ಶಿವಮೊಗ್ಗದ ಖ್ಯಾತ ವಕೀಲ ಮತ್ತು ಕಾಂಗ್ರೆಸ್ ಮುಖಂಡ ನಯಾಜ್ ಅಹಮ್ಮದ್ ಅವರಿಗೆ ಸೂಡಾ ಅದ್ಯಕ್ಷ ಸ್ಥಾನ!!

ಶಿವಮೊಗ್ಗ-ಭದ್ರಾವತಿಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷಗಿರಿಯ ಸ್ಥಾನ ಶಿವಮೊಗ್ಗ ಖ್ಯಾತ ವಕೀಲ ಮತ್ತು ಕಾಂಗ್ರೆಸ್ ಮುಖಂಡರಾದ ನಯಾಜ್ ಅಹಮ್ಮದ್ ಅವರಿಗೆ ಸಿಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

 ಈ ಬಾರಿ ಮುಸ್ಲೀಂ ಸಮುದಾಯಕ್ಕೆ ಸೂಡಾ ಅದ್ಯಕ್ಷ ಸ್ಥಾನ ಎಂದು ಕಾಂಗ್ರೆಸ್ ವಲಯದ ಆಪ್ತ ಮೂಲಗಳಿಂದ  ಕೇಳಿಬರುತ್ತಿದೆ.

 ಈ ಹಿನ್ನಲೆಯಲ್ಲಿ ಈ ಬಾರಿ ವಕೀಲ ಹಾಗೂ ಕಾಂಗ್ರೆಸ್ ಮುಖಂಡರಾದ ನಯಾಜ್ ಅಹಮ್ಮದ್ ಅಧ್ಯಕ್ಷರಾಗಿ ನೇಮಕಗೊಳ್ಳಲಿದ್ದಾರೆ ಎಂಬ ಚರ್ಚೆ ಸಾರ್ವಜನಿಕವಾಗಿ ಚರ್ಚಿತವಾಗುತ್ತಿರುವ ವಿಷಯವಾಗಿದೆ.

  ಹಲವು ತಿಂಗಳಿಂದ ನಿಗಮ ಮಂಡಳಿ ಮತ್ತು ಬೋರ್ಡ್ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಯುತ್ತಿದ್ದು,ಕಾಂಗ್ರೆಸ್ ಮುಖಂಡ ಮರಿಯಪ್ಪ, ಮತ್ತಿತರರು ಸ್ಥಾನ ಪಡೆಯಲು ಕಾಂಗ್ರೆಸ್ ಪಕ್ಷದಲ್ಲಿ ತೀವ್ರ ಪೈಪೋಟಿ ಹೆಚ್ಚಾಗಿದೆ ಎಂಬ ಮಾತು ಕೇಳಿ ಬರುತ್ತಿದೆ.

ನಿಗಮ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಅಲ್ಪಸಂಖ್ಯಾತರನ್ನ ನೇಮಿಸಬೇಕೆಂಬ ಕೂಗು ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಮುಖಂಡರಿಂದ ವ್ಯಕ್ತವಾಗಿದ

  ಸೂಡಾ ಅದ್ಯಕ್ಷ ಸ್ಥಾನಕ್ಕೆ ಈವರೆಗೆ ಹಲವು ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರ ಹೆಸರು ಕೇಳಿ ಬಂದಿದೆ, ಈ ನಡುವೆ ಅಡ್ವೊಕೇಟ್ ನಯಾಜ್ ಅಹಮದ್ ಮತ್ತು ಮರಿಯಪ್ಪ ಹೆಸರು ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ  ಪಕ್ಷದ ವಲಯದಿಂದ ಕೇಳಿ ಬಂದಿದೆ.

ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಕೀಲ ನಯಾಜ್ ಅಹಮದ್ ಅವರ ಹೆಸರು ಕಾಂಗ್ರೆಸ್ ಹೈಕಮಾಂಡ್ ಕೈ ತಲುಪಿದೆ ಎನ್ನಲಾಗಿದೆ.  

ವಕೀಲ ನಯಾಜ್ ಅಹಮ್ಮದ್ ಅವರಿಗೆ ಬಹುತೇಕ ಶಿವಮೊಗ್ಗ ಸೂಡಾ ಅದ್ಯಕ್ಷ ಸ್ಥಾನ ಒಲಿದು ಬರುವ ಸಾದ್ಯತೆ ಇದೆ.ಕಾಂಗ್ರೆಸ್ ಮುಖಂಡ ಮರಿಯಪ್ಪ ಕೂಡ ರೇಸ್‌ನಲ್ಲಿ ಇದ್ದಾರೆ. ಮುಂದೇನಾಗುವುದು ಕಾದು ನೋಡಬೇಕಿದೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.