"ನಾರಿ ಶಕ್ತಿ ಬಲವರ್ಧನೆ-ಮೋದಿ ಸರ್ಕಾರದ ಗ್ಯಾರಂಟಿ":ಬಿವೈಆರ್
ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಶಿಕಾರಿಪುರ ಮಂಡಲ ವತಿಯಿಂದ ಶಿರಾಳಕೊಪ್ಪ ಪಟ್ಟಣದ ಶಿವಶಕ್ತಿ ಕಲ್ಯಾಣ ಮಂದಿರದಲ್ಲಿ ಇಂದು ಹಮ್ಮಿಕೊಂಡಿದ್ದ ಹುಣಸೆಕಟ್ಟೆ ಹಾಗೂ ತೊಗರ್ಸಿ ಮಹಾ ಶಕ್ತಿಕೇಂದ್ರ ವ್ಯಾಪ್ತಿಯ "ಮಹಿಳಾ ಸಮಾವೇಶ" ದಲ್ಲಿ ಭಾಗಿಯಾಗಿ, ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ನೆರೆದಿದ್ದ ಸಹೋದರಿಯರನ್ನು ಹಾಗೂ ತಾಯಂದಿರನ್ನು ಉದ್ದೇಶಿಸಿ ಮಾತನಾಡಲಾಯಿತು. 2047ಕ್ಕೆ ದೇಶ ಸ್ವಾತಂತ್ರ್ಯಗೊಂಡು ಶತಮಾನೋತ್ಸಕ್ಕೆ ಪದಾರ್ಪಣೆ ಮಾಡುತ್ತಿದೆ. ಮೋದಿ ಅವರ ಕನಸು ದೇಶವನ್ನು "ವಿಕಸಿತ ಭಾರತ" ನಿರ್ಮಾಣ ಮಾಡುವುದಾಗಿದೆ. ತಮ್ಮ ಮೂರನೇ ಅವಧಿಯಲ್ಲಿ ವಿಶ್ವದ ಮೂರನೇ ಬಲಿಷ್ಠ ಆರ್ಥಿಕ ದೇಶವಾಗಿ ಮಾಡುವುದಾಗಿದೆ. ಈ ಕಾಲಘಟ್ಟಕ್ಕೆ ದಾಪುಗಾಲು ಇಡಲು ಮಹಿಳೆಯರ ಪರಿಶ್ರಮ ಮತ್ತು ಮಹಿಳೆಯರ ಕೊಡುಗೆ ಅತ್ಯಗತ್ಯವಾಗಿದೆ. ಮಹಿಳಾ ಸಬಲೀಕರಣಕ್ಕೆ ದೀರ್ಘಕಾಲ ಉಪಯುಕ್ತವಾಗುವಂತ ಯೋಜನೆ ರೂಪಿಸಿದಾಗ ನೈಜ ಸಬಲೀಕರಣ ಸಾಧ್ಯ. ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಅಧಿಕಾರದ ಗದ್ದುಗೆ ಏರಿದ ದಿನದಿಂದ ಈ ದಿಶೆಯಲ್ಲಿ ಆಲೋಚಿಸಿ ಉಜ್ವಲ ಸೇರಿದಂತೆ ನೂರಾರು ಐತಿಹಾಸಿಕ ಯೋಜನೆಗಳನ್ನು ಜಾರಿಗೆ ತಂದು ಅರ್ಹ ಫಲಾನುಭವಿಗಳಿಗೆ ತಲುಪಿಸಿ ಮಹಿಳೆಯರ ಆರ್ಥಿಕ ಪ್ರಗತಿಗೆ ಮತ್ತು ಸಾಮಾಜಿಕ ಕ್ರಾಂತಿಗೆ ಮುನ್ನುಡಿ ಬರೆಯುತ್ತಿದೆ.
ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿಗಳು ಕೇವಲ ತಾತ್ಕಾಲಿಕ ಯೋಜನೆಗಳಾಗಿದೆ. ಈ ಯೋಜನೆಗಳು ದೀರ್ಘಕಾಲ ಇರಲು ಸಾಧ್ಯವಿಲ್ಲ. ಹಾಗಾಗಿ ಇದರ ಸಾಧಕ ಬಾಧಕಗಳ ಬಗ್ಗೆ ಪ್ರತಿ ಬೂತ್ ಮಟ್ಟದಲ್ಲಿ ಮಹಿಳಾ ಮತದಾರರಿಗೆ ಮುಟ್ಟಿಸಿ ಪಕ್ಷದತ್ತ ಸೆಳೆಯುವ ಪ್ರಾಮಾಣಿಕ ಪ್ರಯತ್ನ ನಡೆಸಬೇಕು ಈ ಮೂಲಕ ಬಿಜೆಪಿಯ ಅಭೂತಪೂರ್ವ ಗೆಲುವಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ಶಾಸಕರಾದ ಶ್ರೀ ರುದ್ರೇಗೌಡ ಅವರು, ಶ್ರೀಮತಿ ಭಾರತಿ ಶೆಟ್ಟಿ ಅವರು, ಪ್ರಮುಖರಾದ ಶ್ರೀಮತಿ ಗಾಯತ್ರಿ ಮಲ್ಲಪ್ಪ ಅವರು, ಶ್ರೀ ಹನುಮಂತಪ್ಪ ಅವರು, ಶ್ರೀ ಬಳಿಗಾರ್ ಅವರು, ಶ್ರೀ ರೇವಣಪ್ಪ ಅವರು ಸೇರಿದಂತೆ ಇನ್ನೂ ಅನೇಕ ಮುಖಂಡರು ಉಪಸ್ಥಿತರಿದ್ದರು.

Leave a Comment