*ಬೈಕ್ ರ್ಯಾಲಿ ಮೂಲಕ ಮತದಾನ ಜಾಗೃತಿ: ಜಿ.ಪಂ ಸಿಇಓ ರಿಂದ ಚಾಲನೆ*
ಶಿವಮೊಗ್ಗ, ಏ.೨:ಜಿಲ್ಲಾಡಳಿತ, ಜಿ.ಪಂ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಇಂದು ಜಿಲ್ಲಾಡಳಿತ ಕಚೇರಿ ಆವರಣದಿಂದ ಅಲ್ಲಮಪ್ರಭು ಮೈದಾನದ ವರೆಗೆ ಮತದಾನ ಜಾಗೃತಿ ಮೂಡಿಸುವ ಬೈಕ್ ರ್ಯಾಲಿ ನಡೆಯಿತು.ಜಿ.ಪಂ.ಸಿಇಒ ಬೈಕ್ ರ್ಯಾಲಿಗೆ ಚಾಲನೆ ನೀಡಿ, ತಾವೂ ಬೈಕ್ ಚಲಾಯುಸಿಕೊಂಡು ಅಲ್ಲಮಪ್ರಭು ಮೈದಾನ ತಲುಪಿದರು.
ರ್ಯಾಲಿಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು ಪಾಲ್ಗೊಂಡು, ಮತದಾನದ ಜಾಗೃತಿ ಕುರಿತು ಘೋಷಣೆಗಳುಳ್ಳ ಪ್ಲೆಕಾರ್ಡ್ ಗಳನ್ನು ಹಿಡುದು ಘೋಷಣೆ ಕೂಗುತ್ತಾ ಸಾಗಿದರು.
ಈ ವೇಳೆ ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ, ಜಿ.ಪಂ ಯೋಜನಾ ನಿರ್ದೇಶಕ ರಂಗಸ್ವಾಮಿ, ಮುಖ್ಯ ಯೋಜನಾಧಿಕಾರಿ ಗಾಯತ್ರಿ, ಸ್ವೀಪ್ ನೋಡಲ್ ಆಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳು ಹಾಜರಿದ್ದರು.

Leave a Comment