ಶಿವಮೊಗ್ಗ ಪೊಲೀಸರ ವಿಶೇಷ ಕಾರ್ಯಾಚರಣೆ:ವಶ ಪಡಿಸಿಕೊಳ್ಳಲಾದ ಅರ್ಧ ಹೆಲ್ಮೆಟ್ ಮತ್ತು ದೋಷಪೂರಿತ ಸೈಲೆನ್ಸರ್ ಬುಲ್ಡೋಜರ್ ಹೊಡೆದು ನಾಶ
ಶಿವಮೊಗ್ಗ ನಗರದಲ್ಲಿ ಈ ಹಿಂದೆ *ವಿಶೇಷ ಕಾರ್ಯಾಚರಣೆ* ನೆಡೆಸಿ ವಶ ಪಡಿಸಿಕೊಳ್ಳಲಾದ *3000 ಅರ್ಧ ಹೆಲ್ಮೆಟ್* (Half Helmet ) ಮತ್ತು *75 ದೋಷಪೂರಿತ ಸೈಲೆನ್ಸರ್* (Defective Silencer) ಗಳನ್ನು ಈ ದಿನ ದಿನಾಂಕಃ-01-02-2024 ರ ಸಂಜೆ *ಶ್ರೀ ಮಿಥುನ್ ಕುಮಾರ್ ಜಿ.ಕೆ . ಐ.ಪಿ.ಎಸ್,* ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ರವರ ಸಮ್ಮುಖದಲ್ಲಿ *ಶಿವಮೊಗ್ಗ ನಗರದ ಗೋಪಿ ವೃತ್ತ* ದಲ್ಲಿ ಬುಲ್ಡೋಜರ್ ಅನ್ನು ಬಳಸಿ ನಾಶ ಪಡಿಸಲಾಯಿತು.
ಈ ಸಂದರ್ಭದಲ್ಲಿ *ಶ್ರೀ ಅನಿಲ್ ಕುಮಾರ್ ಭೂಮರೆಡ್ಡಿ,* ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ., *ಶ್ರೀ ಸುರೇಶ್ ಎಂ*, ಪೊಲೀಸ್ ಉಪಾಧೀಕ್ಷಕರು, ಶಿವಮೊಗ್ಗ –ಬಿ ಉಪ ವಿಭಾಗ,*ಶ್ರೀ ಸಂತೋಷ ಕುಮಾರ್* ಪೊಲೀಸ್ ವೃತ್ತ ನಿರೀಕ್ಷಕರು, ಶಿವಮೊಗ್ಗ ಸಂಚಾರಿ ವೃತ್ತ ಮತ್ತು ಪಿಎಸ್ ಐ ತಿರುಮಲೇಶ್ ಮತ್ತು ಪಿಎಸ್ಐ ಶಿವಣ್ಣನವರ್ ಹಾಗೂ ಸಿಬ್ಬಂಧಿಗಳು ಉಪಸ್ಥಿತರಿದ್ದರು.
Leave a Comment