗೃತಿ*
ಶಿವಮೊಗ್ಗ, ಏ.4:ತೀರ್ಥಹಳ್ಳಿ ತಾಲ್ಲೂಕು ಪಂಚಾಯಿತಿ, ಪಟ್ಟಣ ಪಂಚಾಯಿತಿ ಹಾಗೂ ತಾಲ್ಲೂಕು ಸ್ವೀಪ್ ಸಮಿತಿ ವತಿಯಿಂದ ಇಂದು ತೀರ್ಥಹಳ್ಳಿ ಪಟ್ಟಣದಲ್ಲಿ ಯಕ್ಷಗಾನ ಕಲಾವಿದರು ಮತ್ತು ವಾದ್ಯಗೋಷ್ಟಿಯೊಂದಿಗೆ ವಿನೂತನವಾಗಿ ಮತದಾನದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.
ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ ಶೈಲಾ.ಎನ್ ರವರು ಪ್ರಜಾಪ್ರಭುತ್ವ ಹಾಗೂ ಮತದಾನದ ಮಹತ್ವವನ್ನು ಕುರಿತು ಮಾತನಾಡಿ ‘ಚುನಾವಣೆ ಪರ್ವ ದೇಶದ ಗರ್ವ’ ಎಂಬ ಘೋಷವಾಖ್ಯದೋಂದಿಗೆ ಕಾರ್ಯಕ್ರಕ್ಕೆ ಚಾಲನೆ ನೀಡಿದರು.
ಇಂದಿನ ಸ್ವೀಪ್ ಕಾರ್ಯಕ್ರಮದಲ್ಲಿ ಯಕ್ಷಗಾನ ಕಲಾವಿದರು ಹಾಗೂ ವಾದ್ಯ ಗೋಷ್ಟಿಯವರು ವಿಶೇಷವಾಗಿ ಎಲ್ಲರ ಗಮನ ಸೆಳೆದು ಮತದಾನ ಜಾಗೃತಿ ಮೂಡಿಸಿದರು. ಹಾಗೂ ಪೆÇೀಲೀಸ್ , ಅಗ್ನಿ ಶಾಮಕ, ಮೆಸ್ಕಾಂ, ಅರಣ್ಯ, ಇಲಾಖೆಯ ಸಿಬ್ಬಂದಿಯವರು ಭಾಗವಹಿಸಿ ಮತದಾನದ ಮಹತ್ವ ಕುರಿತು ತಿಳಿಸಿದರು.
ತೀರ್ಥಹಳ್ಳಿ ಪಟ್ಟಣದ ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಯ ಸಿಬ್ಬಂದಿಯವರು, ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ಬಸವರಾಜ್, ಗ್ರಾಮ ಪಂಚಾಯಿತಿಯ ಅಭಿವೃದ್ದಿ ಅಧಿಕಾರಿಯವರು ಹಾಗೂ ಸಿಬ್ಬಂದಿಯವರು ಉಪಸ್ಥಿತರಿದ್ದರು.
ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು, ಸ್ಕೌಟ್ ಆಂಡ್ ಗೈಡ್ಸ್, ಸಮಾಜಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಇಲಾಖೆಯ ವಸತಿ ನಿಲಯದ ವಿದ್ಯಾರ್ಥಿಗಳು(ಯುವ ಮತದಾರರು) ಕಾರ್ಯಕ್ರದ ಕೇದ್ರ ಬಿಂದುಗಳಾದರು. ಕರ್ನಾಟಕದ ಸಾಂಪ್ರದಾಯಿಕ ಕಲಾ ಪ್ರಕಾರಗಳಲ್ಲಿ ಅತ್ಯಂತ ಪ್ರಮುಖವಾದದ್ದು ಯಕ್ಷಗಾನ. ಯಕ್ಷಗಾನ ಕಲಾವಿದರು ತಮ್ಮದೇ ಆದ ಶೈಲಿಯಲ್ಲಿ ಮೇ 7ನೇ ತಾರೀಕಿನಂದು ತಪ್ಪದೇ ಮತದಾನ ಮಾಡಲು ಮತದಾರರಿಗೆ ಕರೆ ನೀಡಿದರು.
ಸ್ವೀಪ್ ಮೆರವಣಿಗೆಯು ವಾದ್ಯ ಗೋಷ್ಟಿಯೊಂದಿಗೆ ಪ್ರಾರಂಭವಾಗಿ ಯಕ್ಷಗಾನ ಕಲಾವಿದರು ಹಾಗೂ ಬೈಕ್ ರ್ಯಾಲಿ ಸವಾರರು ಪಟ್ಟಣದ ಪ್ರಮುಖ ಸ್ಥಳಗಳಾದ ಕೊಪ್ಪ ವೃತ್ತ, ಗಾಂಧಿ ಚೌಕ, ಆಗುಂಬೆ ವೃತ್ತದ ಮೂಲಕ ಸಂಚರಿಸಿ ಗ್ರಾಮೀಣಾಭಿವೃದ್ದಿ ಭವನವನವನ್ನು ತಲುಪಿ ಭಾರತದ ನಕ್ಷೆಯ ಮೇಲೆ ಮೇಣದ ಬತ್ತಿಯನ್ನು ಬೆಳಗಿಸಿ ಮತದಾರ ಪ್ರತಿಜ್ಞಾವಿಧಿಯನ್ನು ಬೋಧಿಸಿ ಕಡ್ಡಾಯವಾಗಿ ಮತದಾನ ಮಾಡಿ ಎಂಬ ಸಂದೇಶವನ್ನು ನೀಡಿ ಮತದಾನದ ಜಾಗೃತಿ ಗೀತೆಯಾದ ‘ನಾ ಭಾರತ ‘ ಗೀತೆಯನ್ನು ನುಡಿಸಿದರು.

Leave a Comment