ಫೆ.4 ರಂದು ಮಾತೃವಾತ್ಸಲ್ಯ-ಮದರ್ & ಬೇಬಿಕೇರ್ ಆಸ್ಪತ್ರೆಯ ಉದ್ಘಾಟನೆ
ಶಿವಮೊಗ್ಗ: ಮಾತೃವಾತ್ಸಲ್ಯ-ಮದರ್ & ಬೇಬಿಕೇರ್ ಆಸ್ಪತ್ರೆಯು ಶಿವಮೊಗ್ಗದಲ್ಲಿ ಫೆ.4 ರಂದು ಭಾನುವಾರದಂದು ಪ್ರಾರಂಭಗೊಳ್ಳಲಿದೆ. ಶಿಕ್ಷಣ ಸಚಿವ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಮಧುಬಂಗಾರಪ್ಪ ಉದ್ಘಾಟನೆ ಮಾಡಲಿದ್ದಾರೆ ಎಂದು ನಿರ್ದೇಶಕರಾದ.ಡಾ| ಪೃಥ್ವಿ ಬಿ. ಸಿ., ಹೇಳಿದರು.ಉದ್ಘಾಟನೆ ಸಂದರ್ಬದಲ್ಲಿ ಹಲವಾರು ಗಣ್ಯರು ಶಾಸಕರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಮಾಜಿ ಮುಖ್ಯಮಂತ್ರಿ ಗಳಾದ ಕೆ.ಎಸ್.ಈಶ್ವರಪ್ಪ ವಹಿಸಲಿದ್ದಾರೆ ಎಂದರು.ಆಸ್ಪತ್ರೆಯಲ್ಲಿ ದೊರೆಯುವ ಸೌಲಭ್ಯಗಳು :
ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ 24 ಗಂಟೆಗಳ ತುರ್ತು ಸೇವೆ ಲಭ್ಯವಿದೆ, ಮಕ್ಕಳ ತೀವ್ರ ನಿಗಾ ಘಟಕ (NICU, PICU), ನಾರ್ಮಲ್ ಡೆಲಿವರಿ, ಸಿಸೇರಿಯನ್ ಡೆಲಿವರಿ, ಗರ್ಭಿಣಿಯರ ಆರೈಕೆ, ನೋವುರಹಿತ ಡೆಲಿವರಿ ಹಾಗೂ ಸುಸಜ್ಜಿತ ಆಪರೇಷನ್ ಥಿಯೇಟರ್, ಲೇಬರ್ ಥಿಯೇಟರ್, ಮಕ್ಕಳ ಶಸ್ತ್ರಚಿಕಿತ್ಸೆ, ಲ್ಯಾಪ್ರೋಸ್ಕೋಪಿಕ್ ಸರ್ಜರಿ, ವ್ಯಾಕ್ಸಿನೇಷನ್ ವ್ಯವಸ್ಥೆ, ಸೂಟ್ ಡೆಲಿವರಿ ವ್ಯವಸ್ಥೆ, ಡಿಲಕ್ಸ್ ಮತ್ತು ಸ್ಪೆಷಲ್ ವಾರ್ಡ್‌ಗಳ ವ್ಯವಸ್ಥೆ ಇರುತ್ತದೆ.
ಉದ್ಘಾಟನೆ ದಿನದಿಂದ ಉಚಿತ OPD ಇರುತ್ತದೆ. ನುರಿತ ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞರ, ಮಕ್ಕಳ ವೈದ್ಯರ ತಂಡ ಲಭ್ಯವಿರುತ್ತದೆ.
ಈ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಉಪಮುಖ್ಯಮಂತ್ರಿಗಳಾದ ಶ್ರೀ ಕೆ. ಎಸ್. ಈಶ್ವರಪ್ಪನವರು, ನಿರ್ದೇಶಕರುಗಳಾದ ಶ್ರೀ ಕೆ. ಈ ಕಾಂತೇಶ್, ಡಾ|| ಲಕ್ಷ್ಮೀನಾರಾಯಣ ಆಚಾರ್, ಡಾ|| ತೇಜಸ್ವಿ ಟಿ. ಎಸ್., ಡಾ| ವಾಮನ್ ಶಾನಭಾಗ್ ಹಾಗೂ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾದ ಡಾ. ಸುಮ ಕೆ. ಎಂ., ಡಾ. ನಾಗಮಣಿ ಎಂ. ಸಿ., ಮಕ್ಕಳ ತಜ್ಞರಾದ ಡಾ. ವೆಂಕಟೇಶಮೂರ್ತಿ, ಡಾ. ಶ್ವೇತಾ ಇವರುಗಳು ಉಪಸ್ಥಿತರಿದ್ದರು.
Leave a Comment