ಏ.6 ರಂದು ಹಿರಿಯ ವಕೀಲ ಜಿ.ಎಸ್.ನಾಗರಾಜ್ ಅವರಿಗೆ ವಿಶೇಷ ಅಭಿನಂದನಾ ಸಮಾರಂಭ: ನಾಗೇಶನ್

ಶಿವಮೊಗ್ಗ: ಜಿಲ್ಲಾ ವಕೀಲರ ಸಂಘ ಹಾಗೂ ಜೆ.ಎಸ್.ನಾಗರಾಜ ಅವರ ಕಿರಿಯ ವಕೀಲರ ಬಳಗದಿಂದ ಏ.06 ರ ಸಂಜೆ 6 ಗಂಟೆಗೆ ಶನಿವಾರ ರಾಷ್ಟ್ರೀಯ ಶಿಕ್ಷಣ ಸಮಿತಿಯ ರಾಷ್ಟ್ರೀಯ ಪ್ರೌಢಶಾಲೆಯ ಆವರಣದಲ್ಲಿ ಜಿ.ಎಸ್.ನಾಗರಾಜ್ ವಕೀಲ ವೃತ್ತಿ ಬದುಕಿನ 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ವೃತ್ತಿ ಜೀವನ ಬದುಕಿನ ಸಾರ್ಥಕತೆ 50 ವರ್ಷದ ವಿಶೇಷ ಅಭಿನಂದನಾ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಜಿ.ಎಸ್.ಎನ್‌ ವಕೀಲರ ಬಳಗದಿಂದ ಅಭಿನಂದನಾ ಸಮಿತಿ ಮುಖಂಡರು ಮತ್ತು ವಕೀಲರಾದ ನಾಗೇಶನ್ ಹೇಳಿದರು.

ಇಂದು ಬೆಳಿಗ್ಗೆ ಶಿವಮೊಗ್ಗದಲ್ಲಿ ಮಥುರಾ ಪ್ಯಾರಡೈಸ್ ಸಭಾಂಗಣದಲ್ಲಿ ಸುದ್ದಿ ಗೋಷ್ಟಿ ನಡೆಸಿ ಮಾತನಾಡಿದರು.

ಕಾರ್ಯಕ್ರಮವನ್ನು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳಾದ ವಿ.ಗೋಪಾಲಗೌಡ ಉದ್ಘಾಟಿಸಲಿದ್ದು,
ಸಚಿವರಾದ ಪ್ರೊ.ಬಿ.ಕೆ.ಚಂದ್ರಶೇಖರ್ ಹಾಗೂ ಶಿವಮೊಗ್ಗ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಂಜುನಾಥನಾಯಕ್ ಅಭಿನಂದನಾ ಮತುಗಳನ್ನಾಡಲಿದ್ದಾರೆ. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಬಿ.ಜೆ.ಶಿವಮೂರ್ತಿ ಅಧ್ಯಕ್ಷತೆ
ವಹಿಸಲಿದ್ದಾರೆ. ಹಿರಿಯ ವಕೀಲರಾದ ಎನ್‌.ದೇವೇಂದ್ರಪ್ಪ, ಕೆ.ಬಸಪ್ಪಗೌಡ, ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ
ಜಿ.ಎಸ್.ನಾರಾಯಣರಾವ್‌ ಉಪಸ್ಥಿತರಿರತ್ತಾರೆ ಎಂದರು.

31-05-1968 ರಂದು ವಕೀಲರಾಗಿ ನೊಂದಾಯಿಸಿಕೊಂಡ ಜಿ.ಎಸ್‌.ನಾಗರಾಜ ಅವರು, ಪ್ರಖ್ಯಾತ ವಕೀಲರಾಗಿದ್ದ
ಮಹಿಷಿ ನರಸಿಂಹಮೂರ್ತಿ ಅವರ ಕಛೇರಿಯಲ್ಲಿ ಕಿರಿಯ ನ್ಯಾಯವಾದಿಗಳಾಗಿ ವೃತ್ತಿ ಪ್ರಾರಂಭಿಸಿದರು. ಸಿವಿಲ್
ಕ್ರಿಮಿನಲ್ : ಕಾರ್ಮಿಕ ವಿಭಾಗದಲ್ಲಿ ವಿಶೇಷ ಪರಿಣಿತಿ ಪಡೆದು, ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ ಮತ್ತು
ಚಿಕ್ಕಮಗಳೂರಿನಲ್ಲಿ ಪ್ರಮುಖ ಕೇಸ್‌ಗಳನ್ನು ನಿರ್ವಹಿಸುವ ಮೂಲಕ ನೊಂದ ಜೀವಗಳಿಗೆ ನ್ಯಾಯ ಒದಗಿಸಿದ್ದಾರೆಎಂದರು.

ಭದ್ರಾವತಿಯ ನಾಗಸಮುದ್ರದ ಗೋಲಿಬಾರ್‌ನಲ್ಲಿ ರೈತರ ಹತ್ಯೆ ಕೇಸ್‌ ಕುರಿತ ಸರ್ಕಾರದ ತನಿಖಾ ಆಯೋಗದ ಮುಂದೆರೈತ ಸಂಘದ ಪರವಾಗಿ, ಹೊನ್ನಾಳಿಯ ಚುನಾವಣೆ ಸಂದರ್ಭದಲ್ಲಿ ಗೋಲಿಬಾರ್ ನಡೆದಾಗ ಸರ್ಕಾರದ ತನಿಖಾಆಯೋಗದ ಮುಂದೆ ಪೊಲೀಸರ ಪರವಾಗಿ ಹಾಗೂ ಚಂದ್ರಗುತ್ತಿಯಲ್ಲಿ ನಡೆಯುತ್ತಿದ್ದ ಬೆತ್ತಲೆ ಸೇವೆ ತಡೆಯಲು ಹೊರ
ಪೊಲೀಸರ ಮೇಲೆ ನಡೆದ ಹಲ್ಲೆ ಪ್ರಕರಣದ ಕುರಿತ ಸರ್ಕಾರದ ತನಿಖಾ ಆಯೋಗದ ಮುಂದೆ ಪೋಲಿಸರ ಪರವಾಗಿವಾದ ಮಂಡಿಸಿದ್ದಾರೆ ಎಂದರು.

ವಿದ್ಯಾರ್ಥಿ ದೆಸೆಯಿಂದಲೇ ಸೂರಂಟ್ ನಷನ್ ಆಫ್ ಇಂಡಿಯಾ ಸಂಘಟಿಸಿ ವಿದ್ಯಾರ್ಥಿಗಳ
ಹೋರಾಟದಲ್ಲಿ ಭಾಗವಹಿಸಿ, ಕಮ್ಯುನಿಸ್ಟ್ ಪಕ್ಷದ ಸದಸ್ಯತ್ವ ಪಡೆದು ಕಾರ್ಮಿಕ ಮತ್ತು ರೈತ ಸಂಘಟನೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ ಎಂದರು.

ತೀರ್ಥಹಳ್ಳಿ ತಾಲ್ಲೂಕಿನ ರೈತ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಗೇಣಿದಾರರಿಗೆ ಭೂಹಕ್ಕಿನ ಪತ್ರಕೊಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದರು.

ಶಿವಮೊಗ್ಗ ಜಿಲ್ಲೆಯ ನ್ಯಾಯವಾದಿ ಸಂಘದ ಕಾರ್ಯದರ್ಶಿಯಾಗಿ, ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷರಾಗಿ, ಅಂದಿನಸಂಯುಕ್ತ ರಂಗದ ಸಕ್ರಿಯ ಕಾರ್ಯಕರ್ತರಾಗಿ, ಶಿವಮೊಗ್ಗ ಬಸವನಗುಡಿ-ಜಯನಗರ ವಾರ್ಡ್‌ ನಗರಸಭಾ ಸದಸ್ಯರಾಗಿ,ಶಿವಮೊಗ್ಗ ಕರ್ನಾಟಕ ಸಂಘದ ಸದಸ್ಯರಾಗಿ, ಶಿವಮೊಗ್ಗ ಹಾಗೂ ಬೆಂಗಳೂರು ಹೋಟೆಲ್ ಕಾರ್ಮಿಕ ವಿಭಾಗದ
ಕಾರ್ಯದರ್ಶಿಯಾಗಿ, ಶಿವಮೊಗ್ಗ ಮೋಟಾರ್ ವರ್ಕರ್ ಕಾರ್ಮಿಕರ ವಿಭಾಗದ ಕಾರ್ಯದರ್ಶಿಯಾಗಿ, ಕೆಎಸ್‌ಆರ್‌ಟಿಸಿಶಿವಮೊಗ್ಗ ಘಟಕದ ವರ್ಕ‌ ಯೂನಿಯನ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ ಎಂದರು.

ಶಿವಮೊಗ್ಗದ ಪ್ರತಿಷ್ಟಿತ ರಾಷ್ಟ್ರೀಯ ಶಿಕ್ಷಣ ಸಮಿತಿ ನಿರ್ದೇಶಕರಾಗಿ, ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುವ ಮೂಲಕ ಶಿಕ್ಷಣಕ್ಷೇತ್ರದಲ್ಲಿಯು ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಭಾರತ-ಚೀನಾ ಮೈತ್ರಿ ಸಂಘದ ರಾಜ್ಯಾಧ್ಯಕ್ಷರಾಗಿ, ನಂತರ
ಭಾರತೀಯ ಅಧ್ಯಕ್ಷರಾಗಿ ಅಂತರಾಷ್ಟ್ರೀಯ ಮಟ್ಟಕ್ಕೆ ತಮ್ಮ ಸೇವೆಯನ್ನು ವಿಸ್ತರಿಸಿ ಕೊಂಡಿದ್ದಾರೆ. ಮಲೇಶಿಯಾ ದೇಶದಲ್ಲಿ
ನಡೆದ ಅಂತರಾಷ್ಟ್ರೀಯ ಕಾನೂನು ಪ್ರಾಧ್ಯಾಪಕರು ಮತ್ತು ನ್ಯಾಯವಾದಿಗಳ ಸಮ್ಮೇಳನದಲ್ಲಿ ಭಾರತದ ಪ್ರತಿನಿಧಿಯಾಗಿ ಭಾಗವಹಿಸಿದ್ದಾರೆ ಎಂದರು.

ಸುದ್ದಿ ಗೋಷ್ಟಿ ಯಲ್ಲಿ ಎನ್ ದೇವೇಂದ್ರಪ್ಪ, ಬಿ.ಜಿ.ಶಿವಮೂರ್ತಿ, ಅನಂತದತ್ತ,ಅಣ್ಣಪ್ಪ,ವಿದ್ಯಾರಾಣಿ ಮೊದಲಾದವರು ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.