ಶಿವಮೊಗ್ಗದಲ್ಲಿ ಬೆಳ್ಳಂಬೆಳಿಗ್ಗೆ ಕರಡಿ ಪ್ರತ್ಯಕ್ಷ: ವ್ಯಕ್ತಿ ಮೇಲೆ ಕರಡಿ ದಾಳಿ

ಶಿವಮೊಗ್ಗ ನಗರದ ಗೋಪಾಲಗೌಡ ಬಡಾವಣೆಯಲ್ಲಿ  ಇವತ್ತು ಬೆಳಗ್ಗೆ ಕರಡಿಯೊಂದು ಕಾಣಿಸಿಕೊಂಡಿತ್ತು. ಇದು ಆತಂಕಕ್ಕೂ ಕಾರಣವಾಗಿತ್ತು. ನಾಯಿಗಳು ಕರಡಿಯನ್ನು ನೋಡಿ ಬೋಗಳಿ ಓಡಾಡಿಸಿತ್ತಿದ್ದವು.. ಈ ನಡುವೆ ಹೆದರಿದ ಕರಡಿಯು ವಾಕಿಂಗ್​ ಮಾಡುತ್ತಿದ್ದ ತುಕಾರಾಂ ಶೆಟ್ಟಿ ಎಂಬವರ ಮೇಲೆ ದಾಳಿ ಮಾಡಿದೆ. ಸ್ವಲ್ಪದರಲ್ಲಿಯೇ ಪಾರಾದ ತುಕಾರಾಂ ಶೆಟ್ಟಿ  ರವರಿಗೆ ಹೊಟ್ಟೆ ಮೇಲೆ ಕರಡಿ ಪರಚಿದ ಗಾಯವಾಗಿದೆ. ಈ ಬಳಿಕ ವಿಷಯ ತಿಳಿದು ಸ್ಥಳೀಯ ಜನರು ಮತ್ತು ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಆಗಮಿಸಿದರು, ಸಿಬ್ಬಂದಿ ಆಪರೇಷನ್​ ಬಲೆಯ ಜೊತೆಗೆ ಬಂದು ಕರಡಿ ಹಿಡಿಯಲು  ಆರಂಭಿಸಿದರು. ಕರಡಿ ಓಡಾಟವಿರುವ ಜಾಗದ ಸುತ್ತ ನಿರ್ಬಂಧ ಹೇರಿ ಜನ ಸಂಚಾರ ತಡೆದರು. ಈ ನಡುವೆ ಕರಡಿಯು ಹೆದರಿಕೊಂಡು ಪೊದೆಯೊಂದರಲ್ಲಿ ಅಡಗಿ ಕುಳಿತಿತ್ತು. 

ಆಪರೇಷನ್ ಕರಡಿ ಆರಂಭಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಪೊದೆಯ ಸುತ್ತಲು ಬಲೆ ಬಳಸಿ ಬೇಲಿ ಮಾಡಿದ್ರು. ಆನಂತರ ಮೇಲಿಂದ ಕರಡಿ ಡಾರ್ಟ್ ಮಾಡಿ ಪ್ರಜ್ಞೆ ತಪ್ಪಿಸಲಾಯ್ತು. ಬಳಿಕ ಅದನ್ನ ಬೋನಿಗೆ ಶಿಫ್ಟ್ ಮಾಡಿ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹದಾಮಕ್ಕೆ ಕೊಂಡೊಯ್ಯಲಾಗಿದೆ. 

ಸುಮಾರು ಆರೇಳು ವರ್ಷ ಇರಬಹುದಾದ ಕರಡಿ ಎಲ್ಲಿಂದ ಬಂದಿದೆ ಎಂಬುದು ತಿಳಿದುಬಂದಿಲ್ಲ. ಅರಣ್ಯ ಅಧಿಕಾರಿಗಳು ಸಹ ಊಹೆ ಮಾಡುತ್ತಿದ್ದು, ಈ ಬಗ್ಗೆ ಪರಿಶೀಲನೆ ನಡೆಸ್ತಿದ್ದಾರೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.