ಶಿವಮೊಗ್ಗದಲ್ಲಿ ಸಚಿವರ ಸಂಸ್ಕೃತಿಯ ಬಗ್ಗೆ ಮಾತನಾಡ್ತೀರಾ...ಸಂಸದರು ನನ್ನ ಪ್ರಶ್ನೆಗಳಿಗೆ ಉತ್ತರಿಸಲು ಬಹಿರಂಗ ಚರ್ಚೆಗೆ ಬನ್ನಿ: ಆಯನೂರು ಮಂಜುನಾಥ್ ಒತ್ತಾಯ

ಶಿವಮೊಗ್ಗ: ಶಿವಮೊಗ್ಗದಲ್ಲಿ ಸಚಿವರ  ಸಂಸ್ಕೃತಿಯ ಬಗ್ಗೆ ಶಿವಮೊಗ್ಗ ಸಂಸದರು ಪ್ರಶ್ನೆ ಮಾಡಿದ್ದಾರೆ... ನಿಮ್ಮ ತಂದೆಯವರ ಬಗ್ಗೆ ಕೆ.ಎಸ್.ಈಶ್ವರಪ್ಪ ಅಶ್ಲೀಲವಾಗಿ ಮಾತನಾಡಿದಾಗ ಪುತ್ರರಾದ ನೀವು ಪ್ರಶ್ನೆ ಮಾಡಿಲ್ಲ...ನಿಮ್ಮ ತಂದೆಯವರು ಕಣ್ಣೀರು ಹಾಕಿಕೊಂಡು ರಾಜಕೀಯ ತ್ಯಾಗ ಮಾಡಿದಾಗ ಪ್ರಶ್ನಿಸಲಿಲ್ಲ ಯಾಕೆ?ನನ್ನ ಪ್ರಶ್ನೆಗಳಿಗೆ ಉತ್ತರಿಸಲು ಬಹಿರಂಗ ಚರ್ಚೆಗೆ ಬನ್ನಿ ಎಂದು ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ರವರಿಗೆ  ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್  ಆಹ್ವಾನ ನೀಡಿದರು.

ಇಂದು ಬೆಳಿಗ್ಗೆ  ಉಸ್ತುವಾರಿ ಸಚಿವರ ಗೃಹ ಕಛೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.

 ನಿನ್ನೆ ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಪತ್ರಿಕಾಗೋಷ್ಠಿ ನಡೆಸಿ ಸಚಿವ ಮಧು ಬಂಗಾರಪ್ಪ ರವರು ಬಳಸುವ ಪದಗಳ ಬಗ್ಗೆ ವಾಗ್ದಾಳಿ ನಡೆಸಿದ್ದರು .ಅದಕ್ಕೆ ಕೌಂಟರ್ ಎಂಬಂತೆ ಆಯನೂರು ಮಂಜುನಾಥ್ ಮಾತನಾಡಿದರು. ಯಡಿಯೂರಪ್ಪ ಜೈಲಿಗೆ ಹೋಗಲು ಕಾರಣ ಯಾರು? ಈಗಲಾದರೂ ಸತ್ಯ ಹೇಳಿ ಸಂಸ್ಕ್ರತಿ ಹೀನ ಸಂತಾನ ಇದ್ದರೆ ತಂದೆಗೆ ಇದೇ ಸ್ಥಿತಿ ಬರುತ್ತದೆ ಎಂದು ಸಂಸದರ ಬಗ್ಗೆ ಹರಿಹಾಯ್ದರು.

ಚೇಲಾ ಎನ್ನುವುದು ಹಿಂದಿ ಪದ ಎಂದ ವಕ್ತಾರ ಆಯನೂರು ಮಂಜುನಾಥ್ ಇದರಲ್ಲಿ ಅಸಂಸ್ಕೃತವಾದುದು ಏನಿದೆ.ರಾಮನ ಹೆಸರು ಬಳಸುತ್ತೀರಿ...ತಂದೆಯ ಮಾತಿಗೆ ರಾಮ ಕಾಡಿಗೆ ಹೋದ… ನೀವು ತಂದೆಯನ್ನೆ ಜೈಲಿಗೆ ಕಳಿಸಿದವರು ಎಂದರು.

ವಿಐಎಸ್ ಎಲ್ ಚುನಾವಣೆ ಮುಗಿಯವರೆಗೂ ಮುಚ್ಚಬೇಡಿ ಎಂದು ನಿಮ್ಮ ಕೇಂದ್ರ ನಾಯಕರ ಬಳಿ ಹೇಳಿ ಬಂದಿರುವುದು ನಮಗೆ ಗೊತ್ತಿದೆ ಎಂದು ಸಂಸದ ಬಿ.ವೈ ರಾಘವೇಂದ್ರ ವಿರುದ್ದ ಹರಿ ಹಾಯ್ದಿದ್ದಾರೆ. ಶರಾವತಿ ಮುಳುಗಡೆ ಸಂತ್ರಸ್ಥರ ಸಮಸ್ಯೆ ಯಾಕೆ ಬಗೆಹರಿಸಲಿಲ್ಲ ಎಂದರು‌

ರೈತರಿಗೆ ಪಂಪ್ ಸೆಟ್ ಗೆ  ಉಚಿತ ವಿದ್ಯುತ್ ಕೊಟ್ಟವರು ಬಂಗಾರಪ್ಪರವರು ಆದರೆ ನೀವು ನಿಮ್ಮ ತಂದೆ ಕಾರಣ ಎಂದು ಹಸಿ ಸುಳ್ಳು ಹೇಳಿದ್ದೀರಿ.ನೀವು ಇವತ್ತು ರಾಮ ಮಂದಿರ ಬಗ್ಗೆ ಮಾತನಾಡುತ್ತೀರಿ ಬಂಗಾರಪ್ಪ ರವರು ಆರಾಧನಾ ಯೋಜನೆಯಲ್ಲಿ ಹಳ್ಳಿ ಹಳ್ಳಿಗಳಲ್ಲೂ ರಾಮ ಮಂದಿರ ಕಟ್ಟಿದ್ದರು ಎಂದರು‌

ನಿಮ್ಮ ಕರ ಪತ್ರದಲ್ಲಿ ಇರುವುದು ನೀವು ಮಾಡಿರುವ ಕಾರ್ಯ ಯಾವುದೂ ಇಲ್ಲ.ರಾಜ್ಯ ಸರ್ಕಾರ ಮಾಡಿರುವ ಕೆಲಸವನ್ನೂ ನಿಮ್ಮ ಶ್ವೇತ ಪತ್ರದಲ್ಲಿ ಹೇಳಿಕೊಂಡಿದ್ದೀರಿ ವಿಮಾನ ನಿಲ್ದಾಣದ ದುಡ್ಡು ಖರ್ ರಾ ಮಾಡಿರುವುದು ರಾಜ್ಯ ಸರ್ಕಾ.ನೀವು ಕೇಂದ್ರ ಸರ್ಕಾರದಿಂದ ಎರಡು ಲೈಸೆನ್ಸ್ ಕೊಡಿಸಿದ್ದಿರಾ ಅಷ್ಟೇ ಎಂದು ವ್ಯಂಗ್ಯ ವಾಡಿದರು.

ಹೈವೇ ಗಳಿಗೆ ಕಾಗೋಡು ತಿಮ್ಮಪ್ಪರವರು ಮೇಲ್ದರ್ಜೆಗೆ ಏರಿಸಲು ಪ್ರಪೋಸಲ್ ಕಳಿಸಿದ್ದರು ಅವರು ಪ್ರಪೋಸಲ್ ಕಳಿಸದೇ ಹೋಗಿದ್ದರೆ ಹೈವೇ ಅಪ್ ಗ್ರೇಡ್ ಆಗುತ್ತಿರಲಿಲ್ಲ.
ನಿಮ್ಮ ಆಸ್ತಿ ಬರುವ ಜಾಗದಲ್ಲಿ ಹೈವೇ ಅಭಿವೃದ್ಧಿ ಮಾಡಿಕೊಂಡಿದ್ದೀರಾ...ಹೈವೇಅಭಿವೃದ್ಧಿ ಜೊತೆಗೆ ನೀವು ಅಭಿವೃದ್ಧಿ ಹೊಂದಿದ್ದೀರ
ನೀವು ಜನರಿಗೆ ಕೊಟ್ಟಿರುವುದು ಶ್ವೇತ ಪತ್ರವಲ್ಲ ಹಳದಿ ಪೇಪರ್.ತಂದೆಗೆ ತೊಂದರೆ ಕೊಟ್ಟಾಗ ಸುಮ್ಮನಿದ್ದ ನೀವು ನಿಮ್ಮದು ಕುಲಘಾತಕ ಸಂಸ್ಕ್ರತಿ ಎಂದು ಆಕ್ರೋಶ ಮಾತನಾಡಿದರು.

ತಂದೆಯ ಆಸ್ತಿಯ ವಾರಸುದಾರರಾದ ನೀವು ನಾನು ದುಖಃ ಪಟ್ಟಷ್ಟು ಪಡಲಿಲ್ಲ ಕಾಂಗ್ರೆಸ್ ಸಂಸ್ಕೃತಿ ಬಗ್ಗೆ ಮಾತನಾಡುವಾಗ ಹುಷಾರಾಗಿ ಮಾತನಾಡಿ.
ಬಂಗಾರಪ್ಪ ಮಾಡಿರುವ ಕೆಲಸ ನಿಮ್ಮದು ಎಂದು ಹೇಳಿಕೊಳ್ಳಬೇಡಿ ಎಂದರು.

 ಹೈವೇ ಪುರದಾಳ್ ಹತ್ತಿರ ಯಾರ ಜಮೀನು ಇದೆ. ಒಬ್ಬರು ನಾಯಕರದು 300 ಎಕರೇ ಜಮೀನು ಇದೆ ಅಂತಾರೆ..... ಪ್ರಧಾನಿ ಮಂತ್ರಿ ಬಗ್ಗೆ ಎಲ್ಲರಿಗೂ ಗೌರವ ಇದೆ. ಮುನಿಸಿಪಾಲಿಟಿ ಚುನಾವಣೆ ಯಿಂದ  ಪ್ರತಿ ಚುನಾವಣೆಗೂ ಪ್ರಧಾನಿ ಮಂತ್ರಿ ಹೆಸರು ಹೇಳುತ್ತಾರೆ.

ತಾವು ಬಂಗಾರಪ್ಪರವರ ಕೆಲಸವನ್ನು ತಾವು ಮಾಡಿದ್ದು ಅಂತಾ ಹೇಳಬೇಡಿ... ಬನ್ನ  ಬಹಿರಂಗ ಚರ್ಚೆಗೆ ಸಿದ್ದ....ತಯಾರು ಇದ್ದೇವೆ.. ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಮುಖರಾದ ಆರ್. ಪ್ರಸನ್ನಕುಮಾರ್, ಎಸ್.ಕೆ. ಮರಿಯಪ್ಪ, ಕಲಗೋಡು ರತ್ನಾಕರ್ ಜಿ.ಡಿ. ಮಂಜುನಾಥ್, ಕಲೀಂ ಪಾಶ, ಇಕ್ಕೇರಿ ರಮೇಶ್, ಶಾಂತವೀರ ನಾಯ್ಕ್, ಜಿ. ಪದ್ಮನಾಭ್, ಶಿ.ಜು. ಪಾಶ, ಶಿವಾನಂದ್, ಹಿರಣ್ಣಯ್ಯ ಮುಂತಾದವರಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.