ಮಾರ್ಚ್ 31 ರಂದು ಸೈನ್ಸ್‌ ಮೈದಾನದಲ್ಲಿ ಪೇಜ್ ಪ್ರಮುಖರ ಸಮಾವೇಶ: ಶಿವಮೊಗ್ಗ ಶಾಸಕ ಚನ್ನಬಸಪ್ಪ

 ಶಿವಮೊಗ್ಗ: ಶಿವಮೊಗ್ಗದಲ್ಲಿ ಮಾರ್ಚ್ 31 ರಂದು ಸೈನ್ಸ್‌ ಮೈದಾನದಲ್ಲಿ ಸಂಜೆ 5 ಗಂಟೆಗೆ ಬಿಜೆಪಿಯ ಪೇಜ್ ಪ್ರಮುಖರ ಸಮಾವೇಶ  ನಡೆಯಲಿದೆ.ಸುಮಾರು 7 ಸಾವಿರಕ್ಕೂ ಹೆಚ್ಚು ಫೇಜ್ ಪ್ರಮುಖರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ಶಿವಮೊಗ್ಗ ಶಾಸಕ ಚನ್ನಬಸಪ್ಪ ಹೇಳಿದರು.

ಇಂದು ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಶಿವಮೊಗ್ಗ ಜಿಲ್ಲೆ ಹಿಂದುತ್ವದ ಜಿಲ್ಲೆ ಯಾಗಿದೆ. ಚುನಾವಣೆ ಬಂದಾಗ ಮಾತ್ರ ನಾವು ಹಿಂದುತ್ವ ಬಳಸುವುದಿಲ್ಲ. ಜನರ ಜೋತೆ ನಿರಂತರವಾಗಿ ಪಕ್ಷ ಕೆಲಸ ಮಾಡುತ್ತಿದೆ. ನಮ್ನ ಸೈನಿಕರ ಪಡೆ ತಯಾರಾಗಿದೆ. ಪ್ರತಿ ಬೂತ್ನಲ್ಲಿ 13 ಜನರ ತಂಡ ಇದೆ. 5 ಜನ ಪ್ರಮುಖರು ಇರುತ್ತಾರೆ. ವಿಶೇಷ ಸಭೆಗಳನ್ನು ಮಾಡಿದ್ದೆವೆ. 8 ಮೋರ್ಚಾಗಳನ್ನು ನಾವು ಬಲ ಪಡಿಸಿದ್ದೆವೆ ಎಂದರು.

ವಿವಿಧ ಸಮಾಜಗಳ ಮುಖಂಡರ ಸಭೆ ಸಹ ಮಾಡಲಾಗಿದೆ. ನಾವು ಚುನಾವಣೆಗೆ ನಾವು ತಯಾರಿ ಆಗಿದ್ದೆವೆ. ಶಿವಮೊಗ್ಗದಲ್ಲಿ ಈ ಬಾರಿ ನಾವು 1 ವರೆ ಲಕ್ಷ  ಓಟು ಪಡೆಯುತ್ತೆವೆ. 12 ಸಾವಿರಕ್ಕೂ ಹೆಚ್ಚು ಕಾರ್ಯಕರ್ತ ರ ತಂಡ ತಯಾರಾಗಿದೆ.ಮನೆಯ ಮತದಾರರ ಫೇಜ್ ಸಹ ಕೊಡಲಾಗಿದೆ. ಒಂದು ಫೇಜ್ ನಲ್ಲಿ 30 ಜನ ಮತದಾರರ ವಿವರ ಇರುತ್ತದೆ ಎಂದರು.

ಜನಸಂಘದಿಂದ ಬಿಜೆಪಿ ಆದ ಮೇಲೆ ಹಿಂದುತ್ವದ ಮೇಲೆ ಚುನಾವಣೆ ಎದುರಿಸುತ್ತಾ ಬಂದಿದ್ದೆವೆ. ಕಾಂಗ್ರೆಸ್ ಹಿಂದೂಗಳ ವಿರೋಧವಾಗಿ 1951 ರಿಂದ ನಡೆಸಿಕೊಂಡು ಬಂದಿದೆ. 1993 ರಲ್ಲಿ ಹಿಂದೂ ಹಿತರಕ್ಷರಿಗೆ ಮತ‌ನೀಡಿ ಅಂತಾ ಹೇಳಿದ್ವಿ ಅದು ಯಶಸ್ವಿಯಾಗಿದೆ ಎಂದರು.

ವೈಚಾರಿಕತೆಯ ನೆಲಗಟ್ಟು ಶಿವಮೊಗ್ಗದಲ್ಲಿ ಬದಲಾವಣೆಯಾಗಿದೆ. ವೈಚಾರಿಕತೆ ಭದ್ರ ಮಾಡುವ ಸಂಗತಿಗಳನ್ನ‌ ಮಾಡುತ್ತಾ ಬಂದಿದ್ದೇವೆ. ಬಿಜೆಪಿಗೆ ಭಯ ಇಲ್ಲದ ಸಂದರ್ಭಗಳು ಒದಗಿ ಬಂದಿಲ್ಲ ಎಂದರು.ಈ  ಹಿಂದೆ ಶಿವಮೊಗ್ಗದಲ್ಲಿ 95 ಸಾವಿರ ಮತ ಪಡೆದಿದ್ದೇವೆ. 1,10,700 ಮತವನ್ನ ಕಳೆದ ಲೋಕಸಭೆಯಲ್ಲಿ ಪಡೆದಿದ್ದೇವೆ.  ಇದೀಗ 1,50,000 ಲಕ್ಷ ಮತವನ್ನ ನಗರದಲ್ಲಿ ಪಡೆಯುವ ಕಾರ್ಯ ನಡೆಯುತ್ತಿದೆ ಎಂದರು.

  ಮೋದಿಯವರು ಹೇಳಿದ ಹಾಗೆ  ಪೇಜ್ ಗೆದ್ದರೆ ದೇಶ ಗೆಲ್ಲಲಿದೆ ಎಂಬ ಘೋಷಾವಾಕ್ಯದಿಂದ ಹೊರಟಿದ್ದೇವೆ. ಮೊದಲು ಬೂತ್ ಗೆದ್ದರೆ ದೇಶ ಗೆದ್ದಂತೆ ಎಂಬ ಘೋಷವಾಕ್ಯವಿತ್ತು. ಈಗ ಬದಲಾಯಿಸಿಕೊಢಿದ್ದೇವೆ ಎಂದರು.

370 ಸ್ಥಾನ ಬಿಜೆಪಿ ಎನ್ ಡಿಎ 400 ಗಡಿ ದಾಟುವ ಗುರಿಹೊಂದಿದ್ದೇವೆ. ಬೂತ್ ಮತ್ತು ಪೇಜ್ ಕಾರ್ಯಕರ್ತರೊಂದಿಗೆ ಸೇರುತ್ತಿದ್ದೇವೆ. ಬಿಜೆಪಿ ಮತ್ತು ಜೆಡಿಎಸ್ ಜೊತೆ ಸಭೆ ನಡೆಸಲು ಯೋಚಿಸಲಾಗುತ್ತಿದೆ.  ಕಾರ್ಯಕ್ರಮದಲ್ಲಿ ಜೆಡಿಎಸ್ ಪ್ರಮುಖರು ಬರಲಿದ್ದಾರೆ ಎಂದರು.

ಚುನಾವಣೆಯ ನಂತರ ವಿಜೇಂದ್ರ ರಾಜ್ಯಾಧ್ಯಕ್ಷರು ರಾಜೀನಾಮೆ ನೀಡುವ ಪರಿಸ್ಥಿತಿ ನಿರ್ಮಾಣವಾಗೊಲ್ಲ. ಕಾಂಗ್ರೆಸ್ ಧೂಳಿಪಟವಾಗಲಿದೆ ಎಂದರು. 6 ಜನ ಮಾಜಿ ಕಾರ್ಪರೇಟರ್ ಈಸ್ವರಪ್ಪನವರ ಜೊತೆ ಇದ್ದಾರೆ. ಈಶ್ವರಪ್ಪ ಎಷ್ಟು ಮತ ಪಡೆಯಲಿದ್ದಾರೆ ಎಂಬುನ್ನ ನಾವು ಹೇಳಲು ಸಾಧ್ಯವಿಲ್ಲ.

ಈಶ್ವರಪ್ಪನವರು ಗೆದ್ದು ಮೋದಿ ಕೈ ಜೋಡಿಸುವುದಾಗಿ ಈಶ್ವರಪ್ಪನವರು ಹೇಳಿದ್ದಾರೆ. ಅದು ಸಾಧ್ಯನಾ? ಗುರಿ 370 ಬಿಜೆಪಿಯವರದ್ದು. ನಾವು ಮತಯಾಚಿಸುವುದಕ್ಕಿಂತ ಮೋದಿಯವರು ಜನಮನದಲ್ಲಿ ನೆಲೆವೂರಿದ್ದಾರೆ. ಹಾಗಾಗಿ ಬಿಜೆಪಿಯ ರಾಘವೇಂದ್ರ ಗೆಲ್ಲಲಿದ್ದಾರೆ. ಮುಂದಿನ ದಿನಗಳಲ್ಲಿ ಮೋದಿ ಫೋಟೊ ಸಹ ಬಳುವುದು ಬದಲಾಗುತ್ತದೆ.ಈ ಬಾರಿ ಲೋಕಸಭಾ ಚುನಾವಣೆಯಲ್ಲಿ   370 ಸ್ಥಾನ ಬಿಜೆಪಿ ಗೆಲ್ಲಲಿದೆ. 400 ಕ್ಕೂ ಹೆಚ್ಚು ಸ್ಥಾನಗಳನ್ನು NDA ಪಡೆಯಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ, ಬಿಜೆಪಿಯ ನಗರ ಅಧ್ಯಕ್ಷ ಮೋಹನ್ ರೆಡ್ಡಿ, ಜ್ಞಾನೇಶ್ವರ್, ಮಾಧ್ಯಮ ವಿಭಾಗದ ಅಣ್ಣಪ್ಪ, ಚಂದ್ರಶೇಖರ್,ಶ್ರೀ ನಾಗ್ ಮೊದಲಾದವರು ಉಪಸ್ಥಿತರಿದ್ದರು.


ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.