ಶಿವಮೊಗ್ಗ ಎ ವಿಭಾಗದ dysp ಆಗಿ ಬಾಬು ಆಂಜನಪ್ಪ ನೇಮಕ

ಶಿವಮೊಗ್ಗ:  ಬಾಲರಾಜ್ ಅವರ ಸ್ಥಾನಕ್ಕೆ dysp ಆಗಿ ಶಿವಮೊಗ್ಗ ಉಪವಿಭಾಗ-ಎ ಭಾಗಕ್ಕೆ ಬಾಬು ಆಂಜನಪ್ಪ ಅವರನ್ನ  ವರ್ಗಾವಣೆ ಮಾಡಿ ಸರ್ಕಾರ ಮರು ಆದೇಶಿಸಿದೆ. ಬಾಲರಾಜ್ ಅವರನ್ನ ಬಿಟ್ ಕಾಯಿನ್ ಪ್ರಕರಣದ ವಿಶೇಷ ಅಧಿಕಾರಿಯನ್ನಾಗಿ ನೇಮಿಸಿ ಈಗಾಗಲೇ ಶಿವಮೊಗ್ಗದಿಂದ ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿದೆ.

ಕೆಲವು ದಿನದ ಹಿಂದೇ ಬಾಲರಾಜ್ ರವರ ಜಾಗಕ್ಕೆ ಕರ್ನಾಟಕ ಲೋಕಾಯುಕ್ತದಲ್ಲಿ ಕಾರ್ಯನಿರ್ವಹಿಸುತ್ತಿದ್ದ  ಡಿವೈಎಸ್ಪಿ ತಿರುಮಲೇಶ್ ರವರನ್ನು ಶಿವಮೊಗ್ಗ ಎ ಉಪವಿಭಾಗಕ್ಕೆ ನೇಮಿಸಲಾಗಿತ್ತು.ಇದೀಗ ಸರ್ಕಾರ ಮರು ಆದೇಶ ಮಾಡಿ ಅವರನ್ನು  ಕರ್ನಾಟಕ ಲೋಕಾಯುಕ್ತದಲ್ಲೀಯೇ ಮುಂದುವರಿಸಿ ಮರು ಆದೇಶ ಮಾಡಿದೆ.
Dysp ತಿರುಮಲೇಶ್ ರವರು  ಭದ್ರಾವತಿಯಲ್ಲಿರುವಾಗಲೇ ಇವರ ವಿರುದ್ಧ ಆರೋಪಗಳು ಕೇಳಿಬಂದು ಅಮಾನತ್ತಾಗಿದ್ದರು. 

ಶಿವಮೊಗ್ಗ ಉಪವಿಭಾಗ-ಎ ಭಾಗಕ್ಕೆ ರಾಜ್ಯಗುಪ್ತ ದಳದಲ್ಲಿ ಕಾರ್ಯನಿರ್ವಹಿಸುತ್ತಿರುವ dysp ಬಾಬು ಆಂಜನಪ್ಪರವರು ಬರಲಿದ್ದಾರೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.